ಸಾರಾಂಶ
ತಾಲೂಕು ಯೋಜನಾಧಿಕಾರಿ ಮಾದವಗೌಡ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೈಯದ್ ಸೀಮಾ, ಗ್ರಾಪಂ ಉಪಾಧ್ಯಕ್ಷೆ ಸುಜಾತ, ಸೇವಾ ಪ್ರತಿನಿಧಿ ಮಧುಸೂದನ್, ಶಿವನಗೌಡ, ಬಸಮ್ಮ, ಸೌಮ್ಯ, ವಂದನ, ಚೈತ್ರ ಇತರರಿದ್ದರು.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಮುಂದಿನ ಪೀಳಿಗೆಗೆ ಆರೋಗ್ಯಯುತ ಭೂಮಿಯನ್ನು ಉಳಿಸಬೇಕಿರುವುದು ನಮ್ಮ ಜವಾಬ್ದಾರಿ ಎಂದು ಕೃಷಿ ಅಧಿಕಾರಿ ಸುನೀಲ್ ಹೇಳಿದರು.ಆನವೇರಿಯ ಶಿವನಗೌಡ ಕೃಷಿ ಭೂಮಿಯಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸ್ವಉದ್ಯೋಗ ಪ್ರೇರಣೆಯಾಗಿ ಸೃಜನಶೀಲ ಕಾರ್ಯಕ್ರಮದಡಿ ಸದಸ್ಯರಿಗೆ ಕೈ ತೋಟ ರಚನೆಗೆ ಉಚಿತವಾಗಿ ಕಾಕಡ ಗಿಡ ವಿತರಿಸಿ ಅವರು ಮಾತನಾಡಿದರು.
ಅತಿಯಾದ ರಾಸಾಯನಿಕಗಳ ಬಳಕೆಯಿಂದ ಪ್ರಾಕೃತಿಕ ಸಂಪತ್ತು ನಶಿಸಿ ಹೋಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೂವಿನ ಗಿಡಗಳನ್ನು ಚಿಕ್ಕ ಮಕ್ಕಳಂತೆ ಪಾಲನೆ ಮಾಡಬೇಕು. ಅತ್ಯಂತ ಕಡಿಮೆ ಸಮಯದಲ್ಲಿ ಪುಷ್ಪಕೃಷಿಯಲ್ಲಿ ಲಾಭ ಕಾಣಬಹುದು. ಹೂವಿನ ಮಾರುಕಟ್ಟೆಯ ಏರಿಳಿತಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಮನೆಯಂಗಳ ಸೇರಿದಂತೆ ಹೊಲ- ಗದ್ದೆಗಳ ಬದುಗಳಲ್ಲಿ ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಸಿ, ಆರ್ಥಿಕವಾಗಿ ಸಬಲರಾಗಬಹುದು. ಸದಸ್ಯರು ಕ್ಷೇತ್ರದ ಯೋಜನೆಯಗಳ ಲಾಭಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥೀಕವಾಗಿ ಸದೃಢರಾಗಬೇಕು ಎಂದರು.ತಾಲೂಕು ಯೋಜನಾಧಿಕಾರಿ ಮಾದವಗೌಡ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೈಯದ್ ಸೀಮಾ, ಗ್ರಾಪಂ ಉಪಾಧ್ಯಕ್ಷೆ ಸುಜಾತ, ಸೇವಾ ಪ್ರತಿನಿಧಿ ಮಧುಸೂದನ್, ಶಿವನಗೌಡ, ಬಸಮ್ಮ, ಸೌಮ್ಯ, ವಂದನ, ಚೈತ್ರ ಇತರರಿದ್ದರು.
- - - -05ಎಚ್ ಎಚ್ ಆರ್ ಪಿ02:ಆನವೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸದಸ್ಯರಿಗೆ ತಾಲೂಕು ಸಂಯೋಜಕ ಮಾದವಗೌಡ ಉಚಿತವಾಗಿ ಕಾಕಡ ಹೂವಿನ ಗಿಡಗಳನ್ನು ವಿತರಿಸಿದರು. ಶಿವನಗೌಡ, ಸೈಯದ್ ಸೀಮಾ, ಸುಜಾತ ಇತರರಿದ್ದರು.