ಸಾರಾಂಶ
ನಾಡಿದಾದ್ಯಂತ ಮಹಿಳೆಯರ, ರೈತರ, ಸಾಹಿತಿಗಳ ಸಮಾಗಮ ಸಮ್ಮೇಳನ ಸುತ್ತೂರು ಜಾತ್ರೆ ಕನ್ನಡ ನಾಡಿನ ವೈಭವ
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಬೆಟ್ಟದಪುರಕ್ಕೆ ಸೋಮವಾರ ಆಗಮಿಸಿದ ಸುತ್ತೂರು ಜಾತ್ರಾ ಪ್ರಚಾರ ರಥಕ್ಕೆ ಸ್ವಾಗತಿಸಿ, ಪೂಜೆ ಸಲ್ಲಿಸಲಾಯಿತು.ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಹಾಸನದ ತನ್ನಿರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಸಮ್ಮುಖದಲ್ಲಿ ರಥವನ್ನು ಬರ ಮಾಡಿಕೊಂಡು ನಂತರ ಪೂಜೆ ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಆವರ್ತಿ ಮತ್ತು ಕೊಪ್ಪ ಗ್ರಾಮಗಳಿಗೆ ಬೀಳ್ಕೊಡಲಾಯಿತು.
ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಾಡಿನ ಪರಂಪರೆ ಮತ್ತು ಜಾನಪದ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಪರಂಪರೆಯನ್ನು ಬಿಂಬಿಸುವ ಸುತ್ತೂರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಸುತ್ತೂರು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ತಣ್ಣೀರ್ ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಮಾತನಾಡಿ, ನಾಡಿದಾದ್ಯಂತ ಮಹಿಳೆಯರ, ರೈತರ, ಸಾಹಿತಿಗಳ ಸಮಾಗಮ ಸಮ್ಮೇಳನ ಸುತ್ತೂರು ಜಾತ್ರೆ ಕನ್ನಡ ನಾಡಿನ ವೈಭವ ಎಂದು ತಿಳಿಸಿದರು.
ಹಾಸನದ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ, ಸಮಾಜ ಸೇವಕ ಕೂರ್ಗಲ್ ಶಿವಕುಮಾರ ಸ್ವಾಮಿ, ಬೆಟ್ಟದಪುರ ವೀರಶೈವ ಸಮಾಜದ ಅಧ್ಯಕ್ಷ ಶಿವದೇವ್, ಯುವ ಘಟಕದ ಅಧ್ಯಕ್ಷ ಮಂಜು, ಬಿ.ಸಿ. ರಾಜೇಂದ್ರ, ಬಿ.ಎಸ್. ಬಸವರಾಜ್, ಶಿಕ್ಷಕ ಬಿ.ಸಿ. ಮಹದೇವಪ್ಪ, ಶಿವಶಂಕರ್, ಎಸ್. ಮಲ್ಲೇಶ್, ಮೈಲಾರಿ ಶರಣೆ, ರಾಣಿ, ಗ್ರಾಮಸ್ಥರು ಇದ್ದರು.