ಸಾರಾಂಶ
ನಗರದಲ್ಲಿ ನಿವೇಶನ ಬೆಲೆ ದುಪ್ಪಟ್ಟಾದ ಕಾರಣ ಬಡ ಕಟ್ಟಡಕಾರ್ಮಿಕರಿಗೆ ಕೊಂಡುಕೊಳ್ಳುವ ಶಕ್ತಿಯು ಇಲ್ಲ.
ಹೊಸಪೇಟೆ: ಕಟ್ಟಡ ಕಾರ್ಮಿಕರಿಗೆ ನಿವೇಶನ ನೀಡಲು ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಂಘಟನೆ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.ಸಂಘಟನೆಯ ಆರ್.ಬಸವರಾಜ್ ಮಾತನಾಡಿ, ಕಟ್ಟಡ ಕಾರ್ಮಿಕರ ಬದುಕು ಅತ್ಯಂತ ಶೋಚನಿಯವಾಗಿದೆ. ಬೃಹತ್ ಮನೆಗಳನ್ನು ನಿರ್ಮಿಸುವ ಕಾರ್ಮಿಕರ ಕುಟುಂಬಗಳಿಗೆ ನಿವೇಶನ ಇಲ್ಲವೆಂದು 2015ರಿಂದ 2024ರವರೆಗೂ ಮನವಿ ಸಲ್ಲಿಸುತ್ತಾ ಬಂದರೂ ಅಹವಾಲು ಸ್ವೀಕರಿಸಿ ಜನಪ್ರತಿನಿಧಿಗಳಿಂದ ಆಶ್ವಾಸನೆ ಬಿಟ್ಟರೆ ನಿವೇಶನ ನೀಡುವ ಪ್ರಯತ್ನವೇ ನಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ನಿವೇಶನ ಬೆಲೆ ದುಪ್ಪಟ್ಟಾದ ಕಾರಣ ಬಡ ಕಟ್ಟಡಕಾರ್ಮಿಕರಿಗೆ ಕೊಂಡುಕೊಳ್ಳುವ ಶಕ್ತಿಯು ಇಲ್ಲ. ಬಡವರಿಗೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಲು ಕೆಡಿಪಿ ಸಭೆಯಲ್ಲಿ ಚರ್ಚಿಸಿ ಕಟ್ಟಡ ಕಾರ್ಮಿಕರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಂಘಟನೆಯ ಎನ್.ಯಲ್ಲಾಲಿಂಗ, ಕೆ.ನಾಗರತ್ನಮ್ಮ, ಗೋಪಾಲ್, ಜಗನಾಥ್ ಮತ್ತಿತರರಿದ್ದರು.
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಸಂಘಟನೆ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.