2 ವರ್ಷಗಳಿಂದ ಚಿರತೆಯಿದ್ದರೂ ಹಿಡಿಯುವಲ್ಲಿ ವಿಫಲ

| Published : Nov 11 2025, 01:45 AM IST

2 ವರ್ಷಗಳಿಂದ ಚಿರತೆಯಿದ್ದರೂ ಹಿಡಿಯುವಲ್ಲಿ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯದೊಳಗೆ ಪ್ರಾಣಿಗಳು ಸತ್ತಾಗ ಕಾರಣ ಏನು, ಯಾರು ಹೊಣೆ ಎಂಬುದನ್ನ ವಾರದೊಳಗೆ ಪತ್ತೆ ಹಚ್ಚುವ ನಿಮಗೆ ನಮ್ಮ ಗ್ರಾಮದಲ್ಲಿ ಕಳೆದ 2 ವರ್ಷಗಳಿಂದ ಚಿರತೆ ಇದೆ ಎಂದು ತಿಳಿಸಿದ್ದರೂ ಚಿರತೆ ಸೆರೆ ಹಿಡಿಯುವಲ್ಲಿ ವಿಫಲರಾಗಿದ್ದೀರಿ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಹನೂರು

ಅರಣ್ಯದೊಳಗೆ ಪ್ರಾಣಿಗಳು ಸತ್ತಾಗ ಕಾರಣ ಏನು, ಯಾರು ಹೊಣೆ ಎಂಬುದನ್ನ ವಾರದೊಳಗೆ ಪತ್ತೆ ಹಚ್ಚುವ ನಿಮಗೆ ನಮ್ಮ ಗ್ರಾಮದಲ್ಲಿ ಕಳೆದ 2 ವರ್ಷಗಳಿಂದ ಚಿರತೆ ಇದೆ ಎಂದು ತಿಳಿಸಿದ್ದರೂ ಚಿರತೆ ಸೆರೆ ಹಿಡಿಯುವಲ್ಲಿ ವಿಫಲರಾಗಿದ್ದೀರಿ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಗಂಗನ ದೊಡ್ಡಿ ಗ್ರಾಮಕ್ಕೆ ಬಂದಂತಹ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ದಿಗ್ಬಂದನ ಮಾಡಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು.

ಗಂಗನ ದೊಡ್ಡಿ ಗ್ರಾಮದ ಸುತ್ತಮುತ್ತ ಸಾಕಷ್ಟು ವರ್ಷಗಳಿಂದ ಚಿರತೆಯ ಉಪಟಳ ಅತಿಯಾಗಿದೆ. ಅಲ್ಲದೆ ಚಿರತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆಗಿಂದ ಹಾಗೆ ಸಾಕು ಪ್ರಾಣಿಗಳನ್ನ ಕೊಲ್ಲುತ್ತಿದೆ. ಇದರಿಂದ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಹಾಗಾಗಿ ರೈತರ ಉಳಿವಿಗಾಗಿ ಚಿರತೆಯನ್ನು ಸೆರೆಯಿಡಿಯಬೇಕೆಂದು ಆಗ್ರಹಿಸಿದರು.

ತಾನು ಬೆಳೆದಿರುವ ಬೆಳೆಗೆ ನೀರನ್ನು ಹಾಯಿಸಲು ಸಮಯ ಪರಿಪಾಲನೆ ಮಾಡದೆ ಹಗಲು ರಾತ್ರಿ ಎನ್ನದೆ ನೀರು ಹಾಯಿಸಲು ಜಮೀನುಗಳಿಗೆ ತೆರಳಬೇಕಾಗುತ್ತದೆ. ಅಂತ ಸಂದರ್ಭಗಳಲ್ಲಿ ಚಿರತೆ ಅಡ್ಡಾದಿಡ್ಡಿ ಓಡಾಡುತ್ತಿರುವುದರಿಂದ ಪ್ರಾಣ ಭಯದಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸಾಕು ಪ್ರಾಣಿಗಳ ಹುಲಿಗಾಗಿ ಒಂದೆಡೆಯಾದರೆ ತನ್ನ ಜೀವವನ್ನು ಒತ್ತೆ ಇಡಬೇಕಾದ ಅನಿವಾರ್ಯ ಒಂದೆಡೆಯಾಗಿದೆ. ಒಟ್ಟಾರೆ ಆತಂಕದಲ್ಲೇ ರೈತರು ಬದುಕುತ್ತಿದ್ದಾರೆ.

ಎ ಸಿ ಎಫ್ ಭೇಟಿ:ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಎಸಿಎಫ್ ಉಮಾಪತಿ ಭೇಟಿ ನೀಡಿ ಚಿರತೆ ಸೆರೆ ಹಿಡಿಯಲು ಈಗಾಗಲೇ ನಾವು ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೂ ಸಹ ಇರುತ್ತೆ ಬೋನಿಗೆ ಬಿದ್ದಿಲ್ಲ. ನಾವು ಸಹ ಇನ್ನಿಲ್ಲದ ಕಸರ ತನ್ನು ಪಡುತ್ತಿದ್ದೇವೆ. ಮುಂದಿನ ವಾರದಲ್ಲಿ ಮೈಸೂರಿನಲ್ಲಿರುವ ಚಿರತೆ ಸೆರೆ ಹಿಡಿಯುವ ತಂಡವನ್ನು ಮರೆತಂದು ಚಿರತೆ ಸೆರೆ ಹಿಡಿಯುವುದು ಕ್ರಮವಹಿಸುತ್ತೇವೆ. ಮುಂದಿನ ಒಂದು ವಾರಗಳ ಕಾಲ ನಮಗೆ ಸಮಯ ಅವಕಾಶ ನೀಡಿ ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ರೈತರು ಒಂದು ವಾರದೊಳಗೆ ಚಿರತೆ ಸೆರೆ ಹಿಡಿಯಲು ಅವಕಾಶ ಕೊಡುತ್ತೇವೆ. ಚಿರತೆ ಸೆರೆ ಹಿಡಿಯಲು ವಿಫಲವಾದರೆ ಉಘ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ ನಂತರ ದಿಗ್ಬಂದನ ಹಾಕಿದ್ದ ಅಧಿಕಾರಿಗಳನ್ನು ಆತ್ಮೀಯವಾಗಿ ಕಳುಹಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್, ಗೌರವಾಧ್ಯಕ್ಷ ರಾಜಣ್ಣ, ಸದಸ್ಯರಾದ ಪಳನಿ ಸ್ವಾಮಿ ಹಾಗೂ ಗಂಗನದೊಡ್ಡಿ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.