ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇಶದಲ್ಲಿ ಸಾಕಷ್ಟು ಪಕ್ಷಗಳಿವೆ ಆದರೆ ಪ್ರಜಾತಂತ್ರ ವ್ಯವಸ್ಥೆಗೆ ಬಲ ತುಂಬುವ ಪಕ್ಷ ಎಂದರೆ ಅದು ಬಿಜೆಪಿ ಮಾತ್ರ ಎಂದು ಲೋಕಸಭಾ ಚುನಾವಣೆ ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಮತ್ತು ಮಂಡಲ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆಗೊಳಿಸಿ ಮಾತನಾಡಿ, ಸಮಗ್ರ ದೇಶವನ್ನು ವಿಕಸಿತ ಭಾರತನ್ನಾಗಿಸುವಲ್ಲಿ ದೇಶವಾಸಿಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈಜೋಡಿಸಬೇಕಾಗಿದೆ. ಮೋದಿಯವರು ಸತತ 3ನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವನ್ನಾಗಿಸಲು ಕೆಲಸ ಮಾಡುತ್ತಿದ್ದು, ಪ್ರಸ್ತುತ ಅರ್ಥಿಕ ಸುಭದ್ರತೆಯಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದ್ದು ನಾವುಗಳು ಬಿಜೆಪಿಯನ್ನು ಅತ್ಯಂತ ಬಲಿಷ್ಠಗೊಳಿಸುವ ಮೂಲಕ ಮೋದಿಯವರನ್ನು ಮುಂದಿನ ದಿನಗಳಲ್ಲಿ ಕೂಡ ಪ್ರಧಾನಿಯಾಗಿ ಮಾಡುವ ಮೂಲಕ ದೇಶವನ್ನು ಆರ್ಥಿಕವಾಗಿ 3 ನೇ ಸ್ಥಾನಕ್ಕೆ ತರಬೇಕಿದೆ ಎಂದು ಹೇಳಿದರು.
ಒಂದು ಪಕ್ಷದ ನಿಜವಾದ ಶಕ್ತಿ ಎಂದರೆ ಅದು ಆ ಪಕ್ಷದ ಕಾರ್ಯಕರ್ತರ ಪಡೆಯಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ನರೇಂದ್ರಮೋದಿಯವರು ಬಿಜೆಪಿ ಸದಸ್ಯತ್ವಕ್ಕೆ ಚಾಲನೆ ನೀಡಿದ್ದು, ಇದೀಗ ನಾವೆಲ್ಲರೂ ಸೇರಿ ಹೆಚ್ಚಿನ ಸದಸ್ಯತ್ವ ಮಾಡಿಸುವ ಮೂಲಕ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲು ಪಕ್ಷದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.2014ರ ಚುನಾವಣೆಯಲ್ಲಿ ಹೊನ್ನಾಳಿ ತಾಲೂಕು ಏಳುವರೆ ಸಾವಿರ ಲೀಡ್ ಕೊಟ್ಟಿತ್ತು, ನಂತರ 2019ರಲ್ಲಿ 13 ಸಾವಿರ ಲೀಡ್, ಆದರೆ ನಂತರದಲ್ಲಿ 2024ರ ಚುನಾವಣೆಯಲ್ಲಿ ಸುಮಾರು 7ಸಾವಿರ ಮತಗಳಷ್ಟು ಹಿಂದೆ ಉಳಿದಿದೆ ಎಂದರೆ ಈ ತಾಲೂಕಿನ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರೂ ಚಿಂತನೆ ಮಾಡಬೇಕು ಹಾಗೂ ಪಕ್ಷಕ್ಕಾಗಿ ಹೆಚ್ಚು ಸದಸ್ಯತ್ವ ಮಾಡಬೇಕು ಎಂದು ಕರೆ ನೀಡಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮುಖಂಡ ಆರಕೆರೆ ಎ.ಬಿ.ಹನುಮಂತಪ್ಪ, ಬಿಜೆಪಿ ಅತೀ ಹೆಚ್ಚು ಸದಸ್ಯರನ್ನೊಳಗೊಂಡ ಪಕ್ಷವಾಗಿದ್ದು ಸದೃಢ ದೇಶ ನಿರ್ಮಾಣಕ್ಕೆ ನರೇಂದ್ರ ಮೋದಿಯವರಂತಹ ಸಮರ್ಥ ಪ್ರಧಾನಿ ಅಗತ್ಯವಾಗಿ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಂದು ಮತ್ತು ಭವಿಷ್ಯದಲ್ಲಿ ಕೂಡ ಮೋದಿಯವರಂತಹ ಪ್ರಧಾನಿಯನ್ನು ದೇಶ ಹೊಂದಿರಬೇಕು ಎಂದರೆ ಅವರನ್ನು ನಿರಂತರ ಗೆಲ್ಲಿಸಿಕೊಂಡು ಬರಬೇಕಾಗುತ್ತದೆ ಎಂದು ಹೇಳಿದರು.ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಮಾತನಾಡಿ, ಎಂದು ಕಾಲದಲ್ಲಿ ದಾವಣಗೆರೆ ಬಿಜೆಪಿ ಭಧ್ರ ಕೋಟಿಯಾಗಿತ್ತು ಅದರೇ ಇದೀಗ ಕೆಲವಾರು ಕಾರಣಗಳಿಂದ ಪಕ್ಷ ಗೆಲ್ಲುವಲ್ಲಿ ವಿಫಲವಾಗಿದೆ ಇದನ್ನೇ ಪಾಠವೆಂದು ಪರಿಗಣಿಸಿ ಮುಂದಿನ ದಿನಗಳಲ್ಲಿ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ಜಿಪಂ, ಮಾಜಿ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷ ಕೆ.ವಿ.ಚನ್ನಪ್ಪ, ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ಬಿಜೆಪಿ ಜಿಲ್ಲಾ ಮುಖಂಡ ಶಾಂತರಾಜ್ ಪಾಟೀಲ್ ಮಾತನಾಡಿದರು. ನ್ಯಾಮತಿ ಸಿ.ಕೆ.ರವಿ ಅವರು ಮೊಬೈಲ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಸುವ ವಿಧಾನ ಕುರಿತು ವಿವರಿಸಿದರು.ಕಾರ್ಯಕ್ರಮದಲ್ಲಿ ನೆಲಹೊನ್ನೆ ದೇವರಾಜ್, ಯಕ್ಕನಹಳ್ಳಿ ಜಗದೀಶ್, ನ್ಯಾಮತಿ ನಟರಾಜ್, ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.