ಸಾರಾಂಶ
ಕನ್ನಡಪ್ರಭವಾರ್ತೆ ಮಧುಗಿರಿ
ಮಕ್ಕಳಲ್ಲಿ ಸೂಪ್ತವಾಗಿರುವ ಜ್ಞಾನವನ್ನು ಶಿಕ್ಷಕರು ಇಂದಿನ ಹೊಸ ಶಿಕ್ಷಣ ವಿಧಾನದಿಂದ ಹೊರ ತರಲು ಪ್ರಯತ್ನಿಸಬೇಕು. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕರೆ ನೀಡಿದರು.ಶನಿವಾರ ಇಲ್ಲಿನ ಮಾಲಿಮರಿಯಪ್ಪ ರಂಗಮಂದಿರದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ 137ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಕ್ಷರ ಕಲಿಕೆ ವಿಚಾರದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಿ ಅರಿವಿನ ಜ್ಞಾನ ವಿಸ್ತರಿಸಿ ಪೋಷಿಸಬೇಕು. ಮಕ್ಕಳು ತರಗತಿಗಳಿಗೆ ತಪ್ಪಿಸಿಕೊಳ್ಳದೆ ಹಾಜರಾಗುವ ಮೂಲಕ ಹೆತ್ತವರಿಗೆ ಗುರುಗಳಿಗೆ ಹಾಗೂ ಓದಿದ ಶಾಲೆಗೆ ಕೀರ್ತಿ ತರುವಂತಾಗಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳಸಿ ಅಕ್ಷರ ಬಿತ್ತಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ ಪ್ರೀತಿ,ಗೌರವದಿಂದ ವಿದ್ಯೆ ಕಲಿಸಲು ಮುಂದಾಗಬೇಕು ಎಂದರು.ಶಾಲೆಗಳಲ್ಲಿ ಶೌಚಾಲಯ ,ಕುಡಿವ ನೀರು ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಿಎಸ್‌ಆರ್ ಫಂಡ್ ನಲ್ಲಿ ಒದಗಿಸಲು ಬದ್ಧ, ಶಿಕ್ಷಕ ಮನಸ್ಸು ಮಾಡಿದರೆ ರಾಷ್ಠ್ರದ ಉನ್ನತ ಹುದ್ದೆ ಅಲಂಕರಿಸಿ ದೇಶ ಸೇವೆ ಮಾಡಬಹುದು ಎಂಬುದನ್ನು ರಾಧಕೃಷ್ಣನ್ ತೋರಿಸಿದ್ದರೆ ಇತ್ತ ದಿಪತ್ರಿಕೆಗಳನ್ನು ವಿತರಿಸುವ ನಿಟ್ಟಿನಲ್ಲಿ ಹಣ ಸಂಪಾದಿಸಿ ಈ ದೇಶದ ರಾಷ್ಟ್ರಪತಿ ಸ್ಥಾನಕ್ಕೇರಿದ ಅಬ್ದುಲ್ ಕಲಾಂ ನಮಗೆ ಮಾದರಿ. ಅವರ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇಂದಿನ ಪೀಳಿಗೆಗೆ ಶಿಕ್ಷಕರು ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದರು.
7ನೇ ವೇತನದಿಂದ ಸರ್ಕಾರಕ್ಕೆ ವರ್ಷಕ್ಕೆ 20 ಸಾವಿರ ಕೋಟಿ ಹೊರೆಯಾಗಲಿದೆ. ಆದರೂ ಶಿಕ್ಷಕರ ಹಿತ ಕಾಪಾಡುವ ದೃಷ್ಠಿಯಿಂದ 7ನೇ ವೇತನ ಜಾರಿಗೊಳಿಸಿದೆ. ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಓಪಿಎಸ್ ಜಾರಿಗೂ ಸಹ ನಮ್ಮ ಸರ್ಕಾರ ಬದ್ಧವಾಗಿದೆ. ಹಿಂಬಡ್ತಿಯಿಂದ ರಾಜ್ಯದ 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಆದ ಕಾರಣ ಇದನ್ನು ಪರಿಶೀಲಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪರವಿಗೆ ತಿಳಿಸಿದ್ದು, ಅವರು ಸಿಎಂ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ, ಡಿಡಿಪಿಐ ಗಿರಿಜಾ, ಬಿಇಒ ಕೆ.ಎನ್.ಹನುಮಂತರಾಯಪ್ಪ, ಶಿಕ್ಷಣಾಧಿಕಾರಿ ರಾಜಣ್ಣ , ಇಒ ಲಕ್ಷ್ಮಣ್, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಉಪಾಧ್ಯಕ್ಷೆ ಸುಜಾತ, ವೆಂಕಟರಂಗಾರೆಡ್ಡಿ, ಸಂಜಯ್ ,ಎಂ.ಕೆನಂಜುಂಡರಾಜು, ನಾ .ಮಹಾಲಿಂಗೇಶ್ ಸೇರಿದಂತ ಶಿಕ್ಷಕರು ಇದ್ದರು.
ಬಾಕ್ಸ್..ಒಕ್ಕಲಿಗರಿಗೆ ಪುರಸಭೆ ಅಧ್ಯಕ್ಷ ಸ್ಥಾನನನ್ನ ರಾಜಕೀಯ ಜೀವನದಲ್ಲಿ ನನಗೆ ನೆಮ್ಮದಿಯಿದೆ. ನನಗೆ ಓಟು ಮುಖ್ಯವಲ್ಲ, ಗೆದ್ದರೆ ಕ್ಷೇತ್ರಕ್ಕಾಗಿ ದುಡಿಯುತ್ತೇನೆ, ಈ ಹಿಂದೆ ವಕ್ಕಲಿಗ ಸಮುದಾಯವರನ್ನು ಪುರಸಭೆಗೆ ಅಧ್ಯಕ್ಷರನ್ನಾಗಿ ಮಾಡುವ ಅವಕಾಶ ಅನಿತಾ ಕುಮಾರಸ್ವಾಮಿ ಮತ್ತು ವೀರಭದ್ರಯ್ಯ ಅವರಿಗಿತ್ತು. ಆದರೆ ಅವರು ಮಾಡಲಿಲ್ಲ, ಎಲ್ಲ ಜನಾಂಗಕ್ಕೂ ರಾಜಕೀಯ ಪ್ರಾತಿನಿದ್ಯ ಸಿಗಬೇಕು ಎಂಬುದು ನನ್ನ ಉದ್ದೇಶ, ಪ್ರಸ್ತುತ ಪುರಸಭೆಗೆ ಅಧ್ಯಕ್ಷರಾಗಿರುವ ಲಾಲಪೇಟೆ ಮಂಜುನಾಥ್ ಜೆಡಿಎಸ್‌ನಿಂದ ಗೆದ್ದು ನಮ್ಮಲ್ಲಿ ಗುರುತಿಸಿಕೊಂಡವರು. ಮಂಜುನಾಥ್‌ಗೆ ಸ್ವಂತ ಕೆಲಸ ಮಾಡಿಸಿಕೊಳ್ಳುವ ಅವಕಾಶವಿದ್ದರೂ ಸಹ ಕ್ಷೇತ್ರದ ಜನರ ಕೆಲಸ ಮಾಡಿಸುವಲ್ಲಿ ನನ್ನ ಮನಸ್ಸು ಮಂಜು ಕಡೇ ವಾಲಿತು. ಹಾಗಾಗಿ ಎಲ್ಲ ಸದಸ್ಯರ ಸಹಕಾರದಿಂದ ಅವರಿಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಈ ಹಿಂದೆ ಮಧುಗಿರಿ ಪುರಸಭೆಗೆ ವಕ್ಕಲಿಗ ಸಮುದಾಯದವರು ಯಾರು ಅಧ್ಯಕ್ಷರಾಗಿಲ್ಲ, ಈಗ ಮಂಜುನಾಥ್ ಅಧ್ಯಕ್ಷರಾಗಿ ಇತಿಹಾಸ ಸೃಷ್ಠಿಸಿದೆ ಎಂದು ಸಚಿವ ರಾಜಣ್ಣ ತಿಳಿಸಿದರು.