ಮೂಲ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

| Published : Mar 12 2024, 02:03 AM IST

ಮೂಲ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆಯ ಮುಂಭಾಗದಲ್ಲಿ ಜಾಮಿಯಿಸಿದ್ದ ವಿದ್ಯಾರ್ಥಿಗಳು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಅಧೀಕ್ಷಕರು ಹಾಗೂ ಮೈಸೂರು ವಿವಿ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಕುಡಿಯುವ ನೀರಿಗಾಗಿ ವಿಭಾಗದ ಅಧೀಕ್ಷಕರನ್ನು ಕೇಳಿದರೆ ವಿದ್ಯಾರ್ಥಿ ವಿರುದ್ಧ ಏಕವಚನದಲ್ಲಿ ಮಾತನಾಡಿದಲ್ಲದೆ, ನೀರು ಬೇಕಾದರೇ ಕೊಳಚೆ ನೀರನ್ನು ಕುಡಿಯಿರಿ ಎಂದು ಹೇಳಿದ್ದು, ಹಾಗೇ ನಿಮ್ಮ ಹಣದಲ್ಲಿ ತಂದು‌ ಕುಡಿಯಿರಿ, ಇದು ನನ್ನ ಕೆಲಸವಲ್ಲ ಎಂದು ಪಲಾಯನದ ಮಾತುಗಳನ್ನಾಡಿ‌ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಮೈಸೂರು ವಿವಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಗುರುವಾರ ಪ್ರತಿಭಟಿಸಿದರು.

ಸಂಸ್ಥೆಯ ಮುಂಭಾಗದಲ್ಲಿ ಜಾಮಿಯಿಸಿದ್ದ ವಿದ್ಯಾರ್ಥಿಗಳು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು, ಅಧೀಕ್ಷಕರು ಹಾಗೂ ಮೈಸೂರು ವಿವಿ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಕುಡಿಯುವ ನೀರಿಗಾಗಿ ವಿಭಾಗದ ಅಧೀಕ್ಷಕರನ್ನು ಕೇಳಿದರೆ ವಿದ್ಯಾರ್ಥಿ ವಿರುದ್ಧ ಏಕವಚನದಲ್ಲಿ ಮಾತನಾಡಿದಲ್ಲದೆ, ನೀರು ಬೇಕಾದರೇ ಕೊಳಚೆ ನೀರನ್ನು ಕುಡಿಯಿರಿ ಎಂದು ಹೇಳಿದ್ದು, ಹಾಗೇ ನಿಮ್ಮ ಹಣದಲ್ಲಿ ತಂದು‌ ಕುಡಿಯಿರಿ, ಇದು ನನ್ನ ಕೆಲಸವಲ್ಲ ಎಂದು ಪಲಾಯನದ ಮಾತುಗಳನ್ನಾಡಿ‌ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಭಾಗದ ಆಡಳಿತ ವರ್ಗದ ಅಧಿಕಾರಿಗಳಿಂದ ಸಂಶೋಧನಾ ‌ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದ್ದು, ಅಕಾಡೆಮಿಕ್ ಕೆಲಸಗಳಿಗೆ ತೀವ್ರತರವಾದ ತೊಂದರೆಗಳನ್ನು‌ ನೀಡುತ್ತಿದ್ದು, ಅಧೀಕ್ಷಕರು ಸೇರಿದಂತೆ ಕೆಲವು ಆಡಳಿತ ವರ್ಗದ ಸಿಬ್ಬಂದಿಯನ್ನು ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ವಿಭಾಗದ ವಿದ್ಯಾರ್ಥಿಗಳಾದ ರಾಜೇಶ್ ಚಾಕನಹಳ್ಳಿ, ಎಂ. ಲಿಂಗರಾಜು, ವರಹಳ್ಳಿ ಆನಂದ, ಸಂಜಯ್ ಕುಮಾರ್, ಗೌತಮ್, ಅವಿನಾಶ್, ಸಿದ್ದನಾಗಪ್ಪ, ಸುರೇಶ್, ಅಭಿಶೇಕ್, ರಂಗಸ್ವಾಮಿ, ದಿಲೀಪ್, ಕಲ್ಲಹಳ್ಲಿ ಕುಮಾರ್, ರಾಜೇಶ್ ಶಿವ, ಪ್ರತಾಪ್, ನಟರಾಜ್ ಬೊಮ್ಮಲಾಪುರ, ಹನುಮಂತಪ್ಪ, ಶೇಕೆಂ, ಸೋಮಶೇಖರ್, ಅರುಣ್ ಆರ್. ನಟರಾಜ್, ಮಲ್ಲೇಶ್, ರಂಗನಾಥ್, ಶಿಲ್ಪಾ, ದೀಪಿಕಾ, ದಿವ್ಯಶ್ರೀ, ಧನಲಕ್ಷ್ಮೀ, ಪೂಜಿತ, ರಂಜಿತ, ಮೇಘಾ ಮೊದಲಾದವರು ಇದ್ದರು.