ಜೋಯಿಡಾ ತಾಲೂಕು ಆಸ್ಪತ್ರೆ ಕಾರ್ಯವೈಖರಿಗೆ ದೇಶಪಾಂಡೆ ಅಸಮಾಧಾನ

| Published : Feb 05 2024, 01:48 AM IST

ಜೋಯಿಡಾ ತಾಲೂಕು ಆಸ್ಪತ್ರೆ ಕಾರ್ಯವೈಖರಿಗೆ ದೇಶಪಾಂಡೆ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ಜೋಯಿಡಾ ಇಲ್ಲಿಯ ತಾಲೂಕು ಆಸ್ಪತ್ರೆ ಕಾರ್ಯವೈಖರಿಗೆ ಜೋಯಿಡಾ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಿದ್ದಾರೆ.

ಜೋಯಿಡಾ: ಇಲ್ಲಿಯ ತಾಲೂಕು ಆಸ್ಪತ್ರೆ ಕಾರ್ಯವೈಖರಿಗೆ ಜೋಯಿಡಾ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಲ್ಲಿಯ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದ ದೇಶಪಾಂಡೆ, ಜೋಯಿಡಾ ತಾಲೂಕಿನ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಕೆಲಸ ಮಾಡಿದ್ದರೆ ಇಲ್ಲಿ ರೋಗಿಗಳು ಬರುತ್ತಿದ್ದರು. ಎಲ್ಲ ರೋಗಿಗಳು ಹೊರ ಜಿಲ್ಲೆಗೆ, ಹೊರ ತಾಲೂಕಿಗೆ ಹೋಗುತ್ತಾರೆ. ಇಲ್ಲಿ ಉತ್ತಮ ಚಿಕಿತ್ಸೆ ದೊರೆತರೆ ಬೇರೆಡೆಗೆ ಏಕೆ ಚಿಕಿತ್ಸೆಗೆ ಹೋಗುತ್ತಾರೆ? ಒಂದು ವರ್ಷಕ್ಕೆ ಕೇವಲ 80 ಹೆರಿಗೆ ಇಲ್ಲಿ ಆಗುತ್ತಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ಜನರು ಬೇರೆಡೆಗೆ ಚಿಕಿತ್ಸೆ ಪಡೆಯಲು ಇಲ್ಲಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು.ಜೋಯಿಡಾ ತಾಲೂಕಿನಲ್ಲಿ ಉತ್ತಮ ಆಸ್ಪತ್ರೆ ಕಟ್ಟಡಗಳಿವೆ. ಆದರೆ ಇಲ್ಲಿ ವೈದ್ಯರು ಕೆಲಸ ಮಾಡಲು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಆಸ್ಪತ್ರೆ ದೇವಸ್ಥಾನ ಇದ್ದಂತೆ. ನಿಮ್ಮ ನಡವಳಿಕೆ ರೋಗಿಗಳ ಜತೆ ಉತ್ತಮವಾಗಿರಲಿ ಎಂದರು. ಆಸ್ಪತ್ರೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರು. ಹಿರಿಯ ವೈದ್ಯರು ಮತ್ತು ಕಿರಿಯ ವೈದ್ಯರ ಲೆಕ್ಕಾಚಾರ ಒಂದಕ್ಕೊಂದು ಹೊಂದಾಣಿಕೆಯೇ ಇರಲಿಲ್ಲ. ಲಕ್ಷಾಂತರ ಹಣ ಖರ್ಚು ಆಗಿದೆ, ಆದರೆ ನಿಮ್ಮ ಬಳಿ ಖರ್ಚಾದ ಹಣದ ಬಗ್ಗೆ ಮಾಹಿತಿ ಸರಿಯಾಗಿ ಇಲ್ಲ ಎಂದು ದೇಶಪಾಂಡೆ ಹೇಳಿದರು. ಇಲ್ಲಿ ಕೆಲಸ ಮಾಡುತ್ತಾ ಹೊರಗಡೆ ಬೇರೆಡೆಗೆ ನಿಮ್ಮ ವೈಯಕ್ತಿಕ ಕ್ಲಿನಿಕ್ ಕಂಡುಬಂದಲ್ಲಿ ಅಂಥವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಸ್ಪತ್ರೆಗೆ ಸರಿಯಾಗಿ ವೈದ್ಯರು ಹಾಜರಾಗಿ ಜನರ ಸೇವೆ ಮಾಡಿ ವೈದ್ಯರಾಗಲು ಪೂರ್ವ ಜನ್ಮದ ಪುಣ್ಯ ಬೇಕು ಎಂದರು‌.ಡಾ. ವಿಜಯಕುಮಾರ್ ಮಾತನಾಡಿ, ಹೊಸ ಎಕ್ಸ್‌-ರೇ ಮಶಿನ್ ಹಾಗೂ ಪೋಸ್ಟ್ ಮಾರ್ಟಂ ಹೊಸ ರೂಂ ಮತ್ತು ಇನ್ನಿತರ ಸಮಸ್ಯೆಗಳ ಕುರಿತು ವಿವರಿಸಿದರು.ಜೋಯಿಡಾ ತಹಸೀಲ್ದಾರ್ ಮಂಜುನಾಥ ಮುನ್ನೋಳಿ, ಇಒ ಆನಂದ ಬಡಕುಂದ್ರಿ, ಡಾ. ಸುಜಾತಾ ಉಕ್ಕಲಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.