493 ಹಳ್ಳಿಗಳ ಜನರು ನನ್ನ ಕುಟುಂಬದವರೆಂದು ತಿಳಿದು ನಿರ್ವಂಚನೆಯಿಂದ ಅಭಿವೃದ್ಧಿಗೆ ಹಗಲು- ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಅಧಿಕಾರ ಸಿಕ್ಕಾಗ ಕಣ್ಣುಮುಚ್ಚಿಕೊಳ್ಳಲ್ಲ. ಕಷ್ಟದಲ್ಲಿರುವವರು, ಉಪಕಾರ ಮಾಡಿದವರನ್ನು ಮರೆಯುವವರು ಬಹಳ ಜನ ಇದ್ದಾರೆ. ಪಕ್ಕದ ಊರಿನವರು ಬಂದು ಎಷ್ಟೆ ತಲೆಕೆಡಿಸಿದರೂ ಈ ಊರಿನವರು ಪ್ರತಿ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸುತ್ತಿದ್ದೀರ.
ಕನ್ನಡಪ್ರಭ ವಾರ್ತೆ ಸಿರಿಗೆರೆ
ನಾನು ವಿರೋಧ ಪಕ್ಷದಲ್ಲಿರುವ ಶಾಸಕ. ಸಿಎಂ ಅಲ್ಲ, ಹಣಕಾಸು ಸಚಿವನೂ ಅಲ್ಲ. ಹೀಗಿದ್ದರೂ ಹೇಗೇಗೋ ಅನುದಾನ ತಂದು ಇಡೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂದಾಗಿದ್ದೇನೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.ಸಿರಿಗೆರೆ ಸಮೀಪದ ಕರಿಯಮ್ಮನಹಟ್ಟಿ ಗ್ರಾಮದಿಂದ ಕೊಳಾಳ್‍ವರೆಗೂ ₹1 ಕೋಟಿ ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.
ರೈತರಿಗೆ ನೀರು, ಕರೆಂಟ್ ಮುಖ್ಯವಾಗಿರುವುದರಿಂದ ಕೆರೆ ಇಲ್ಲದ ಕಡೆ ಚೆಕ್‍ಡ್ಯಾಂಗಳನ್ನು ಕಟ್ಟಿಸುತ್ತಿದ್ದೇನೆ. ಕೆರೆ ತುಂಬಿಸುವುದು, ಕೆರೆಯ ಜಾಲಿ ತೆಗೆದು ಎತ್ತರ ಮಾಡಿ ಅಭಿವೃದ್ಧಿಪಡಿಸಲು ₹2 ಕೋಟಿ ಕೊಡುತ್ತೇನೆ. ಯಾರಿಂದ ಏನನ್ನು ಹೇಳಿಸಿಕೊಳ್ಳದೆ ಹುಡುಕಿ ಹುಡುಕಿ ಕೆಲಸ ಮಾಡಿಸುತ್ತಿದ್ದೇನೆ. ತೇರು ಬೀದಿಗೂ ಕೂಡ ಹಣ ಹಾಕಿ ಮುಂದಿನ ದಿನಗಳಲ್ಲಿ ರಸ್ತೆ ಮಾಡಿಸುತ್ತೇನೆ. 493 ಹಳ್ಳಿಗಳ ಜನರು ನನ್ನ ಕುಟುಂಬದವರೆಂದು ತಿಳಿದು ನಿರ್ವಂಚನೆಯಿಂದ ಅಭಿವೃದ್ಧಿಗೆ ಹಗಲು- ರಾತ್ರಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಅಧಿಕಾರ ಸಿಕ್ಕಾಗ ಕಣ್ಣುಮುಚ್ಚಿಕೊಳ್ಳಲ್ಲ. ಕಷ್ಟದಲ್ಲಿರುವವರು, ಉಪಕಾರ ಮಾಡಿದವರನ್ನು ಮರೆಯುವವರು ಬಹಳ ಜನ ಇದ್ದಾರೆ. ಪಕ್ಕದ ಊರಿನವರು ಬಂದು ಎಷ್ಟೆ ತಲೆಕೆಡಿಸಿದರೂ ಈ ಊರಿನವರು ಪ್ರತಿ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸುತ್ತಿದ್ದೀರ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆಂದರು.ಭರಮಸಾಗರ ಬಿಜೆಪಿ ಮಂಡಲ ಅಧ್ಯಕ್ಷ ಎನ್.ಟಿ.ಬಸವರಾಜ್, ಉಪಾಧ್ಯಕ್ಷ ಶೈಲೇಶ್‍ಕುಮಾರ್, ಮಂಜುನಾಥ್, ಎನ್.ಕಲ್ಲೇಶ್, ತೀರ್ಥಣ್ಣ, ಮೋಹನ್, ಬಸವರಾಜ್, ಪ್ರಕಾಶ್, ಪಂಚಾಕ್ಷರಿ, ತಿಪ್ಪಣ್ಣ, ನಿರಂಜನ್‍ಮೂರ್ತಿ, ಕೆಂಚವೀರಪ್ಪ ಹಾಗೂ ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.