ಸಮೀಕ್ಷೆಯಲ್ಲಿ ಎದುರಾಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಆಗ್ರಹ

| Published : Sep 26 2025, 01:00 AM IST

ಸಮೀಕ್ಷೆಯಲ್ಲಿ ಎದುರಾಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಘೋಷಿಸಿದ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಕಾರ್ಯದಲ್ಲಿ ತೀವ್ರ ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದು, ಇವನ್ನು ಬಗೆಹರಿಸದಿದ್ದರೆ ಗಣತಿ ಮಾಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕರು ತಾಲೂಕು ತಹಸೀಲ್ದಾರ್ ಹಾಗೂ ಗಣತಿ ಮುಖ್ಯಸ್ಥ ಎಸ್.ಆನಂದ ಅವರಿಗೆ ಮನವಿ ಸಲ್ಲಿಸಿತು.

ಹಾನಗಲ್ಲ: ಸರ್ಕಾರ ಘೋಷಿಸಿದ ಶೈಕ್ಷಣಿಕ ಹಾಗೂ ಸಾಮಾಜಿಕ ಗಣತಿ ಕಾರ್ಯದಲ್ಲಿ ತೀವ್ರ ತಾಂತ್ರಿಕ ತೊಂದರೆ ಅನುಭವಿಸುತ್ತಿದ್ದು, ಇವನ್ನು ಬಗೆಹರಿಸದಿದ್ದರೆ ಗಣತಿ ಮಾಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಶಿಕ್ಷಕರು ತಾಲೂಕು ತಹಸೀಲ್ದಾರ್ ಹಾಗೂ ಗಣತಿ ಮುಖ್ಯಸ್ಥ ಎಸ್.ಆನಂದ ಅವರಿಗೆ ಮನವಿ ಸಲ್ಲಿಸಿತು. ಗುರುವಾರ ಹಾನಗಲ್ಲ ತಾಲೂಕಿನಲ್ಲಿ ಗಣತಿ ಕಾರ್ಯದಲ್ಲಿ ತೊಡಗಿರುವ 500ಕ್ಕೂ ಅಧಿಕ ಶಾಲಾ ಶಿಕ್ಷಕ ಗಣತಿದಾರರು ತಾಲೂಕು ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಾಲೂಕು ತಹಸೀಲ್ದಾರ್ ಹಾಗೂ ಗಣತಿ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು. ಈಗ ಒದಗಿಸಿರುವ ಮಾಹಿತಿಯಲ್ಲಿ ಗಣತಿ ಮಾಡಲು ಸಾಧ್ಯವಿಲ್ಲ. ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಮೊಬೈಲ್‌ನಲ್ಲಿ ಗಣತಿ ಗಣತಿದಾರರಿಗೆ ಮಾನಸಿಕ ಹಿಂಸೆಗೆ ಕಾರಣವಾಗಿದೆ. ಶಿಕ್ಷಕರು ಕೆಲಸ ನಿರ್ವಹಿಸುವ ಊರಿನಲ್ಲಿಯೇ ಗಣತಿಗೆ ಅವಕಾಶ ನೀಡಬೇಕು. ಜಿಯೋ ಟ್ಯಾಗ್ ಅಂಟಿಸಿದ ಮನೆ ಲೊಕೇಶನ್ ದೊರೆಯುತ್ತಿಲ್ಲ. ಒಬ್ಬ ಗಣತಿದಾರರಿಗೆ ಒಂದು ಊರಿನಲ್ಲಿ ಕೆಲವು ಮನೆ, ಇನ್ನೊಂದು ಊರಿನಲ್ಲಿ ಕೆಲವು ಮನೆ ಹಂಚಲಾಗಿದೆ. ಒಬ್ಬ ಗಣತಿದಾರರಿಗೆ 4 ಊರುಗಳಲ್ಲಿ ಮನೆ ನೀಡಲಾಗಿದೆ. ಬಿಎಲ್‌ಓ ಶಿಕ್ಷಕರಿಗೆ ಗಣತಿ ಅಥವಾ ಮತದಾರರ ಪಟ್ಟಿ ಪರಿಷ್ಕರಣೆ ಎರಡರಲ್ಲಿ ಒಂದು ಕಾರ್ಯ ನಿಗದಿಗೊಳಿಸಬೇಕು. ಶಾಲಾ ಶಿಕ್ಷಕರನ್ನು ಹೊರತುಪಡಿಸಿ ಬೇರೆ ಬೇರೆ ಸರ್ಕಾರಿ ಇಲಾಖಾ ಸಿಬ್ಬಂದಿಗೆ ಈ ಕೆಲಸ ನೀಡಬೇಕು. ಅಂಗವಿಕಲರು, ತೀವ್ರತರ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, 55 ವರ್ಷ ವಯೋಮಿತಿ ದಾಟಿದ ಶಿಕ್ಷಕರಿಗೆ ಗಣತಿಯಿಂದ ವಿನಾಯತಿ ನೀಡಬೇಕು. ಗಣತಿಗೆ ನೇಮಿಸಿದ ಆದೇಶ ಪ್ರತಿ ನೀಡಬೇಕು. ಗಣತಿ ಕಿಟ್ ಕೂಡ ಸರಿಯಾಗಿ ದೊರೆತಿಲ್ಲ. ಕೂಡಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದ ನಂತರ ಗಣತಿಗೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ. ಪಾಟೀಲ, ಕಾರ್ಯದರ್ಶಿ ಮಕಬುಲ್ ಲಿಂಗದಹಳ್ಳಿ, ಬಿ.ಎಸ್.ಚಲ್ಲಾಳ, ಎಂ.ಎಸ್.ಬಡಿಗೇರ, ಯು.ಡಿ.ಸವಣೂರ, ಎಸ್.ಕೆ.ದೊಡ್ಡಮನಿ, ಅನಿಲಕುಮಾರ ಗೋಣೆಣ್ಣನವರ, ಮಹಾಬಲೇಶ್ವರ, ಅನಿತಾ ಕಿತ್ತೂರ, ನಿರ್ಮಲಾ ಮತ್ತೂರ, ಬಿ.ವೈ.ಬೆಳ್ಳಿಗಟ್ಟಿ, ಜಿ.ಜಿ.ನೂಲ್ವಿ, ಎಸ್.ಟಿ.ಚಕ್ರಸಾಲಿ, ಪವಿತ್ರಾ ಕಾರಡಗಿ, ಸಾವಿತ್ರಿ ಗೊಂದಿ, ಗಿರಿಶ ನೆಲ್ಲಿಕೊಒಪ್ಪ, ಎಚ್.ಐ.ಖತೀಬ, ಹರಿಶ ಕುದರಿಯವರ, ಎಂ.ಎ.ಲೋಹಾರ, ಜಿ.ಎಂ.ಓಂಕಾರಿ, ವಿಜೇಂದ್ರ ಯತ್ನಳ್ಳಿ ಸೇರಿದಂತೆ ನೂರಾರು ಶಿಕ್ಷಕರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.