ಮತಚಲಾವಣೆ ಹಕ್ಕು ಕಸಿದುಕೊಂಡರೆ ಪ್ರಜಾಪ್ರಭುತ್ವ ನಾಶ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Oct 12 2025, 01:00 AM IST

ಮತಚಲಾವಣೆ ಹಕ್ಕು ಕಸಿದುಕೊಂಡರೆ ಪ್ರಜಾಪ್ರಭುತ್ವ ನಾಶ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಮತಚಲಾವಣೆ ಹಕ್ಕು ಕಸಿದುಕೊಂಡರೆ ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದ ಶಾಸಕ ಜಿ.ಎಚ್.ಶ್ರೀನಿವಾಸ್ ಮತಗಳ್ಳತನ ವಿರೋಧಿಸಿ ಎಲ್ಲಾ ಪಂಚಾಯಿತಿಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಹೇಳಿದ್ದಾರೆ.

- ಮತಗಳ್ಳತನ ವಿರೋಧಿಸಿ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ಮತ್ತು ಸಹಿ ಸಂಗ್ರಹ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮತಚಲಾವಣೆ ಹಕ್ಕು ಕಸಿದುಕೊಂಡರೆ ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದ ಶಾಸಕ ಜಿ.ಎಚ್.ಶ್ರೀನಿವಾಸ್ ಮತಗಳ್ಳತನ ವಿರೋಧಿಸಿ ಎಲ್ಲಾ ಪಂಚಾಯಿತಿಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಹೇಳಿದ್ದಾರೆ.ಶನಿವಾರ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದ ಬಳಿ ಶಾಸಕ ಜಿ.ಎಚ್.ಶ್ರೀನಿವಾಸ್ ನೇತೃತ್ವದಲ್ಲಿ ಮತಗಳ್ಳತನ ವಿರೋಧಿಸಿ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಡೆದ ಪ್ರತಿಭಟನೆ ಮತ್ತು ಸಹಿ ಸಂಗ್ರಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ಇದೊಂದು ಬಹಳ ಗಂಭೀರ ಮತ್ತು ಯೋಚನೆ ಮಾಡಬೇಕಾದ ವಿಚಾರ. ಅಸ್ಸಾಂನಲ್ಲಿ ಮತದಾರರ ಪಟ್ಟಿಯಿಂದ 1 ಲಕ್ಷ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಚುನಾವಣೆ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ಕೋಟ್ಯಂತರ ಹುದ್ದೆಗಳ ಸೃಷ್ಟಿ ಎಲ್ಲವೂ ಸುಳ್ಳು, ಬಿಜೆಪಿ ಅದಾನಿ, ಅಂಬಾನಿ ಇಂಥವರಿಗೆ ಸಹಾಯ ಮಾಡಲಾಗುತ್ತಿದೆ. ಬಡವರಿಗೆ ಸಹಾಯ ಮಾಡುತ್ತಿಲ್ಲ ಎಂದು ಹೇಳಿದರು.

ಸರ್ವ ಜನಾಂಗ ಅಭಿವೃದ್ಧಿ ಆದರೆ ದೇಶದ ಅಭಿವೃದ್ಧಿಯಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ತಲಾ ಆದಾಯ ಹೆಚ್ಚುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿ ಕೆಲಸಕ್ಕೆ ಹೋಗುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹೋರಾಟ ನಡೆಸಲಾಗುತ್ತಿದೆ. ಈ ಹೋರಾಟ ಅತ್ಯಂತ ಅವಶ್ಯಕ ಮತ್ತು ಜವಾಬ್ದಾರಿ ಯುತವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಪರೇಶನ್ ಕಮಲದ ಮೂಲಕ ಹಿಂಬಾಗಿಲ ಪ್ರವೇಶ ಮಾಡಿದ್ದಾರೆ, 11 ವರ್ಷಗಳಿಂದ ಮೋದಿ ಸರ್ಕಾರ ಅವೈಜ್ಞಾನಿಕ ಕಾನೂನು ಜಾರಿ ಮಾಡುತ್ತಿದೆ. ಜಿಎಸ್ಟಿ ತೆರಿಗೆ, ನಿರಂತರವಾಗಿ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುತ್ತಿದೆ. ಹಿಂದುಳಿದವರ, ರೈತರ, ಶ್ರಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ. ನಮ್ಮ ವೋಟನ್ನು ನಾವು ರಕ್ಷಿಸಿಕೊಳ್ಳಬೇಕಾದ ಸ್ಥಿತಿ ಇದೆ. ಬಿಜೆಪಿ ಆಡಳಿತ ವಿಫಲವಾಗಿದೆ. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ ಪಕ್ಷದ ವರಿಷ್ಟರಾದ ರಾಹುಲ್ ಗಾಂಧಿ ಮತಗಳ್ಳತನ ವಿಚಾರವನ್ನು ಹೊರಕ್ಕೆ ತಂದಿದ್ದಾರೆ. ಮತಗಳ್ಳತನವನ್ನು ಖಂಡಿಸಬೇಕು ಎಂದರು.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ನಮ್ಮ ಪಕ್ಷದ ವರಿಷ್ಠರು ರಾಹುಲ್ ಗಾಂಧಿ ಮತಗಳ್ಳತನ ವಿಚಾರವಾಗಿ ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ. ಬಹಳಷ್ಟು ಕ್ಷೇತ್ರಗಳಲ್ಲಿ ಮತಗಳ್ಳತನವಾಗುತ್ತಿದೆ, ಮತಗಳ್ಳತನ ವಿರುದ್ಧ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಮರ ಸಾರಿದ್ದಾಕ್ಕಾಗಿ ಬಿಹಾರ ರಾಜ್ಯದಲ್ಲಿ ಹೆಚ್ಚುವರಿ 40 ಲಕ್ಷ ಕಳ್ಳ ಮತಗಳನ್ನು ಕೈಬಿಡಲಾಗಿದೆ ಎಂದು ವಿವರಿಸಿದರು, ಇದು ಸಂವಿಧಾನಕ್ಕೆ ಸಿಕ್ಕ ಜಯ ಎಂದು ಹೇಳಿದರು.ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣೆ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಹಾಗೂ ಎಲ್ಲಾ ಇಡಿ ಸಿಬಿಐ ಸಾಂವಿಧಾನಿಕ ಹುದ್ದೆಗಳನ್ನು ದುರುಪ ಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದರು.ಜಿಪಂ ಮಾಜಿ ಅಧ್ಯಕ್ಷ ಎಚ್.ವಿಶ್ವನಾಥ್, ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಜ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಪುರಸಭಾ ಮಾಜಿ ಅಧ್ಯಕ್ಷೆ ಟಿ.ಎಸ್. ಧರ್ಮರಾಜ್, ಪರಮೇಶ್, ಹೇಮಲತ ರೇವಣ್ಣ, ಮುಖಂಡರಾದ ಎಲ್.ಟಿ.ಹೇಮಣ್ಣ, ಗಿರೀಶ್, ಟಿ.ಎನ್.ಜಗದೀಶ್, ವಿಜಯಾಬಾಯಿ, ಇರ್ಷಾದ್, ಪರುಶುರಾಮ್,ಮತ್ತಿತರರು ಮಾತನಾಡಿದರು.ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಕುಮಾರ್, ಪುರಸಭೆ ಸದಸ್ಯರು, ಪುರಸಭೆ ನಾಮಿನಿ ಸದಸ್ಯರು, ಪುರಸಭಾ ಮಾಜಿ ಅಧ್ಯಕ್ಷ ಆರ್. ಬಸವರಾಜ್, ಪಕ್ಷದ ಮುಖಂಡರು, ಮತ್ತತಿರರು ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-ಫೋಟೋ ಇದೆಃ11ಕೆಟಿಆರ್.ಕೆ.1ಃ ಮತಗಳ್ಳತನ ಪ್ರತಿಭಟಿಸಿ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಏರ್ಪಾಡಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಪುರಸಭೆ ಅಧ್ಯಕ್ಷರು ವಸಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಯು.ಫಾರೂಕ್ ನಗರ ಕಾಂಗ್ರೆಸ್ ಅಧ್ಯಕ್ಷರು ಟಿ.ಎಸ್.ಪ್ರಕಾಶ್ ವರ್ಮ, ಜಿ.ಪಂ.ಮಾಜಿ ಅಧ್ಯಕ್ಷರು ಹೆಚ್.ವಿಶ್ವನಾಥ್ ಮತ್ತಿತತರು ಭಾಗವಹಿಸಿದ್ದರು.