ಚೌಡನಹಳ್ಳಿ, ಕಾಡಾನೆ ದಾಳಿ, ಬೇಲೂರು, ಪ್ರತಿಭಟನೆ,Chowdanahalli, wild elephant attack, Belur, protestಶಾಶ್ವತ ಪರಿಹಾರ ಒದಗಿಸಬೇಕು, ಸ್ಥಳಕ್ಕೆ ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಬರಬೇಕು. ಅಲ್ಲಿಯವರೆಗೆ ಮೃತದೇಹ ಎತ್ತುವುದು ಬೇಡ ಎಂದು ಪಟ್ಟು ಸಡಿಲಿಸದೆ ಪ್ರತಿಭಟನೆ ನಡೆಸಿದರು. ಸಂಸದ ಶ್ರೇಯಸ್ ಪಾಟೀಲ್ ಹಾಗೂ ಶಾಸಕ ಎಚ್.ಕೆ.ಸುರೇಶ್ ಅವರ ಮನವೊಲಿಕೆಗೂ ಜಗ್ಗಲಿಲ್ಲ. ಜಯಮ್ಮಅವರು ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಒಂಟಿ ಕಾಡಾನೆ ದಾಳಿ ನಡೆಸಿದೆ . ಸ್ಥಳಕ್ಕೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಬಂದು ಶಾಶ್ವತ ಪರಿಹಾರ ನೀಡುವವರೆಗೆ, ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಗ್ರಾಮಸ್ಥರು ಹಾಗೂ ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ಮನವೋಲಿಕೆಗೆ ಜಗ್ಗದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಬಿಕ್ಕೋಡು ಹೋಬಳಿಯ ಚೌಡನಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಜಯಮ್ಮ (60) ಮೃತಪಟ್ಟ ಹಿನ್ನಲೆಯಲ್ಲಿ ಗ್ರಾಮಸ್ಥರು ಹಾಗೂ ರೈತಪರ ಸಂಘಟನೆಗಳು ಗ್ರಾಮದಲ್ಲಿ ಮೃತದೇಹವಿಟ್ಟು ಶನಿವಾರದಿಂದ ನಡೆಸುತ್ತಿರುವ ಪ್ರತಿಭಟನೆ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು.ಶಾಶ್ವತ ಪರಿಹಾರ ಒದಗಿಸಬೇಕು, ಸ್ಥಳಕ್ಕೆ ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಬರಬೇಕು. ಅಲ್ಲಿಯವರೆಗೆ ಮೃತದೇಹ ಎತ್ತುವುದು ಬೇಡ ಎಂದು ಪಟ್ಟು ಸಡಿಲಿಸದೆ ಪ್ರತಿಭಟನೆ ನಡೆಸಿದರು. ಸಂಸದ ಶ್ರೇಯಸ್ ಪಾಟೀಲ್ ಹಾಗೂ ಶಾಸಕ ಎಚ್.ಕೆ.ಸುರೇಶ್ ಅವರ ಮನವೊಲಿಕೆಗೂ ಜಗ್ಗಲಿಲ್ಲ. ಜಯಮ್ಮಅವರು ಜಾನುವಾರುಗಳನ್ನು ಮೇಯಿಸಲು ತೆರಳಿದ್ದ ವೇಳೆ ಒಂಟಿ ಕಾಡಾನೆ ದಾಳಿ ನಡೆಸಿದೆ . ಸ್ಥಳಕ್ಕೆ ಮುಖ್ಯಮಂತ್ರಿಗಳು, ಅರಣ್ಯ ಸಚಿವರು ಬಂದು ಶಾಶ್ವತ ಪರಿಹಾರ ನೀಡುವವರೆಗೆ, ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಗ್ರಾಮಸ್ಥರು ಹಾಗೂ ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ಮನವೋಲಿಕೆಗೆ ಜಗ್ಗದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.ಶಾಸಕ ಎಚ್.ಕೆ.ಸುರೇಶ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಿ, ಪರಿಸ್ಥಿತಿಯ ಬಗ್ಗೆ ವಿವರಿಸಿದಾಗ, ಮುಖ್ಯಮಂತ್ರಿಗಳು ಕೂಡಲೇ ರೈಲ್ವೆ ಬ್ಯಾರಿಕೇಡ್ ಹಾಕಲು ಸೂಚನೆ ಕೊಡುತ್ತೇನೆ. ಅತಿ ಶ್ರೀಘ್ರದಲ್ಲೇ ಸಭೆ ನಡೆಸೋಣ. ನನಗೆ ಸ್ವಲ್ಪ ಕಲಾವಕಾಶ ಕೊಡಿ ಎಂದು ಮನವಿ ಮಾಡಿದರೂ ಪ್ರತಿಭಟನಾಕಾರರು ಪಟ್ಟು ಸಡಿಲಿಸಲಿಲ್ಲ.ರೈತಸಂಘದ ಜಿಲ್ಲಾಘಟಕದ ಪ್ರಧಾನಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ನಾವು ಹೋರಾಟ ಮಾಡಿ ಸೋತು ಹೋಗಿದ್ದೇವೆ, ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿಗೆ ಬರಲಿ, ಅವರು ಇರುವುದೇ ಜನರ ಸಮಸ್ಯೆಗಳನ್ನು ಬಗ್ಗೆಹರಿಸಲು ತಾನೇ, ಅಧಿಕಾರಿ ಏನೋ ಹೇಳಿ ಪಾಲಾಯನ ಮಾಡುತ್ತ, ಜನರ ದಿಕ್ಕು ತಪ್ಪಿಸುತ್ತಾ ಕಾಲಹರಣ ಮಾಡುತ್ತಿರಾ, ಮಾನವ ವಿರೋಧಿ ಕಾನೂನುಗಳಿಂದ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ಸಾಕಷ್ಟು ಭಾರಿ ಪ್ರತಿಭಟನೆ ನಡೆಸಿದ್ದಾಗ, ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಓಡಿಸುವುದಾಗಿ ಲಿಖಿತ ರೂಪದಲ್ಲಿ ಬರದುಕೊಟ್ಟಿದ್ದಾರೆ, ಸಚಿವರೂ ಸಹ ಭರವಸೆ ನೀಡಿದ್ದರೂ ಆದರೂ ಕೂಡ ಕಾರ್ಯಗತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಫಿಬೆಳೆಗಾರರ ಸಂಘದ ತಾಲ್ಲೂಕು ಘಟಕದ ಖಜಾಂಚಿ ಕೌಶಿಕ್ ಮಾತನಾಡಿ, ಅಧಿಕಾರಿಗಳು ಇವತ್ತು ಇದ್ದು,ನಾಳೆ ಹೋಗುತ್ತಾರೆ ಆದರೆ ನಾವುಗಳು ಇಲ್ಲಿಯೇ ಬದುಕು ಕಟ್ಟಿಕೊಂಡವರು, ಆನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದಕ್ಕೆ ಅಧಿಕಾರಿಗಳ ನಿರ್ಲಕ್ಯವೇ ಕಾರಣವಾಗಿದೆ ಎಂದು ದೂರಿದರು. ಸಿಸಿಎಫ್‌ ಏಡುಕೊಂಡಲ ಮಾತನಾಡಿ, ಎರಡು ಗುಂಪಿನ ಕಾಡಾನೆಗಳನ್ನು ಕುಮ್ಕಿ ಆನೆಗಳ ಸಹಕಾರದಿಂದ ಭದ್ರಾಅರಣ್ಯಕ್ಕೆ ಓಡಿಸಲು ಇಂದಿನಿಂದಲೇ ಮುಂದಾಗಲಾಗುವುದು, ಪ್ರತಿ 15 ದಿನಕ್ಕೊಮ್ಮೆ ಸಭೆ ಕರೆದು, ಮಾಹಿತಿ ನೀಡಲಾಗುವುದು ಎಂದು ತಿಳಿಸಿದರೂ ಇದಕ್ಕೆ ಒಪ್ಪದ ಪ್ರತಿಭಟನಾಕಾರರು ನೀವು ಹುಸಿ ಭರವಸೆಗಳನ್ನು ನೀಡುತ್ತಿರಾ, 20 ಆನೆಗಳು ಇದ್ದರೂ 4 ಆನೆ ಅಂತ ಸುಳ್ಳು ಹೇಳುತ್ತಿರಾ, ನೀವು ಹೇಳಿದಂತೆ ಕೆಲಸ ಮಾಡುವುದಿಲ್ಲ ಎಂದು ಧಿಕ್ಕಾರ ಕೂಗಿದರು.

ಜಯಮ್ಮನವರ ಪತಿ ಚಿಕ್ಕಯ್ಯನವರಿಗೆ 20 ಲಕ್ಷದ ಮೊತ್ತದ ಪರಿಹಾರದ ಚೆಕ್ ನೀಡಲಾಯಿತು.ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ 13 ಸಾವುಗಳು ಸಂಭವಿಸಿದ್ದು, ಕೃಷಿಕರು ಆತಂಕದ ಜೀವನ ನಡೆಸುತ್ತಿದ್ದಾರೆ, ಹೇಳಿದಂತೆ ಕೂಡಲೇ ಕಾಡಾನೆಗಳನ್ನು ಓಡಿಸಬೇಕು, ಜಯಮ್ಮನವರೇ ಸಾವೇ ಕೊನೆಯಾಗಬೇಕು ಮತ್ತೆ ಯಾವುದೇ ಅಗಘಡವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು.

ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ಐದಾರು ವರ್ಷಗಳಿಂದ ಈ ಭಾಗದ ಜನ ಕಾಡಾನೆ ಸಮಸ್ಯೆಗಳಿಂದ ತತ್ತರಿಸಿ ಹೋಗಿರುವುದು ನಿಜ . ಆದರೆ ನಿಂತ ನೆಲೆಯಲ್ಲಿ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ, ಸರ್ಕಾರದ ಗಮನಕ್ಕೆ ತಂದಿದ್ದೇನೆ, ಉನ್ನತ ಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಿದೆ ಈಗ ಗೌರವಯುತವಾಗಿ ಶವಸಂಸ್ಕಾರ ಮಾಡಿ, ನಂತರ ಹೋರಾಟ ಮಾಡಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಡಿ.ಸಿ ಮನವಿಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನೀವು ಇದನ್ನು ಹೇಳಲು ಹಾಸನದಿಂದ ಬರುವ ಅವಶ್ಯಕತೆ ಇರಲಿಲ್ಲ. ನಮಗಿರುವ ಕಾಡಾನೆ ಸಮಸ್ಯೆ ನೀವು ಕಬಡ್ಡಿ, ಕೋಲಾಟ ಆಡಿದಂತೆ ಅಲ್ಲ ಎಂದು ಕಿಡಿಕಾರಿದರು.