ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹ

| Published : Feb 21 2024, 02:01 AM IST

ಸಾರಾಂಶ

ಮುದನೂರ ಮುಖಾಂತರ ಕೆಂಭಾವಿಗೆ ಮತ್ತು ಸುರಪುರದಿಂದ ಬೈಚಬಾಳ ಹಾಗೂ ಹುಣಸಗಿವರೆಗೂ ಬಿಡುವಂತೆ ತೆಗ್ಗೆಳ್ಳಿ ಗ್ರಾಮಸ್ಥರ ಆಗ್ರಹ.

ಕನ್ನಡಪ್ರಭ ವಾರ್ತೆ ಹುಣಸಗಿ

ಸುರಪುರ ಘಟಕದಿಂದ ಕೂಡಲಗಿಗೆ ಬರುವ ಎಲ್ಲಾ ಬಸ್‌ಗಳನ್ನು ಮುದನೂರ ಮುಖಾಂತರ ಕೆಂಭಾವಿಗೆ ಮತ್ತು ಸುರಪುರದಿಂದ ಬೈಚಬಾಳ ಹಾಗೂ ಹುಣಸಗಿವರೆಗೂ ಬಿಡುವಂತೆ ತೆಗ್ಗೆಳ್ಳಿ ಗ್ರಾಮಸ್ಥರು ಆಗ್ರಹಿಸಿ, ಸುರಪುರ ಬಸ್ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.

ತೆಗ್ಗೆಳ್ಳಿ, ಶಾಖಾಪೂರ ಗ್ರಾಮಸ್ಥರು ದಿನ ನಿತ್ಯ ಹುಣಸಗಿ ಹಾಗೂ ‌ಕೆಂಭಾವಿಗೆ ಹೋಗುತ್ತಾರೆ. ಹೀಗಾಗಿ ಗ್ರಾಮಸ್ಥರು ಯಾತನೆ ಅನುಭವಿಸುತ್ತಿದ್ದಾರೆ ಎಂದ ತಿಳಿಸಿದರು. ಪ್ರತಿ ನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಸುಮಾರು ನಾಲ್ಕೈದು ಕಿಲೋಮೀಟರ್ ನಡೆದುಕೊಂಡೆ ಹೋಗಬೇಕಾಗಿದೆ. ಇನ್ನು ಬಸ್ ಬಾರದೆ ಇರುವುದರಿಂದ ಪರ್ಯಾಯವಾಗಿ ಟಂಟಂ ಅಥವಾ ಕ್ರೂಜರ್ ಮೊರೆ ಹೋಗಬೇಕಾಗಿದೆ.

ಹೀಗಾಗಿ, ತೆಗ್ಗೆಳ್ಳಿ ಗ್ರಾಮಸ್ಥರು ಸುರಪುರದಿಂದ ಬರುವ ಬಸ್ ಹುಣಸಗಿವರೆಗೆ ಸಂಚರಿಸುವಂತೆ ಮನವಿ ಮಾಡಿದ್ದಾರೆ. ಗ್ರಾಮದ ಮುಖಂಡರಾದ ತಾರಾನಾಥ್ ಇನಾಂದಾರ್, ಸಿದ್ದಣ್ಣ ಪಾಸೋಡಿ, ಬಸವರಾಜ್ ಪೂಜಾರಿ, ಭೀಮಶಾ ರೂಗಿ, ನಂದನಗೌಡ ಬೆನಕನಾಳ್, ಮಲ್ಲು ಗೋನಾಲ್ ಸೇರಿ ಹಲವರು ಮನವಿ ಸಲ್ಲಿಸಿ, ಒಂದು ವೇಳೆ ಬಸ್ ಸಂಚಾರ ಮಾಡದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.