ಸಾರಾಂಶ
ಲಿಂಗಣಾಪುರ ಗ್ರಾಮದ ನಂದೀಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ನಿರ್ಲಕ್ಷ್ಯವಹಿಸಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಪಟ್ಟಣ ಠಾಣೆಯ ಎಎಸೈ ಶಿವಶಂಕರ್, ಮುಖ್ಯಪೇದೆ ರಘು ಎಂಬುವರನ್ನು ಅಮಾನತುಗೊಳಿಸಿ ಎಸ್ಪಿ ಪದ್ಮಿನಿ ಸಾಹೂ ಆದೇಶ ಹೊರಡಿಸಿದ್ದಾರೆ. ಕಾಯ್ದೆದಾಖಲಿಸುವ ಬೆದರಿಕೆ ಹಾಕಿದ್ದ ಕುರಿತು ಎಎಸ್ಪಿಯವರಿಗೆ ಜ.8ರಂದು ಲಿಖಿತ ದೂರು ನೀಡಲಾಗಿತ್ತು. ಅವರ ವರ್ತನೆಯಿಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಲಿಂಗಣಾಪುರ ಗ್ರಾಮದ ನಂದೀಶ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ನಿರ್ಲಕ್ಷ್ಯವಹಿಸಿ ಕರ್ತವ್ಯಲೋಪ ಎಸಗಿದ ಹಿನ್ನೆಲೆ ಪಟ್ಟಣ ಠಾಣೆಯ ಎಎಸೈ ಶಿವಶಂಕರ್, ಮುಖ್ಯಪೇದೆ ರಘು ಎಂಬುವರನ್ನು ಅಮಾನತುಗೊಳಿಸಿ ಎಸ್ಪಿ ಪದ್ಮಿನಿ ಸಾಹೂ ಆದೇಶ ಹೊರಡಿಸಿದ್ದಾರೆ.
ಸಂತ್ರಸ್ತರಿಂದ ದೂರು ಪಡೆಯದೆ ಬೇಜವಾಬ್ದಾರಿತನ, ಕರ್ತವ್ಯಲೋಪ ಎಸಗಿದ್ದು ಸಾಬೀತಾದ ಹಿನ್ನೆಲೆ ಮತ್ತು ನಂದೀಶ್ ಸಾವಿನ ಬಗ್ಗೆ ಪೋಷಕರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದ ಹಿನ್ನೆಲೆ ಎಎಸೈ ಮತ್ತು ಮುಖ್ಯಪೇದೆಯನ್ನು ಅಮಾನತುಗೊಳಿಸಿ ಕ್ರಮಕೈಗೊಳ್ಳಲಾಗಿದೆ. ಗೂಂಡಾ ಕಾಯ್ದೆ ದಾಖಲಿಸುವ ಬೆದರಿಕೆ ಹಾಕಿದವರ ವಿರುದ್ದ ಕ್ರಮವಿಲ್ಲ. ನಂದೀಶ್ ಸಾವಿನ ಪ್ರಕರಣದಲ್ಲಿ ಸಂಬಂಧಿ ಕಿರಣ್ ಎಂಬುವರನ್ನು ಪಿಎಸೈ ಮಹೇಶ್ ಕುಮಾರ್, ಪೇದೆ ಮಾದೇಶ್ ಠಾಣೆಗೆ ಕರೆಸಿಕೊಂಡು ಗೂಂಡಾ ಕಾಯ್ದೆದಾಖಲಿಸುವ ಬೆದರಿಕೆ ಹಾಕಿದ್ದ ಕುರಿತು ಎಎಸ್ಪಿಯವರಿಗೆ ಜ.8ರಂದು ಲಿಖಿತ ದೂರು ನೀಡಲಾಗಿತ್ತು. ಅವರ ವರ್ತನೆಯಿಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ, ನಮ್ಮ ಕುಟುಂಬದಲ್ಲೆ ಎರಡು ಸಾವು ಸಂಭವಿಸುವ ಅಪಾಯವಿತ್ತು. ಹಾಗಾಗಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾದ ಪಿಎಸೈ ಮತ್ತು ಮುಖ್ಯ ಪೇದೆ ಗೂಂಡಾ ಕಾಯ್ದೆ ಹಾಕುವುದಾಗಿ ಮತ್ತು ಲಘು ಪದ ಬಳಸಿನಿಂದಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿ ಲಿಖಿತ ಹೇಳಿಕೆ ಸಹಾ ನೀಡಿ ಪಿಎಸೈ ಮತ್ತು ಇನ್ನಿತರ ಕ್ರಮಕ್ಕೆ ಆಗ್ರಹಿಸಿದ್ದರು. ಈ ಪ್ರಕರಣದಲ್ಲಿ ಯುವಕನಿಗೆ ಗೂಂಡಾಕಾಯ್ದೆ ದಾಖಲಿಸುವ ಬೆದರಿಕೆ ಹಾಕಿದ್ದ ಪಿಎಸೈ ಮತ್ತಿತ್ತರ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಅಪಸ್ವರ ಕೇಳಿ ಬಂದಿದ್ದು ಕೂಡಲೆ ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಉದ್ದಟತನ , ಕರ್ತವ್ಯ ಮರೆತ ಎಸೈ ವಿರುದ್ದವೂ ಕ್ರಮಕೈಗೊಳ್ಳಬೇಕು ಎಂದು ನಂದೀಶ್ ಸಂಬಂಧಿಗಳು ಆಗ್ರಹಿಸಿದ್ದಾರೆ.ತನಿಖೆ ಪಾರದರ್ಶಕವಾಗಿ ಜರುಗಲಿ:
ನಂದೀಶ್ ಸಾವಿನ ಪ್ರಕರಣದಲ್ಲಿ ತನಿಖೆ ಪಾರದರ್ಶಕವಾಗಿ ನಡೆಯಲಿ, ತನಿಖೆ ಯಾವುದೇ ಕಾರಣಕ್ಕೂ ದಿಕ್ಕು ತಪ್ಪದಂತೆ ಇಲಾಖೆ ಗಮನಿಸಬೇಕಿದೆ ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ನಿಜಕ್ಕೂ ನಂದೀಶ್ ಮೈಸೂರಿಗೆ ಜ.6ರಂದು ತೆರಳಿದ್ಯಾಕೆ? ಬಸ್ ನಲ್ಲಿ ನಡೆದಿದ್ದೇನು, ಬಳಿಕ ಆತನನ್ನು ಬಸ್ ನಿಲ್ದಾಣದಲ್ಲಿ ಹಲ್ಲೆಮಾಡಲಾಗಿತ್ತೆ, ನಂತರ ಆತನ ಮೇಲೆ ಹಲ್ಲೆಗೈದವರು ಎತ್ತ ತೆರಳಿದರು. ಬಸ್ ನಲ್ಲೂ ಸಹಾ ಹಲ್ಲೆ ಮಾಡಿ ಮೊಬೈಲ್ ಕಸಿಯಲಾಗಿತ್ತೆ.ಬೆಂಗಳೂರಿನಲ್ಲಿ ನಂದೀಶ್ ಶವವಾಗಲು ಕಾರಣವೇನು ಎಂಬಿತ್ಯಾದಿ ವಾಸ್ತವ ಪ್ರಕರಣವನ್ನು ಪೊಲೀಸರು ಪಾರದರ್ಶಕ ತನಿಖೆ ಮೂಲಕ ಬೆಳಕಿಗೆ ತರಬೇಕು, ನಂದೀಶನನ್ನು ಕೊಲೆ ಮಾಡಲಾಗಿದೆ ಎಂಬ ಸಂಶಯ ನಮಗಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಲೋಕೇಶ್ ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.