ಸಾರಾಂಶ
ಮಹಿಳೆಯರು, ಅಂಗವಿಕಲರು, ವೃದ್ಧರು,ಆಸ್ಪತ್ರೆಗೆ ತೆರಳುವರು ಬಸ್‌ಗಳಿಲ್ಲದೆ ಪರದಾಡುತ್ತಿದ್ದಾರೆ. ಸಾರಿಗೆ ವ್ಯವಸ್ಥಾಪಕರಿಗೆ ಹಲವು ಬಾರಿ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಿದ್ದೇವೆ. ಗ್ರಾಪಂ ಸಭೆ, ಜನಸ್ಪಂದನ ಸಭೆಯಲ್ಲಿ ಭರವಸೆ ಸಿಕ್ಕಿದೆ ಹೊರತು ಗ್ರಾಮಕ್ಕೆ ಬಸ್ ಬರಲಿಲ್ಲ.
ಬ್ಯಾಡಗಿ: ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಸಾರಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸಾರಿಗೆ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಕರವೇ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ದಾನಪ್ಪನವರ ಮಾತನಾಡಿ, ತಾಲೂಕು ಕೇಂದ್ರದಿಂದ 30 ಕಿಮೀ ವ್ಯಾಪ್ತಿಯ ತಿಮ್ಮಾಪುರ ಗ್ರಾಮ ಹರಿಹರ- ಸಮ್ಮಸಗಿ ರಸ್ತೆಯಿಂದ 2 ಕಿಮೀ ದೂರವಿದೆ. ಹಾವೇರಿ- ಚಿಕ್ಕಬಾಸೂರು ಚಿಕ್ಕೆರೂರು ಮಾರ್ಗದ ರಸ್ತೆಯಿಂದ 3 ಕಿಮೀ ದೂರವಿದ್ದು, 2 ಸಾವಿರ ಜನಸಂಖ್ಯೆಯ ಗ್ರಾಮಕ್ಕೆ ಬಂದು ಹೋಗಲು ಒಂದು ಸಾರಿಗೆ ಬಸ್ಸಗಳಿಲ್ಲ. ಪಕ್ಕದ ಸೂಡಂಬಿ, ಗುಡ್ಡದಮಲ್ಲಾಪುರ, ಹಂಸಭಾವಿ ಕಡೆಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಗೋಳಾಡುವಂತಾಗಿದೆ.
ಮಹಿಳೆಯರು, ಅಂಗವಿಕಲರು, ವೃದ್ಧರು,ಆಸ್ಪತ್ರೆಗೆ ತೆರಳುವರು ಬಸ್‌ಗಳಿಲ್ಲದೆ ಪರದಾಡುತ್ತಿದ್ದಾರೆ. ಸಾರಿಗೆ ವ್ಯವಸ್ಥಾಪಕರಿಗೆ ಹಲವು ಬಾರಿ ಪ್ರತಿಭಟನೆ ಮೂಲಕ ಮನವಿ ಪತ್ರ ಸಲ್ಲಿಸಿದ್ದೇವೆ. ಗ್ರಾಪಂ ಸಭೆ, ಜನಸ್ಪಂದನ ಸಭೆಯಲ್ಲಿ ಭರವಸೆ ಸಿಕ್ಕಿದೆ ಹೊರತು ಗ್ರಾಮಕ್ಕೆ ಬಸ್ ಬರಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಕರವೇ ಗ್ರಾಮ ಘಟಕದ ಅಧ್ಯಕ್ಷ ಹೂವನಗೌಡ ಭರಮಗೌಡ್ರ ಮಾತನಾಡಿ, ಹಿಂದೆ ತಹಸೀಲ್ದಾರರು ಗ್ರಾಮವಾಸ್ತವ್ಯ ಮಾಡಿ ಗ್ರಾಮಕ್ಕೆ ಸಾರಿಗೆ ಓಡಿಸಲು ಸೂಚಿಸಿ ಮರುದಿನ ಬಂದು ಹೋದ ಬಸ್ ಇಂದಿಗೂ ಮರಳಿ ಬಂದಿಲ್ಲ ಎಂದರು.ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಪುರದ, ವನಜಾಕ್ಷಿ ಭರಮಗೌಡ್ರ, ಲಲಿತಾ ಸಾತೇನಹಳ್ಳಿ, ಶಂಕ್ರವ್ವ ಲಕ್ಕೊಳ್ಳಿ, ಶಿವನಂದವ್ವ ಮೂಡಿ, ಕರಬಸಪ್ಪ ಕೊಪ್ಪದ, ಸರಸ್ವತಿ ಕೊಪ್ಪದ, ಮಂಜು ಮೂಡೇರ, ಶಾಂತಪ್ಪ ಕೂರ್ಗೇರ, ಸುರೇಶ ದುಮ್ಮಿಹಾಳ, ಪ್ರಕಾಶ ಸಾತೇನಹಳ್ಳಿ ಇತರರಿದ್ದರು.ನಕಲಿ ಟ್ರೇಡಿಂಗ್ ಆ್ಯಪ್‌ನಿಂದ ₹75 ಲಕ್ಷ ವಂಚನೆಹಾವೇರಿ: ಅಪರಿಚಿತ ವ್ಯಕ್ತಿಗಳು ಲಿಂಕ್‌ವೊಂದನ್ನು ಮೊಬೈಲ್‌ಗೆ ಕಳಿಸಿ ಕ್ಲಿಕ್ ಮಾಡಿದರೆ ಲಾಭಾಂಶ ಕೊಡುವುದಾಗಿ ನಂಬಿಸಿ ನಕಲಿ ಟ್ರೇಡಿಂಗ್ ಆ್ಯಪ್‌ಗೆ ಸುಮಾರು ₹75 ಲಕ್ಷ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಲಾಗಿದೆ.
ರಾಣಿಬೆನ್ನೂರಿನ ಗೌರಿಶಂಕರ ನಗರದ ನಿವಾಸಿ ಅಕೌಂಟೆಂಟ್ ರಾಕೇಶ ವಿಶ್ವನಾಥಸಾ ಇರಕಲ್ ಎಂಬವರೇ ಮೋಸ ಹೋಗಿರುವ ವ್ಯಕ್ತಿ. ಅಪರಿಚಿತ ವ್ಯಕ್ತಿಗಳಾದ ನೇಮ್‌ಕುಮಾರ ಹಾಗೂ ಸ್ನೇಹಾ ಶಾರದಾ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿತರು ದೂರುದಾರನಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡು ಹಣವನ್ನು ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ಹೇಳಿ ನಂಬಿಸಿ ₹75,42,000 ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.