ದೇಶಿ ಕ್ರೀಡೋತ್ಸವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ

| Published : Jan 25 2025, 01:01 AM IST

ಸಾರಾಂಶ

ಭಾರತ ಮತ್ತು ಕನ್ನಡ ನಾಡಿನ ವೈಭವ ಮತ್ತು ಇತಿಹಾಸದ ಪರಂಪರೆ ನೆನಪಿಸುವ ಪಠ್ಯಪುಸ್ತಕಗಳ ವಸ್ತು ಪ್ರದರ್ಶನ ಹಾಗೂ ದೇಶಿ ಕ್ರೀಡೋತ್ಸವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಆಗಲಿದೆ ಎಂದು ಕೊರಟಗೆರೆ ಶಿಕ್ಷಣ ಇಲಾಖೆಯ ಬಿಇಓ ನಟರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಭಾರತ ಮತ್ತು ಕನ್ನಡ ನಾಡಿನ ವೈಭವ ಮತ್ತು ಇತಿಹಾಸದ ಪರಂಪರೆ ನೆನಪಿಸುವ ಪಠ್ಯಪುಸ್ತಕಗಳ ವಸ್ತು ಪ್ರದರ್ಶನ ಹಾಗೂ ದೇಶಿ ಕ್ರೀಡೋತ್ಸವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಅನುಕೂಲ ಆಗಲಿದೆ ಎಂದು ಕೊರಟಗೆರೆ ಶಿಕ್ಷಣ ಇಲಾಖೆಯ ಬಿಇಓ ನಟರಾಜ್ ತಿಳಿಸಿದರು.ಪಟ್ಟಣದ ರವೀಂದ್ರಭಾರತಿ ವಿದ್ಯಾಸಂಸ್ಥೆಯ ನರ್ಸರಿ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕ್ಯಾಂಪಸ್‌ನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪ್ರತಿಭಾ ಭಾರತಿ ವಸ್ತು ಪ್ರದರ್ಶನ ಹಾಗೂ ದೇಶಿ ಕ್ರೀಡೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಪಠ್ಯಪುಸ್ತಕಗಳಿಗೆ ಅನುಗುಣವಾಗಿ ಮಕ್ಕಳಿಂದಲೇ ವಸ್ತುಗಳ ತಯಾರಿಕೆ ಮತ್ತು ಕಣ್ಮರೇಯಾಗಿದ್ದ ದೇಶಿಯ ಕ್ರೀಡೆಗಳ ಪರಿಚಯವು ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿದೆ. ಕೊಠಡಿಯಲ್ಲಿ ಮಕ್ಕಳ ಲವಲವಿಕೆ ಮತ್ತು ಸೃಜನಶೀಲನೆ ನೋಡಿ ಶಿಕ್ಷಕರ ಮುಖದಲ್ಲಿ ಸಡಗರ ತುಂಬಿದೆ ಎಂದು ಹೇಳಿದರು.ರವೀಂದ್ರ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಮಾತನಾಡಿ ನಮ್ಮ ದೇಶ ಮತ್ತು ನಾಡಿನ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ. ಮಕ್ಕಳಿಗೆ ಕಳೆದ ೧೫ದಿನದಿಂದ ರೂಪುರೇಷೆ ಸಿದ್ಧಪಡಿಸಿ ವಸ್ತು ಪ್ರದರ್ಶನ ಯಶಸ್ವಿಗೆ ಕಾರಣರಾದ ಪೋಷಕರು ಮತ್ತು ಶಿಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.ರವಿಂದ್ರಭಾರತಿ ವಿದ್ಯಾಸಂಸ್ಥೆಯ ಮುಖ್ಯ ಸಲಹೆಗಾರ ಕೆ.ಎಸ್.ವೀರಣ್ಣ ಮಾತನಾಡಿ ವಸ್ತು ಪ್ರದರ್ಶನ ಮತ್ತು ದೇಶಿ ಕ್ರಿಡೋತ್ಸವ ಮಕ್ಕಳ ಪ್ರತಿಭೆಯ ಶ್ರಮವನ್ನು ತೋರಿಸುತ್ತದೆ. ನಮ್ಮ ದೇಶದ ಪರಂಪರೆ ಮತ್ತು ಹಬ್ಬದ ಸಡಗರವು ಪ್ರದರ್ಶನದಲ್ಲಿ ಅಡಗಿದೆ. ಮಕ್ಕಳಿಂದ ಮಾಹಿತಿ ನೀಡುವುದರ ಜೊತೆ ಆಕರ್ಷಣೆ ಮಾಡಿ ಪೋಷಕರನ್ನು ಸೆಳೆಯುವತ್ತಾ ಯಶಸ್ವಿಯಾಗಿದೆ ಎಂದರು.ರವೀಂದ್ರಭಾರತಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಸುಧಾಮಣಿ ಮಾತನಾಡಿ ಪುರಾತನ ಕಾಲದ ವ್ಯವಸಾಯದ ಸಲಕರಣೆ ಇಂದು ನಮ್ಮ ಕಣ್ಮನಾ ಸೆಳೆದಿದೆ. ಮೊಬೈಲ್ ಬಳಕೆಯ ವಿರುದ್ಧವಾಗಿ ಇಂದು ನಮ್ಮ ಶಾಲೆಯಲ್ಲಿನ ದೇಶಿಯ ಕ್ರೀಡೆಯ ಅನಾವರಣ ಮಕ್ಕಳಿಗೆ ಖುಷಿ ತಂದಿದೆ. ಮಕ್ಕಳ ಮುಖದಲ್ಲಿನ ನಗುವು ಶಿಕ್ಷಕರು ಮತ್ತು ಪೋಷಕರ ಶ್ರಮಕ್ಕೆ ಸಾರ್ಥಕ ತಂದಿದೆ ಎಂದರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶೋಭಕೃಷ್ಣಮೂರ್ತಿ, ಸಹಕಾರ್ಯದರ್ಶಿ ನವೀನ್, ಖಜಾಂಚಿ ಆದಿರಮೇಶ್, ಮುಖ್ಯೋಪಾಧ್ಯಾಯ ಲಕ್ಷ್ಮೀನರಸಿಂಹಮೂರ್ತಿ, ಶಿವಗಂಗಾ, ರಾಜು, ರಾಮಕೃಷ್ಣಯ್ಯ, ಹಜೀರಾ, ವಿರೇಶ್, ವಿಜಯಲಕ್ಷ್ಮೀ, ಸುಮ, ಕವಿತಾ, ಆಶಾ, ಪದ್ಮ, ಅನುಶಾ, ಆನಂದ್, ಶೋಭ, ಜ್ಯೋತಿ ಸೇರಿದಂತೆ ಇತರರು ಇದ್ದರು.