ಪೊನ್ನಣ್ಣ ನಮ್ಮ ಆಸ್ತಿ. ಅವರು ನಮಗೆ ಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಭೇಟಿ ಮಾಡಿದ ಯುನೈಟೆಡ್ ಕೊಡವ ಆರ್ಗನೈಸೇಷನ್ -ಯುಕೊ ನಿಯೋಗದ ಜೊತೆ ತಿಳಿಸಿದ್ದಾರೆ.
ಮಡಿಕೇರಿ: ಪೊನ್ನಣ್ಣ ನಮ್ಮ ಆಸ್ತಿ. ಅವರು ನಮಗೆ ಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನು ಭೇಟಿ ಮಾಡಿದ ಯುನೈಟೆಡ್ ಕೊಡವ ಆರ್ಗನೈಸೇಷನ್ -ಯುಕೊ ನಿಯೋಗದ ಜೊತೆ ತಿಳಿಸಿದ್ದಾರೆ.ಯುನೈಟೆಡ್ ಕೊಡವ ಆರ್ಗನೈಸೇಷನ್- ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದ ನಿಯೋಗ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಮನವಿ ಸಲ್ಲಿಸಿತು. ಪೊನ್ನಣ್ಣಗೆ ಮಂತ್ರಿ ಸ್ಥಾನದ ಕುರಿತು ಮಂಜು ಚಿಣ್ಣಪ್ಪ ಒತ್ತಾಯ ಮಾಡಿದಾಗ ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತು ಒಲವಿದೆ ಅವರು ಮಂತ್ರಿಯಾದರೆ ನಿಮ್ಮಷ್ಟೇ ನನಗೂ ಸಂತೋಷವಾಗುತ್ತದೆ ಎಂದು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.ನಿಯೋಗದಲ್ಲಿ ಅಪ್ಪಾರಂಡ ವೇಣು ಪೊನ್ನಪ್ಪ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಚೊಟ್ಟೆಯಂಡ ಸಂಜು ಕಾವೇರಪ್ಪ, ಮಚ್ಚಾಮಾಡ ರಮೇಶ್, ತೀತಿಮಾಡ ಬೋಸ್ ಅಯ್ಯಪ್ಪ, ಬಾದುಮಂಡ ವಿಷ್ಣು ಕಾರ್ಯಪ್ಪ, ಕೊಟ್ಟಂಗಡ ಮೊಣ್ಣಪ್ಪ, ಮಲ್ಲಮಾಡ ದೇವಯ್ಯ, ಅರೆಯಡ ಲೋಕೇಶ್, ಕಳ್ಳಿಚಂಡ ದೀನ ಉತ್ತಪ್ಪ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪಾಂಡಂಡ ಸ್ವಾತಿ ಗಣಪತಿ, ಕಳ್ಳಿಚಂಡ ತನ್ವಿ ಉತ್ತಪ್ಪ, ಬಿದ್ದಂಡ ಜ್ಯೋತಿ ನವೀನ್ ಉಪಸ್ಥಿತರಿದ್ದರು.