ಪ್ರತ್ಯೇಕ ಹಾಲಿನ ಕೇಂದ್ರ ತೆರೆಯಲು ಆಗ್ರಹ

| Published : Aug 26 2024, 01:42 AM IST

ಸಾರಾಂಶ

ಸಮಯಕ್ಕೆ ಸರಿಯಾಗಿ ರೈತರಿಗೆ ಹಾಲಿನ ಹಣ ನೀಡುತ್ತಿಲ್ಲ ಆದ್ದರಿಂದ ಪ್ರತ್ಯೇಕ ಹಾಲಿನ ಕೇಂದ್ರಕ್ಕೆ ನೀಡುವಂತೆ ಒತ್ತಾಯಿಸಿ ತಿಮ್ಮನಹಳ್ಳಿ ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ

ಸಮಯಕ್ಕೆ ಸರಿಯಾಗಿ ರೈತರಿಗೆ ಹಾಲಿನ ಹಣ ನೀಡುತ್ತಿಲ್ಲ ಆದ್ದರಿಂದ ಪ್ರತ್ಯೇಕ ಹಾಲಿನ ಕೇಂದ್ರಕ್ಕೆ ನೀಡುವಂತೆ ಒತ್ತಾಯಿಸಿ ತಿಮ್ಮನಹಳ್ಳಿ ರೈತರು ಪ್ರತಿಭಟನೆ ನಡೆಸಿದರು. ಹೋಬಳಿಯ ಚಿಕ್ಕಾವಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ತಿಮ್ಮನಹಳ್ಳಿ ಗ್ರಾಮದಲ್ಲಿ ೩೦ ಹೆಚ್ಚು ರೈತರು ಪ್ರತಿ ದಿನ ೨೫೦ ಲೀ. ಹಾಲು ಹಾಕುತ್ತಾರೆ. ಸುಮಾರು ಒಂದುವರೆ ತಿಂಗಳಿಂದ ರೈತರಿಗೆ ಹಾಲಿನ ಹಣವನ್ನ ನೀಡಿಲ್ಲ ಎಂದು ರೈತರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಎತಿಮ್ಮನಹಳ್ಳಿ ಗ್ರಾಮಕ್ಕೆ ಪ್ರತ್ಯೇಕ ಹಾಲಿನ ಕೇಂದ್ರ ನೀಡಬೇಕು ಎಂದು ಒತ್ತಾಯಿಸಿದರು.ರೈತ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಮೊದಲು ತುಂಬಗಾನಹಳ್ಳಿ ಗ್ರಾಮಕ್ಕೆ ನಾವು ಹಾಲು ಹಾಕಲಾಗುತ್ತಿದ್ದೇವು. ಅಲ್ಲಿಂದ ಚಿಕ್ಕಾವಳ್ಳಿ ಗ್ರಾಮಕ್ಕೆ ನಮ್ಮ ಷೇರ್‌ಗಳನ್ನ ವರ್ಗಾವಣೆ ಮಾಡಲಾಗಿತ್ತು. ಅದರೆ ನಮಗೆ ಚಿಕ್ಕಾವಳ್ಳಿ ಗ್ರಾಮಕ್ಕೆ ಹೋಗಿ ಹಾಲಿನ ಹಣ ಹಾಗೂ ಫೀಡ್ ತರಲು ಆಗುತ್ತಿಲ್ಲ. ನಮಗೆ ತೊಂದರೆ ಉಂಟಾಗುತ್ತಿದೆ. ನಮ್ಮ ಗ್ರಾಮಕ್ಕೆ ಪ್ರತ್ಯೇಕ ಹಾಲಿನ ಕೇಂದ್ರವನ್ನ ಮಂಜೂರು ಮಾಡಿಕೊಟ್ಟರೇ ಮಾತ್ರ ಈ ಸಮಸ್ಯೆ ಬಗೆ ಹರಿಯುತ್ತದೆ ಎಂದು ತಿಳಿಸಿದರು.ರೈತ ಮುಖಂಡ ನರಸಿಂಹಮೂರ್ತಿ ಮಾತನಾಡಿ, ಚಿಕ್ಕಾವಳ್ಳಿ ಗ್ರಾಮದಲ್ಲಿರುವ ಹಾಲಿನ ಕೇಂದ್ರಕ್ಕೆ ಹಾಲು ಹಾಕಲಾಗುತ್ತಿದ್ದು, ಸುಮಾರು ಒಂದೂವರೆ ತಿಂಗಳಿಂದ ಹಾಲಿನ ಹಣ ನೀಡಿಲ್ಲ. ಜೀವನ ನಡೆಸಲು ಕಷ್ಟವಾಗುತ್ತಿದ್ದು, ಒಂದು ವಾರಕ್ಕೆ ನೀಡಬೇಕಿದ್ದು ಹಾಲಿನ ಹಣ ಒಂದೂವರೆ ತಿಂಗಳಿಂದ ನೀಡಿಲ್ಲ. ಕೇಳಿದರೆ ನಾಳೆ ಕೊಡುತ್ತೀವಿ ನಾಡಿದ್ದು ಕೊಡ್ತೀವಿ ಅಂತ ಸಬೂಬು ಹೇಳಿ ಕಳಿಸ್ತಾರೆ ಎಂದರು.ಮುಖಂಡರಾದ ಶ್ರೀನಿವಾಸ್‌ಯಾದವ್, ನರಸಿಂಹರಾಜು, ದುರ್ಗಾಪ್ಪ, ನಾಗಲಿಂಗಯ್ಯ, ನರಸಿಂಹಮೂರ್ತಿ, ಕೃಷ್ಣಪ್ಪ, ಅನೀಷಮ್ಮ, ಲಕ್ಷ್ಮೀದೇವಮ್ಮ, ಜಯಮ್ಮ, ಭಾಗ್ಯಮ್ಮ ಹಾಜರಿದ್ದರು.