ಸಾಮಾಜಿಕ ಪರಿವರ್ತನಕಾರರು, ರಾಷ್ಟ್ರೀಯ ನಾಯಕರನ್ನು ಜಾತಿ, ಧರ್ಮದ ಹೆಸರಿನಲ್ಲಿ ಅಪಮಾನಿಸುವುದನ್ನು ದೇಶ ದ್ರೋಹ ಕೃತ್ಯ ಎಂದು ರಾಜ್ಯ ಸರ್ಕಾರ ಘೋಷಿಸಬೇಕು. ಇವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ದೇಶದ ಪೌರತ್ವ ರದ್ದು ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಮಹಾನ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಆರ್.ಪೇಟೆ ತಾಲೂಕಿನ ದೊಡ್ಡಯಾಚನಹಳ್ಳಿ ವೇದಮೂರ್ತಿ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ, ರಾಜ್ಯದಿಂದಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಾಮಾಜಿಕ ಜಾಲತಾಣಗಳಲ್ಲಿ ಮಹಾನ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಅಪಮಾನಿಸಿರುವುದನ್ನು ಖಂಡಿಸಿದರು.
ಸಾಮಾಜಿಕ ಪರಿವರ್ತನಕಾರರು, ರಾಷ್ಟ್ರೀಯ ನಾಯಕರನ್ನು ಜಾತಿ, ಧರ್ಮದ ಹೆಸರಿನಲ್ಲಿ ಅಪಮಾನಿಸುವುದನ್ನು ದೇಶ ದ್ರೋಹ ಕೃತ್ಯ ಎಂದು ರಾಜ್ಯ ಸರ್ಕಾರ ಘೋಷಿಸಬೇಕು. ಇವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ದೇಶದ ಪೌರತ್ವ ರದ್ದು ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿ ಎಡೀಸಿಗೆ ಮನವಿ ಸಲ್ಲಿಸಿದರು.ರಾಷ್ಟ್ರ ನಾಯಕರನ್ನು ಅಪಮಾನಿಸಿದ ಆರೋಪಿಯನ್ನು ಬಂಧಿಸುವಂತೆ ನಮ್ಮ ಸಂಘಟನೆಯ ಪೋನ್ ಕರೆ, ವಾಟ್ಸಾಪ್ ಸಂದೇಶಕ್ಕೆ ಸ್ಪಂದಿಸಿ ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿರುವುದಕ್ಕೆ ಶ್ಲಾಘಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಬಿ.ಆನಂದ್, ಸುಶ್ಮಿತ ಜಿ.ಹೊಸಹಳ್ಳಿ, ಸಿದ್ದಯ್ಯ ದೊ.ಬೂವಹಳ್ಳಿ, ಕರಿಜೀರಹಳ್ಳಿ ವೆಂಕಟೇಶ್ , ಮದ್ದೂರು ಮುತ್ತರಾಜು ನಗರಕೆರೆ, ಪಾಂಡವಪುರ ವಿಮಲಾ ಟಿ.ಎಚ್ ಸೇರಿದಂತೆ ಹಲವರು ಇದ್ದರು.ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ಛಲವಾದಿ ಮಹಾಸಭಾ ಆಗ್ರಹ
ಮಂಡ್ಯ: ಸಾಮಾಜಿಕ ಜಾಲತಾಣದಲ್ಲಿ ಡಾ.ಅಂಬೇಡ್ಕರ್ ವಿರುದ್ಧ ಅಸಂಬದ್ಧ ಟೀಕೆಗಳನ್ನು ಮಾಡಿರುವ ಆರೋಪಿ ವೇದಮೂರ್ತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಆರೋಪಿ ವೇದಮೂರ್ತಿ ವಿರುದ್ಧ ಪೊಲೀಸರು ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ಚರ್ಚಿಸಿ, ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಆತನ ಹಿಂದಿರುವ ಕಾಣದ ಕೈಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ಈ ವೇಳೆ ಮಹಾ ಸಭಾ ಜಿಲ್ಲಾಧ್ಯಕ್ಷ ಸುರೇಶ್ ಆನವಾಳು, ಉಪಾಧ್ಯಕ್ಷ ಹರೀಶ್ ಕುಮಾರ್ , ರಾಜ್ಯ ನಿರ್ದೇಶಕ ಪ್ರೇಮ್ ಕುಮಾರ್, ಉಸ್ತುವಾರಿ ಸಮಿತಿಯ ಜಯರಾಮ್, ತಾಲೂಕು ಅಧ್ಯಕ್ಷರಾದ ನಟರಾಜ್ ಮತ್ತು ಗಜೇಂದ್ರ ರವರು ಹಾಗೂ ತಾಲೂಕು ಪದಾಧಿಕಾರಿಗಳಾದ ರಾಜೇಂದ್ರ, ಮಾದೇವಯ್ಯ,ನಾಗ ಭೂಷಣ್, ನರಸಿಂಹ, ರವಿ, ನಾಗಣ್ಣ, ನಿಂಗಯ್ಯ, ರಾಮಕೃಷ್ಣ, ಶಂಕರ್, ಸೋಮು, ಕುಮಾರ್, ವಿವೇಕ್, ಆಕಾಶ್ ವಿಕಾಸ್, ಮಂಜು, ಶರತ್ , ಸಿದ್ದರಾಜು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.