ಡೆಂಘೀ, ಚಿಕೂನ್ ಗುನ್ಯಾದಿಂದ ಜಾಗೃತರಾಗಿ: ಟಿಎಚ್‌ಒ ಡಾ.ಡಿ.ಟಿ.ಮಂಜುನಾಥ

| Published : Aug 26 2024, 01:30 AM IST

ಸಾರಾಂಶ

ಡೆಂಘೀ ಹಾಗೂ ಚಿಕೂನ್ ಗುನ್ಯಾ ಜ್ವರಗಳು ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ, ಜನರು ಜಾಗೃತರಾಗಿರಬೇಕು. ನಿರ್ದಿಷ್ಟ ಚಿಕಿತ್ಸೆ ಇಲ್ಲದ ಹಠಾತ್ತನೆ ಬರುವ ಡೆಂಘೀ ಅಧಿಕ ಜ್ವರ, ತೀವ್ರ ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ವಾಕರಿಕೆ ಮತ್ತು ವಾಂತಿ ರೋಗದ ಲಕ್ಷಣಗಳಾಗಿವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಡೆಂಘೀ ಹಾಗೂ ಚಿಕೂನ್ ಗುನ್ಯಾ ಜ್ವರಗಳು ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ, ಜನರು ಜಾಗೃತರಾಗಿರಬೇಕು ಎಂದು ಪ್ರಭಾರಿ ತಾಲೂಕು ಆರೋಗ್ಯಾಧಿಕಾರಿ ಡಾ. ಡಿ.ಟಿ.ಮಂಜುನಾಥ ಹೇಳಿದರು.

ತಾಲೂಕಿನ ಬಲ್ಲೇನಹಳ್ಳಿ ಆರೋಗ್ಯ ಕೇಂದ್ರ ವ್ಯಾಪ್ತಿಯ ನೆಲಮನೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಡೆಂಘೀ ಜ್ವರ ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿರ್ದಿಷ್ಟ ಚಿಕಿತ್ಸೆ ಇಲ್ಲದ ಹಠಾತ್ತನೆ ಬರುವ ಡೆಂಘೀ ಅಧಿಕ ಜ್ವರ, ತೀವ್ರ ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ವಾಕರಿಕೆ ಮತ್ತು ವಾಂತಿ ರೋಗದ ಲಕ್ಷಣಗಳಾಗಿವೆ. ರೋಗದ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ಮುಖ್ಯ ಶಿಕ್ಷಕ ಕೃಷ್ಣಪ್ಪ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜ, ಸಹ ಶಿಕ್ಷಕರಾದ ಸಾರ್ಗ, ಲಕ್ಷ್ಮೀ, ಸವಿತ, ವಿಶೇಷ ಸಂಪನ್ಮೂಲ ಶಿಕ್ಷಕ ಶಿವರಾಜು, ಆಶಾ ಕಾರ್ಯಕರ್ತೆ ಸುಧಾಮಣಿ ಉಪಸ್ಥಿತರಿದ್ದರು.

ಮಾಹಿತಿ ಹಕ್ಕು ಹೋರಾಟ ವೇದಿಕೆ ಪದಾಧಿಕಾರಿಗಳು

ಮಂಡ್ಯ: ಮಾಹಿತಿ ಹಕ್ಕು ವೇದಿಕೆ ಹೋರಾಟ ವೇದಿಕೆಗೆ ಜಿಲ್ಲೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಎನ್.ಹೇಮಂತ್ ಹೇಳಿದರು. ಎಂ.ಚಂದ್ರಶೇಖರ್ (ಗೌರವಾಧ್ಯಕ್ಷ), ಬಿ.ಟಿ.ಬಸವರಾಜು(ಜಿಲ್ಲಾಧ್ಯಕ್ಷ), ಪಿ.ಎನ್. ಅಶೋಕ್‌ಕುಮಾರ್ (ಉಪಾಧ್ಯಕ್ಷ), ಪಿ.ಎಂ.ಅಂಜಲಿ (ಉಪಾಧ್ಯಕ್ಷೆ), ಎಚ್.ಟಿ.ಶಿವಕುಮಾರ್ (ಪ್ರಧಾನ ಕಾರ್ಯದರ್ಶಿ), ಎಂ.ಎನ್.ಕೀರ್ತಿ (ಸಹ ಕಾರ್ಯದರ್ಶಿ), ಎಚ್.ಸಿ.ಚಂದ್ರಶೇಖರ್ (ಖಚಾಂಜಿ), ಜಯೇಂದ್ರ, ಎಚ್.ಆರ್.ರಾಜೇಶ್, ಎಂ.ವಿ.ಕುಮಾರ್, ಯು.ಪ್ರಶಾಂತ್, ಟಿ.ಮಂಜುನಾಥ್, ಎಚ್.ಎಸ್.ಕುಮಾರ್, ಎಸ್.ವಿ.ನವೀನ್, ಅರುಣ್‌ಕುಮಾರ್, ಆರ್.ರವಿ, ಆರ್.ಟಿ.ಮೂರ್ತಿ(ಸದಸ್ಯರು) ಅವರನ್ನು ನೇಮಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯಾದ್ಯಂತ ಸಾವಿರಾರೂ ಸದಸ್ಯರು ವೇದಿಕೆಯಲ್ಲಿದ್ದಾರೆ. ಅದರಂತೆ ಜಿಲ್ಲಾವಾರು ಶಾಖೆಗಳನ್ನು ಪ್ರಾರಂಭಿಸಲಾಗುತ್ತಿದೆ. ನಮ್ಮ ಹೋರಾಟಕ್ಕೆ ಸಾರ್ವಜನಿಕರ ಬೆಂಬಲ ಸಿಕ್ಕರೆ ಇನ್ನಷ್ಟು ಪರಿಣಾಮಗೊಳಿಸಬಹುದು ಎಂದು ವಿವರಿಸಿದರು. ವೇದಿಕೆ ರಾಜ್ಯ ಸಂಚಾಲಕ ಚೇತನ್‌ಕುಮಾರ್, ಮೈಸೂರು ಜಿಲ್ಲಾಧ್ಯಕ್ಷ ಪ್ರಶಾಂತ್, ಡಾ.ಶ್ರೀನಿವಾಸ್ ಶೆಟ್ಟಿ, ಪ್ರವೀಣ್ ಗೋಷ್ಠಿಯಲ್ಲಿದ್ದರು.