ಮಂಡ್ಯ ತಾಲೂಕು ಸಾತನೂರಿನಲ್ಲಿ ಪ್ರಾಣಿ ಬಲಿ ತಡೆಗೆ ಆಗ್ರಹ

| Published : Sep 29 2024, 01:38 AM IST

ಸಾರಾಂಶ

ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ ೧೯೫೯ ಮತ್ತು ನಿಯಮಳು ೧೯೬೩ ಹಾಗೂ ತಿದ್ದುಪಡಿ ಕಾಯ್ದೆ ೧೯೭೫ರ ಪ್ರಕಾರ ಪ್ರಾಣಿಬಲಿ ನೀಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಹೇಳಿದೆ. ಜಾತ್ರೆ ಹಾಗೂ ಇನ್ನಿತರ ದಿನಗಳಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಯುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಗ್ರಾಮದಲ್ಲಿ ಶ್ರೀಮಸಣಮ್ಮ ದೇವಿ ಹಬ್ಬದ ಸಮಯದಲ್ಲಿ ನಡೆಯುವ ಪ್ರಾಣಿ ಬಲಿಯನ್ನು ರಾಜ್ಯ ಹೈಕೋರ್ಟ್ ಆದೇಶದನ್ವಯ ತಡೆಯುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.

ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ ೧೯೫೯ ಮತ್ತು ನಿಯಮಳು ೧೯೬೩ ಹಾಗೂ ತಿದ್ದುಪಡಿ ಕಾಯ್ದೆ ೧೯೭೫ರ ಪ್ರಕಾರ ಪ್ರಾಣಿಬಲಿ ನೀಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಹೇಳಿದೆ. ಜಾತ್ರೆ ಹಾಗೂ ಇನ್ನಿತರ ದಿನಗಳಲ್ಲಿ ನಡೆಯುವ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ತಡೆಯುವುದು. ಪ್ರಾಣಿಗಳು ಜಾತ್ರಾ ಪರಿಸರಕ್ಕೆ ಬಾರದಂತೆ ದೂರದಲ್ಲಿಯೇ ತಡೆಯುವಂತೆ ಶನಿವಾರ ಸುದ್ದಿಗೋಷ್ಠೀಯಲ್ಲಿ ಆಗ್ರಹಪಡಿಸಿದರು.

ಕರ್ನಾಟಕದಲ್ಲಿ ದೇವರು-ಧರ್ಮದ ಹೆಸರಿನಲ್ಲಿ, ಹರಕೆಯ ರೂಪದಲ್ಲಿ ಜಾತ್ರಾ ಪರಿಸರಗಳು, ಧಾರ್ಮಿಕ ಸಮಾವೇಶ, ಸಾರ್ವಜನಿಕ ಪ್ರದೇಶ, ದೇವಾಲಯದ ಒಳಗೆ ಹೊರಗೆ, ಇನ್ನಿತರ ಕಡೆಗಳಲ್ಲಿಇ ಯಾವುದೇ ವಯಸ್ಸಿನ ಪ್ರಾಣಿಗಳನ್ನು ಬಲಿಕೊಡುವುದು, ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ನುಡಿದರು.

ಹಾಗಾಗಿ ಅ.೧ರಿಂದ ೨ರವರೆಗೆ ಸಾತನೂರಿನಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ನಡೆಯಲಿರುವ ಶ್ರೀಮಸಣಮ್ಮ ದೇವಿ ಜಾತ್ರೆಯಲ್ಲಿ ಯಾವುದೇ ಪ್ರಾಣಿ ಬಲಿ, ಹತ್ಯೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಗೋಷ್ಠಿಯಲ್ಲಿ ಬಸವಧರ್ಮ ಜ್ಞಾನಪೀಠದ ಶಿವಯೋಗಿ ಸ್ವಾಮೀಜಿ ಇದ್ದರು.