ಸಾರಾಂಶ
ಮೂರ್ನಾಲ್ಕು ವರ್ಷಗಳ ಕಾಲ ಅವುಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಿದ್ದರು. ಇನ್ನೇನು ಹೊಂಬಾಳೆ ಬಿಡುವ ಸಮಯ ಬಂದಿದೆ, ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಅಡಿಕೆ ಪೈರು ಕೈಗೆ ಸಿಗುತ್ತದೆ ಎಂಬ ದೃಢ ನಂಬಿಕೆಯಲ್ಲಿ ಕಾಲ ಕಳೆಯುತ್ತಿದ್ದ ಈ ಅಡಿಕೆ ಗಿಡದ ಮಾಲೀಕರಿಗೆ, ಇಂದು ಬೆಳಗ್ಗೆ ತನ್ನ ಜಮೀನಿನಲ್ಲಿ ಸುಮಾರು 600ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವುದನ್ನು ನೋಡಿ ಆಘಾತವುಂಟಾಗಿದೆ.
ಕನ್ನಡಪ್ರಭ ವಾರ್ತೆ ಹುಳಿಯಾರು
ಹುಳಿಯಾರು ಸಮೀಪದ ಬರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಾಬು ಎಂಬುವವರಿಗೆ ಸೇರಿದ ಜಮೀನಿನಲ್ಲಿ, ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟು, ಮೂರ್ನಾಲ್ಕು ವರ್ಷಗಳ ಕಾಲ ಅವುಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಿದ್ದರು. ಇನ್ನೇನು ಹೊಂಬಾಳೆ ಬಿಡುವ ಸಮಯ ಬಂದಿದೆ, ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಅಡಿಕೆ ಪೈರು ಕೈಗೆ ಸಿಗುತ್ತದೆ ಎಂಬ ದೃಢ ನಂಬಿಕೆಯಲ್ಲಿ ಕಾಲ ಕಳೆಯುತ್ತಿದ್ದ ಈ ಅಡಿಕೆ ಗಿಡದ ಮಾಲೀಕರಿಗೆ, ಇಂದು ಬೆಳಗ್ಗೆ ತನ್ನ ಜಮೀನಿನಲ್ಲಿ ಸುಮಾರು 600ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವುದನ್ನು ನೋಡಿ ಆಘಾತವುಂಟಾಗಿದೆ.150 ಗಿಡಗಳು ಅರ್ಧಕ್ಕೆ ತುಂಡಾಗಿ ಬಿದ್ದಿದ್ದು, ಮಿಕ್ಕ ಗಿಡಗಳನ್ನು ಮಚ್ಚಿನಿಂದ ಕೊಚ್ಚಿ ಬಿಟ್ಟಿದ್ದಾರೆ. ಅತ್ಯುತ್ತಮವಾಗಿ ಬೆಳೆದಿದ್ದ ಅಡಿಕೆ ಗಿಡಗಳನ್ನು ರಾತ್ರೋರಾತ್ರಿ ಕತ್ತರಿಸಿರುವುದು ಅವರಿಗೆ ಹುಟ್ಟಿದ ಮಕ್ಕಳನ್ನು ಕತ್ತರಿಸಿದಂತೆ. ಬೆಳೆದು ಇನ್ನೇನು ಫಸಲು ಬಿಡುವ ಸಮಯದಲ್ಲಿ ಕಡಿದಿರುವ ಕಿಡಿಗೇಡಿಗಳು ಇದರಲ್ಲಿ ತುಂಬಿಕೊಳ್ಳುವುದಾದರೇನು ? ನೇರವಾಗಿ ಬನ್ನಿ ಅದನ್ನು ಬಿಟ್ಟು ಈತರದ ಕೆಲಸ ಮಾಡಬಾರದೆಂದು ಬರಗೂರು ಗ್ರಾಮದ ವಾಸಿ ಕಿರಣ್ ಕಿಡಿ ಕಾರಿದ್ದಾರೆ. ಈ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.