ಸಾರಾಂಶ
- 18 ವರ್ಷ ಮೇಲ್ಪಟ್ಟವರು ಆಧಾರ್ ಮಾಡಿಸಲು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ
ಕನ್ನಡಪ್ರಭ ವಾತೆ, ನರಸಿಂಹರಾಜಪುರಪ್ರತಿಯೊಬ್ಬ ನಾಗರಿಕರಿಗೂ ಅಗತ್ಯವಾಗಿರುವ ಮುಖ್ಯ ದಾಖಲೆ ಆಧಾರ್ ಕಾಡ್ . ಇಂತಹ ಮುಖ್ಯ ದಾಖಲೆ ಮಾಡಿಸಲು ತಾಲೂಕು ಕೇಂದ್ರದಲ್ಲಿ 3 ಆಧಾರ್ ಸೇವಾ ಕೇಂದ್ರಗಳಿದ್ದರೂ 18 ವರ್ಷ ಮೇಲ್ಪಟ್ಟವರು ಮಾತ್ರ ಆಧಾರ್ ಮಾಡಿಸಲು 90 ಕಿ.ಮೀ.ದೂರದ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿರುವುದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗಿದೆ.
ನರಸಿಂಹರಾಜಪುರ ಪಟ್ಟಣದಲ್ಲಿ ತಾಲೂಕು ಕಚೇರಿ, ಅಂಚೆ ಕಚೇರಿ ಹಾಗೂ ಎಸ್.ಬಿ.ಐ ಬ್ಯಾಂಕಿನಲ್ಲಿ ಆಧಾರ್ ಸೇವಾ ಕೇಂದ್ರ ಗಳಿವೆ. 2009ರಲ್ಲಿ ಹೊಸದಾಗಿ ಲಾಂಚ್ ಆದ ಸಾಪ್ಟವೇರ್ ನಲ್ಲಿ ಎಲ್ಲಾ ವಯಸ್ಸಿನವರಿಗೂ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ತಾಲೂಕಿನ ಆಧಾರ್ ಸೇವಾ ಕೇಂದ್ರದಲ್ಲಿ ಅವಕಾಶ ಇತ್ತು. ಆದರೆ, ಕಳೆದ 2 ವರ್ಷಗಳ ಹಿಂದೆ ಆ ಸಾಫ್ಟ್ ವೇರ್ ತೆಗೆದುಹಾಕಲಾಗಿದೆ. ಈಗ ಹೊಸದಾಗಿ ಆಧಾರ್ ಕಾರ್ಡು ಮಾಡಿಸಲು 18 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿದೆ. 18 ವರ್ಷದ ಮೇಲ್ಪಟ್ಟವರು ಹೊಸದಾಗಿ ಆಧಾರ್ ಕಾರ್ಡು ಮಾಡಿಸಲು 90 ಕಿ.ಮೀ.ದೂರದ ಚಿಕ್ಕಮಗಳೂರು ಅಥವಾ 60 ಕಿ.ಮೀ.ದೂರದ ಶಿವಮೊಗ್ಗಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ.ಇದರಿಂದ ವೃದ್ದರು, ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು ಹಿಂದಿನಂತೆಯೇ ತಾಲೂಕು ಆಧಾರ್ ಸೇವಾ ಕೇಂದ್ರದಲ್ಲೇ 18 ವರ್ಷದ ಮೇಲ್ಪಟ್ಟವರಿಗೆ ಹೊಸದಾಗಿ ಆಧಾರ್ ಕಾರ್ಡ ಮಾಡಿಸಲು ಅವಕಾಶ ಕಲ್ಪಿಸಬೇಕು ಅಥವಾ 3 ತಿಂಗಳಿಗೊಮ್ಮೆ ಜಿಲ್ಲಾ ಕೇಂದ್ರದ ಆಧಾರ್ ಸೇವಾ ಕೇಂದ್ರದವರು ತಾಲೂಕು ಕೇಂದ್ರಕ್ಕೆ ಬಂದು 18 ವರ್ಷದ ಮೇಲ್ಪಟ್ಟ ನಾಗರಿಕರಿಗೆ ಆಧಾರ್ ಕಾರ್ಡ್ ಮಾಡಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
10 ವರ್ಷಕ್ಕೆ ಅಪ್ ಡೇಟ್:5 ವರ್ಷಕ್ಕೊಮ್ಮೆ ಮಕ್ಕಳ ಆಧಾರ್ ಕಾರ್ಡು ಅಪ್ ಡೇಟ್ ಮಾಡಿಸಬೇಕು. ಹಿರಿಯರಿಗೆ 10 ವರ್ಷಕ್ಕೊಮ್ಮೆ ಆಧಾರ್ ಕಾರ್ಡ್ ಅಪಡೇಟ್ ಮಾಡಿಸಬೇಕು ಎಂಬ ನಿಯಮವಿದ್ದರೂ ಹೆಚ್ಚಿನವರು ಅದನ್ನು ಪಾಲಿಸುತ್ತಿಲ್ಲ ಎನ್ನುತ್ತಾರೆ ಆಧಾರ್ ಸೇವಾ ಕೇಂದ್ರದ ಆಪರೇಟರ್. ಅಲ್ಲದೆ ಅನೇಕ ಸಂದರ್ಭದಲ್ಲಿ ಆಧಾರ್ ಕಾರ್ಡಿಗೆ ಎಲ್ಲಾ ದಾಖಲೆಗಳನ್ನು ಅಪ್ ಡೇಟ್ ಮಾಡಿದ್ದರೂ ತಾಂತ್ರಿಕ ಕಾರಣದಿಂದ ಶೇ . 50 ರಷ್ಟು ಜನರ ಆಧಾರ್ ಕಾರ್ಡು ರಿಜೆಕ್ಟ್ ಆಗಿ ಬರುತ್ತಿದೆ. ಇದು ಬೆಂಗಳೂರಿನಲ್ಲಿರುವ ಆಧಾರ್ ಸೇವಾ ಕೇಂದ್ರದ ಸಾಫ್ಟ್ ವೇರ್ ನಲ್ಲೇ ಸರಿಪಡಿಸಬೇಕಾಗಿದೆ ಎನ್ನುತ್ತಾರೆ. ಹೀಗಾಗಿ ಸ್ಥಳಿಯರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸುವ ಮೂಲಕ ನಾಗರಿಕ ಸ್ನೇಹಿ ಮಾಡಿದರೆ ಹೆಚ್ಚುಉಪಯುಕ್ತ. ಇಲ್ಲವಾದರೆ ಪ್ರತಿಯೊಂದಕ್ಕೂ ಅವಶ್ಯಕ ವಾದ ಆಧಾರ್ ಗೊಂದಲ ಮುಂದುವರಿಯಲಿದೆ. -- ಬಾಕ್ಸ್ --
ಆಧಾರ್ ಆಂದೋಲನ ಅಗತ್ಯ: ಜುಬೇದಾನರಸಿಂಹರಾಜಪುರ ತಾಲೂಕಿನಲ್ಲಿರುವ ಮತ್ತೀ ಮರ ಅನಾಥಾಶ್ರಮದಲ್ಲಿ 109 ಜನರಿದ್ದು ಇಲ್ಲಿ ಬಹುತೇಕರಿಗೆ ಆಧಾರ್ ಕಾರ್ಡು ಇಲ್ಲ. ಸೀಗುವಾನಿ ಆಶ್ರಮದಲ್ಲಿ 35 ಜನ ಅನಾಥರಿದ್ದು ಅವರಿಗೂ ಸಹ ಆಧಾರ್ ಇಲ್ಲ. ಆಧಾರ್ ಕಾರ್ಡು ಇಲ್ಲದೆ ಅವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನರಸಿಂಹರಾಜಪುರ ಪಟ್ಟಣದ ಕೆಲವು ವಾರ್ಡುಗಳಲ್ಲಿ ಕೆಲವು ಹಾಸಿಗೆ ಹಿಡಿದ ರೋಗಗಳಿದ್ದಾರೆ. ಅವರ ಬಳಿಯೂ ಆಧಾರ್ ಕಾರ್ಡು ಇಲ್ಲ. ಆದ್ದರಿಂದ ಸರ್ಕಾರ ಆಧಾರ್ ಕಾರ್ಡು ನೀಡಲು ಈಗ ಇರುವ ಕಾನೂನು ಸಡಿಲಗೊಳಿಸಿ ಆಧಾರ್ ಕಾರ್ಡು ಇಲ್ಲದೆ ಇರುವವರನ್ನು ಗುರುತಿಸುವ ಆಂದೋಲನ ನಡೆಸಬೇಕು. ಅಗತ್ಯ ಬಿದ್ದರೆ ಮನೆಗಳಿಗೆ ತೆರಳಿ ಆಧಾರ್ ಕಾರ್ಡು ಮಾಡಿಸಿಕೊಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಸಲಹೆ ನೀಡಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))