ಸಾರಾಂಶ
ಮಾನವ ಹಕ್ಕುಗಳ ರಕ್ಷಣೆಗೆ ಪ್ರಜಾಪ್ರಭುತ್ವವು ಅಗತ್ಯವಾಗಿದೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
ಮಾನವ ಹಕ್ಕುಗಳ ರಕ್ಷಣೆಗೆ ಪ್ರಜಾಪ್ರಭುತ್ವವು ಅಗತ್ಯವಾಗಿದೆ ಎಂದು ತಹಶೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.ಸೋಮವಾರ ಕೊಟ್ಟೂರು ತಾಲೂಕು ಆಡಳಿತ, ತಾಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನನ್ನ ಮತ ನನ್ನ ಹಕ್ಕು ಘೋಷ್ಯವಾಕ್ಯದಡಿ ಪ್ರಜಾಪ್ರಭುತ್ವ ದಿನ ಅರ್ಥಪೂರ್ಣವಾಗಿ ಆಚರಣೆಗೊಳ್ಳಬೇಕು. ಈ ಕಾರಣಕ್ಕಾಗಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅಲ್ಲದೇ ವಿಶ್ವದ ಅತಿ ಹೆಚ್ಚು ಮತದಾರರನ್ನು ಹೊಂದಿರುವ ದೇಶಗಳಲ್ಲಿ ನಮ್ಮ ರಾಷ್ಟ್ರವೂ ಒಂದು ಎಂದರು.ತಾಪಂ ಇಒ ಡಾ. ಬಿ. ಆನಂದಕುಮಾರ್ ಮಾತನಾಡಿ, ಪ್ರತಿಯೊಬ್ಬ ನಾಗರಿಕರಿಗೆ ಭಾರತ ಸಂವಿಧಾನ ನೀಡಿದ ಹಕ್ಕು ಮತದಾನವಾಗಿದ್ದು, ಇದನ್ನು ಪ್ರತಿಯೊಬ್ಬರು ಪಾಲಿಸಿ ಸಂವಿಧಾನ ಬಲಪಡಿಸಬೇಕಿದೆ ಎಂದರು.ಇಲ್ಲಿನ ಮರಿಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ತಹಶೀಲ್ದಾರ್ ಭಾರತದ ಸಂವಿಧಾನ ಪ್ರಸ್ತಾವನೆ ಓದಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಡಿಎಸ್ಎಸ್ ಮುಖಂಡರಾದ ತಗ್ಗಿನಕೆರೆ ಕೊಟ್ರೇಶ್, ಬದ್ದಿ ಮರಿಸ್ವಾಮಿ, ಬಿ. ದುರ್ಗಪ್ಪ, ಟಿ. ಹನುಮಂತಪ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಯೋಗೇಶ್ವರ ದೀನ್ನೆ, ಪ್ರಾಥಮಿಕ ಶಾಲೆ ಶಿಕ್ಷಕರ ಅಧ್ಯಕ್ಷ ಮರುಳನಗೌಡ, ಇಸಿಓ ನಿಂಗಪ್ಪ, ಆನಂದ ದೇವರ ಕೊಳ, ನಿಲಯ ಮೇಲ್ಚಿಚಾರಕರಾದ ವೀರೀಶ್ ತುಪ್ಪದ, ಎಚ್. ಎಂ. ಸದಾನಂದ, ಬಸವರಾಜ್ ಮತ್ತು ಇತರರು ಇದ್ದರು.ಸಿ.ಮ. ಗುರುಬಸವರಾಜ್ ನಿರೂಪಿಸಿದರು.
ನಂತರ ಪಟ್ಟಣ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಸೇರಿದಂತೆ ಇತರ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಸೈಕಲ್ ಜಾಥಾ ಕೈಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಉಜ್ಜಯನಿ ವೃತ್ತದವರೆಗೂ ಸಾಗಿದರು.