ಸಕಲೇಶಪುರ, ಹೋರಾಟಗಾರರು, ದೂರು, ಕುಮಾರಸ್ವಾಮಿ, Sakleshpur, activists, complaint, Kumaraswamyಕಳೆದ ಎರಡು ವರ್ಷದ ಹಿಂದೆ ಕಾಡಾನೆ ಸೆರೆ ಹಿಡಿಯುವ ವೇಳೆ ನಡೆದ ಕಾಳಗದಲ್ಲಿ ಮೃತಪಟ್ಟ ಮೈಸೂರಿನ ಪಟ್ಟದ ಆನೆ ಅರ್ಜುನ ಸಮಾಧಿಯನ್ನು ಸಾವೀಗಿಡಾದ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಲು ತಿರ್ಮಾನಿಸಲಾಗಿತ್ತು. ಆದರೆ, ಆನೆ ಸಮಾಧಿಯನ್ನು ಜನಸಂಚಾರ ಪ್ರದೇಶದಲ್ಲಿ ನಿರ್ಮಾಣ ಮಾಡುವಂತೆ ಹಲವು ಸಂಘಟನೆಗಳು ಮುಖಂಡರು ಹೋರಾಟ ನಡೆಸಿದ್ದರು. ಆದರೆ, ಜಿಲ್ಲಾಡಳಿತ ೧೯ ಹೋರಾಟಗಾರರ ಮೇಲೆ ದೂರು ದಾಖಲಿಸಿದ್ದು ಇತ್ತೀಚೆಗೆ ಬೆಳಕಿಗೆ ಬಂದಿದೆ. ದೂರು ದಾಖಲಿಗೆ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನವಿದೆ. ಆದ್ದರಿಂದ, ಈ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲಾ ದೂರುಗಳನ್ನು ಕೈ ಬಿಡ ಬೇಕು ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಅರ್ಜುನ ಆನೆ ಸಮಾಧಿ ನಿರ್ಮಾಣ ವಿಚಾರದಲ್ಲಿ ಹೋರಾಟ ನಡೆಸಿದವರ ಮೇಲೆ ದಾಖಲಾಗಿರುವ ದೂರನ್ನು ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಸಚಿವ ಎಚ್. ಕೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಕಾಡಾನೆ ಸೆರೆ ಹಿಡಿಯುವ ವೇಳೆ ನಡೆದ ಕಾಳಗದಲ್ಲಿ ಮೃತಪಟ್ಟ ಮೈಸೂರಿನ ಪಟ್ಟದ ಆನೆ ಅರ್ಜುನ ಸಮಾಧಿಯನ್ನು ಸಾವೀಗಿಡಾದ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡಲು ತಿರ್ಮಾನಿಸಲಾಗಿತ್ತು. ಆದರೆ, ಆನೆ ಸಮಾಧಿಯನ್ನು ಜನಸಂಚಾರ ಪ್ರದೇಶದಲ್ಲಿ ನಿರ್ಮಾಣ ಮಾಡುವಂತೆ ಹಲವು ಸಂಘಟನೆಗಳು ಮುಖಂಡರು ಹೋರಾಟ ನಡೆಸಿದ್ದರು. ಆದರೆ, ಜಿಲ್ಲಾಡಳಿತ ೧೯ ಹೋರಾಟಗಾರರ ಮೇಲೆ ದೂರು ದಾಖಲಿಸಿದ್ದು ಇತ್ತೀಚೆಗೆ ಬೆಳಕಿಗೆ ಬಂದಿದೆ. ದೂರು ದಾಖಲಿಗೆ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನವಿದೆ. ಆದ್ದರಿಂದ, ಈ ಹೋರಾಟಗಾರರ ಮೇಲೆ ದಾಖಲಾಗಿರುವ ಎಲ್ಲಾ ದೂರುಗಳನ್ನು ಕೈ ಬಿಡ ಬೇಕು ತಪ್ಪಿದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದರು.

ಹಾನುಬಾಳ್ ಹೋಬಳಿ ಕಾಫಿ ಬೆಳೆಗಾರರಿಗೆ ಸಮಸ್ಯೆಯಾಗಿರುವ ಸೇಕ್ಷನ್ ೪ನ್ನು ಕೈಬಿಡಬೇಕು. ಈ ಭಾಗದಲ್ಲಿ ಅನಾಧಿಕಾಲದಿಂದ ಜನರು ವಾಸಿಸುತ್ತಿರುವುದಕ್ಕೆ ಕುರುಹುಗಳಿವೆ. ಈಗ ಅರಣ್ಯ ಇಲಾಖೆ ಸೆಕ್ಷನ್ ೪ ರಡಿ ರಕ್ಷಿತಾರಣ್ಯ ಮಾಡಲು ಹೊರಟಿರುವುದು ಅಕ್ಷಮ್ಯ ಈ ನಿಟ್ಟಿನಲ್ಲಿ ನಮ್ಮ ಅವಧಿಯಲ್ಲೂ ಹೋರಾಟ ನಡೆಸಿದ್ದೆ ಎಂದರು. ತಾಲೂಕಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ವಿವರವನ್ನು ಶಾಸಕರು ಬಿಡುಗಡೆ ಮಾಡಲಿ. ನಮ್ಮ ಅವಧಿಯಲ್ಲಿ ಬಿಡುಗಡೆಯಾದ ಅನುದಾನಗಳಿಗೆ ಇಂದು ಭೂಮಿ ಪೂಜೆಯಾಗುತ್ತಿದ್ದು ಅಭಿವೃದ್ಧಿ ವೇಗ ಕುಂಠಿತಗೊಂಡಿದೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ವರಿಷ್ಠರ ಆದೇಶದಂತೆ ನಡೆಸಲಾಗುವುದು ಎಂದರು. ಈ ವೇಳೆ ಪಕ್ಷದ ಮುಖಂಡರಾದ ಜಿಪಂ ಮಾಜಿ ಸದಸ್ಯ ಕುಮಾರಸ್ವಾಮಿ, ಬಿರಡಹಳ್ಳಿ ಗ್ರಾ.ಪಂ ಅಧ್ಯಕ್ಷ ಎಸ್.ಡಿ ಸತೀಶ್, ಜಾತಹಳ್ಳಿ ಪುಟ್ಟಸ್ವಾಮಿ, ಸಚ್ಚಿನ್ ಪ್ರಸಾದ್, ಮಲ್ನಾಡ್ ಜಾಕೀರ್‌ ಮುಂತಾದವರು ಉಪಸ್ಥಿತರಿದ್ದರು.