ಕೆರೆ ಸುತ್ತಲ ಗ್ರಾಮಗಳ ರೈತರಿಗೆ ನೀರು ಬಳಕೆಗೆ ಅವಕಾಶ ಕೊಡುತ್ತಿಲ್ಲ.ಇದಲ್ಲದೆ ಮೂಲ ಆದೇಶದ ಷರತ್ ಉಲ್ಲಂಘಿಸಿ, 15 ಎಕರೆ ಕೆರೆ ಮುಚ್ಚಲಾಗಿದೆ
ಕೊಪ್ಪಳ: ಬಸಾಪುರ ಕೆರೆಯಲ್ಲಿ ಜನ ಜಾನುವಾರುಗಳಿಗೆ ಮುಕ್ತಗೊಳಿಸಲು ಒತ್ತಾಯಿಸಿ ನಡೆದಿರುವ ಹೋರಾಟ 31ನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ರೈತ ಸಂಘ (AIUKS)ದ ನೇತೃತ್ವದಲ್ಲಿ ನಡೆಯುತ್ತಿದೆ.
ಕರ್ನಾಟಕ ರೈತ ಸಂಘ AIUKS ರಾಜ್ಯ ಮುಖಂಡ ಡಿ.ಎಚ್. ಪೂಜಾರ ಮಾತನಾಡಿ, ಹೈ ಕೋರ್ಟ್ ಆದೇಶದ ಪ್ರಕಾರ ಬಸಾಪುರ ಕೆರೆ ಜನ ಜಾನುವಾರುಗಳಿಗೆ ಮುಕ್ತವಾಗಿಡಬೇಕು. ಜಿಲ್ಲಾಧಿಕಾರಿಗಳು ಬಲ್ಡೋಟ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. MSPL ಬಲ್ಡೋಟ ಕಂಪನಿ ಹೈಕೋರ್ಟ್ ಆದೇಶ ಉಲ್ಲಂಘಿಸಿದೆ.ಕೆರೆ ಸುತ್ತಲ ಗ್ರಾಮಗಳ ರೈತರಿಗೆ ನೀರು ಬಳಕೆಗೆ ಅವಕಾಶ ಕೊಡುತ್ತಿಲ್ಲ.ಇದಲ್ಲದೆ ಮೂಲ ಆದೇಶದ ಷರತ್ ಉಲ್ಲಂಘಿಸಿ, 15 ಎಕರೆ ಕೆರೆ ಮುಚ್ಚಲಾಗಿದೆ.ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತ ಸುತ್ತಲ ಗ್ರಾಮಗಳ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ ರಾಜ್ಯರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, CPI(ML) ಮಾಸ್ ಲೈನ್ ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್, AIUKS ನ ಜಿಲ್ಲಾಧ್ಯಕ್ಷ ದೇವಪ್ಪ ಕಂಬಳಿ, ಕಾರ್ಯಾಧ್ಯಕ್ಷ ಮಲ್ಲೇಶ ಗೌಡ,ನಿರುಪಾದಿ ಬುನ್ನಟ್ಟಿ,ಯಮನೂರಪ್ಪ ಬಸಾಪುರ, ಶ್ಯಾಮಿದ್ ಸಾಬ್, ದ್ಯಾವಮ್ಮ, ಇತರರು ಭಾಗವಹಿಸಿದ್ದರು.