ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಎರಡು ಗುಂಪುಗಳ ನಡುವೇ ವಾಲ್ಮೀಕಿ ಭವನದ ಜಾಗದ ಒತ್ತುವರಿ ತೆರವು ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂಜಾಗಿ ಎಂದು ಗುಂಪು ಸಭೆ ಬಹಿಷ್ಕರಿಸಿ ನಿರ್ಗಮಿಸಿತು. ಮತ್ತೊಂದು ಗುಂಪು ಸಭೆಯಲ್ಲಿ ಭಾಗವಹಿಸಿ ೧೭ ರಂದು ವಾಲ್ಮೀಕಿ ಜಯಂತಿ ಜಿಲ್ಲಾಡಳಿತದ ಶಿಷ್ಠಾಚಾರದ ಪ್ರಕಾರ ಯಶಸ್ವಿಯಾಗಿ ನೆರವೇರಿಸಲು ತೀರ್ಮಾನಿಸಿತು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವಾಲ್ಮೀಕಿ ಭವನದ ಜಾಗವನ್ನು ಖಾಸಗಿ ಕಲ್ಯಾಣ ಮಂಟಪದವರು ಒತ್ತುವರಿ ಮಾಡಿದ್ದು, ಅದನ್ನು ತೆರವು ಮಾಡಿದ ನಂತರವೇ ವಾಲ್ಮೀಕಿ ಜಯಂತಿ ನಡೆಸುವಂತೆ ವಾಲ್ಮೀಕಿ ಸಮುದಾಯದ ಮುಖಂಡ ನರಸಿಂಹಯ್ಯ ಒತ್ತಾಯಿಸಿದರು. ಜಿಲ್ಲಾಧಿಕಾರಿ ಅಕ್ರಂಪಾಷ ಮಾತನಾಡಿ, ಈಗ ನಾವು ಪೂರ್ವಭಾವಿ ಸಭೆ ಕರೆದಿರುವುದು ವಾಲ್ಮೀಕಿ ಜಯಂತಿಯ ಸಿದ್ದತೆ ಬಗ್ಗೆ ಪೂರ್ವ ಸಭೆಯಾಗಿದೆ. ಇದರಲ್ಲಿ ವಾಲ್ಮೀಕಿ ಜಯಂತಿ ಬಗ್ಗೆ ಮಾತ್ರ ಸಲಹೆಗಳನ್ನು ನೀಡಬಹುದು. ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿದೆ ಹಾಗಾಗಿ ನಾವು ಮಧ್ಯ ಪ್ರವೇಶಿಸಿದರೆ ತಪ್ಪಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ವಾದ ವಿವಾದಗಳು ನಡೆದವು ನರಸಿಂಹಯ್ಯ, ಮಾದೇಶ ಅವರ ಗುಂಪು ಮತ್ತೊಂದು ಗುಂಪಿನ ನಡುವೆ
ಮಾತಿನ ಚಕಮಕಿ ನಡೆದು ಧಿಕ್ಕಾರದ ಘೋಷಣೆಗಳು ಕೂಗುತ್ತ ಸಭೆಯಿಂದ ನಿರ್ಗಮಿಸಿದರು.ಮತ್ತೊಂದು ಗುಂಪು ನಗರಸಭೆ ಸದಸ್ಯ ಅಂಬರೀಷ್, ಬಾಲಗೋವಿಂದ, ವೆಂಕಟರಾಮ್, ದಲಿತ ಮುಖಂಡರಾದ ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಡಾ.ಚಂದ್ರಶೇಖರ್ ಮುಂತಾದವರು ಜಿಲ್ಲಾಡಳಿತ ಪರವಾಗಿ ಬೆಂಬಲಕ್ಕೆ ನಿಂತು ಸಭೆಯು ಮುಂದುವರೆಯಲು ಸಹಕಾರ ನೀಡಿದರು.