ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ರೆ ತೆರುವು ?

| N/A | Published : Jul 08 2025, 01:48 AM IST / Updated: Jul 08 2025, 08:32 AM IST

ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ್ರೆ ತೆರುವು ?
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತಕ್ಷಣ ತೆರುವುಗೊಳಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದರು.

ಶಿವಮೊಗ್ಗ: ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಮನೆಗಳನ್ನು ತಕ್ಷಣ ತೆರುವುಗೊಳಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದರು.

ಸೋಮವಾರ ಬಿಜೆಪಿ ಶಿವಮೊಗ್ಗ ನಗರ ಘಟಕವು ಈ ಕುರಿತು ಆಯುಕ್ತರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.ರಾಗಿಗುಡ್ಡ ಬಂಗಾರಪ್ಪ ಬಡಾವಣೆಯಲ್ಲಿ ಜುಲೈ 5ರಂದು ಕೆಲ ಮುಸ್ಲಿಂ ಕಿಡಿಗೇಡಿಗಳು ನಗರದಲ್ಲಿ ಶಾಂತಿ ಸೌಹಾರ್ದತೆಯನ್ನು ಕೆಡಿಸುವ ಸಲುವಾಗಿ ಬಡಾವಣೆಯಲ್ಲಿದ್ದ ಗಣೇಶನ ಮೂರ್ತಿಯನ್ನು ಕಾಲಿನಿಂದ ಒದ್ದು, ನಾಗರ ದೇವರ ವಿಗ್ರಹವನ್ನು ಚರಂಡಿಗೆ ಬಿಸಾಡಿ ಹೋಗಿರುವುದು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದರು. 

ಸಿದ್ದಿಕಿ ಎಂಬ ಮುಸ್ಲಿಂ ಯುವಕನ ಅಲ್ಲಿಯೇ ರಸ್ತೆ ಪಕ್ಕದಲ್ಲಿ ಪಾಲಿಕೆ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿದ್ದು, ಕೆಲ ದಿನಗಳಿಂದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣವಾಗಿದೆ ಎನ್ನುವ ಮಾಹಿತಿಯನ್ನೂ ಸ್ಥಳೀಯರು ನೀಡಿದ್ದರಿಂದ ಅಧಿಕಾರಿಗಳು ಪರಿಶೀಲಿಸಬೇಕು. ಕಟ್ಟಡ ಆಕ್ರಮವಾಗಿದ್ದರೆ ಅದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದಲ್ಲಿ ಸಾರ್ವಜನಿಕರಿಗಾಗಿ ಮೀಸಲಿಟ್ಟ ಸರ್ಕಾರಿ ಜಾಗಗಳನ್ನು ಅನ್ಯಕೋಮಿನವರು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ಈಗಾಗಲೇ ನಿರ್ಮಿಸಿರುವುದು ಸಾರ್ವಜನಿಕರಿಂದ ಗಮನಕ್ಕೆ ಬಂದಿದ್ದು, ಹಾಗಾಗಿ ಆ ಪ್ರದೇಶದಲ್ಲಿರುವ ಎಲ್ಲಾ ಸರ್ಕಾರಿ ಜಾಗಗಳಿಗೆ ಬೇಲಿಗಳನ್ನು ಹಾಕಿಸಿ, ಸ್ವಚ್ಛತೆ ಮಾಡಿಸಿ, ಪಾಲಿಕೆ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಆಯುಕ್ತ ಮಾಯಣ್ಣಗೌಡ, ಕರ್ನಾಟಕ ಮುನ್ಸಿಪಲ್ ಕಾಯ್ದೆಯ 187ನೇ ವಿಧಿಯ ಅನ್ವಯ ಪಾಲಿಕೆ ಜಾಗದಲ್ಲಿ ಯಾರೇ ಆಗಲಿ ಅನಧಿಕೃತ ಕಟ್ಟಡ ಕಟ್ಟಿದರೆ ಅವುಗಳನ್ನು ಮುಲಾಜಿಲ್ಲದೆ ನೆಲಸಮ ಮಾಡಲು ಅವಕಾಶವಿದೆ.

 ಶಿವಮೊಗ್ಗ ನಗರದಲ್ಲೂ ಪಾಲಿಕೆ ಆಸ್ತಿ ಕಬಳಿಕೆ ಆಗಿದ್ದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕೆಡವಲಾಗುವುದು. ಇನ್ನೆರಡು ದಿನದ ಒಳಗಾಗಿ ಸದರಿ ಅನಧಿಕೃತ ಕಟ್ಟಡ ನೆಲಸಮ ಮಾಡಲಾಗುವುದು ಎಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ ರೆಡ್ಡಿ. ಪ್ರಮುಖರಾದ ನಾಗರಾಜ್, ಜ್ಞಾನೇಶ್ವರ, ಮಂಜುನಾಥ, ಪ್ರಭು, ಶಿವಕುಮಾರ್, ಅನಿತಾ ರವಿಶಂಕರ, ವಿಶ್ವನಾಥ, ಸುರೇಖಾ ಮುರಳೀಧರ, ಸಂತೋಷ್ ಬಳ್ಳೆಕೆರೆ, ರಶ್ಮಿ ಶ್ರೀನಿವಾಸ್, ಚೈತ್ರಾ ನಾಯಕ್, ಕಿರಣ್, ಶಿವಾನಂದ ಮೊದಲಾದವರಿದ್ದರು.

Read more Articles on