ಸಾರಾಂಶ
ಮುಳಗುಂದ ಪಟ್ಟಣದ ಬಸಾಪುರ ಕ್ರಾಸ್‌ನಿಂದ ಸೊರಟೂರ ಸಂಪರ್ಕಿಸುವ ಮಾರ್ಗ ಹದಗೆಟ್ಟು ಹೋಗಿದ್ದು, ರೈತರು ವಾಹನಗಳನ್ನು ತಡೆದು ಚಾಲಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಮುಳಗುಂದ: ಪಟ್ಟಣದ ಬಸಾಪುರ ಕ್ರಾಸ್‌ನಿಂದ ಸೊರಟೂರ ಸಂಪರ್ಕಿಸುವ ಮಾರ್ಗವಾಗಿ ಟಿಪ್ಪರ್ ಸೇರಿದಂತೆ ಭಾರಿ ಗಾತ್ರದ ವಾಹನಗಳು ಒವರ್‌ಲೋಡ್ ತುಂಬಿಕೊಂಡು ಸಂಚರಿಸುವುದರಿಂದ ರಸ್ತೆ ಡಾಂಬರ್ ಕಿತ್ತು ಹದಗೆಟ್ಟು ಹೋಗಿದ್ದು, ರೈತರು ಟಿಪ್ಪರ್ ಸೇರಿದಂತೆ ಕಾಂಕ್ರೀಟ್ ಮಿಕ್ಸರ್ ವಾಹನಗಳನ್ನು ತಡೆದು ಚಾಲಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಈ ಮಾರ್ಗದ ಅಕ್ಕ-ಪಕ್ಕದ ಜಮೀನುಗಳಲ್ಲಿ ಪವನ ವಿದ್ಯುತ್ ಫ್ಯಾನ್ ಅಳವಡಿಸಲು ಪವನ ವಿದ್ಯುತ್ ಕಂಪನಿಯ ಭಾರಿ ಗಾತ್ರದ ವಾಹನಗಳು ಹಗಲು ರಾತ್ರಿಯನ್ನದೇ ಸಂಚರಿಸಿದ್ದರಿಂದ ರಸ್ತೆಗೆ ಹಾಕಿದ ಡಾಂಬರ್ ಕಿತ್ತು ಹೋಗಿದೆ. ತಗ್ಗು-ಗುಂಡಿಗಳು ಬಿದ್ದು ರಸ್ತೆಗೆ ಹಾಕಿದ್ದ ಸಣ್ಣ ಗಾತ್ರದ ಜಲ್ಲಿಕಲ್ಲುಗಳು (ಕಡಿ) ಹರಡಿಕೊಂಡಿದೆ. ಎತ್ತು, ದನ-ಕರುಗಳು ಈ ಮಾರ್ಗದಲ್ಲಿ ನಡೆದುಕೊಂಡು ಹೋಗಲಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.ರಸ್ತೆಯ ಅಕ್ಕ-ಪಕ್ಕದ ಹೊಲಗಳ ರೈತರು ಈ ಮಾರ್ಗದಲ್ಲಿ ಒವರ್‌ಲೋಡ್ ಹಾಕಿಕೊಂಡು ಸಂಚರಿಸಬೇಡಿ ಎಂದು ತಾಕೀತು ಮಾಡಿದರು. ರೈತರ ಮಾತಿಗೆ ಕಿವಿಗೊಡದೆ ಪವನ ವಿದ್ಯುತ್ ಕಂಪನಿ ಹಗಲು ರಾತ್ರಿ ಎನ್ನದೇ ವಾಹನಗಳು ಸಂಚರಿಸುವುದನ್ನು ಕಂಡ ರೈತರು ವಾಹನಗಳನ್ನು ತಡೆದು ಕೆಲಕಾಲ ಪ್ರತಿಭಟಿಸಿ, ಈ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸಬಾರದು, ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ರೈತರಾದ ಬಸವರಾಜ ಕರಿಗಾರ, ದೇವಪ್ಪ ಅಣ್ಣಿಗೇರಿ, ಮಹ್ಮದಅಲಿ ಶೇಖ, ಮಹಾಂತೇಶ ವೆಂಕಟಾಪುರ, ಶೇಖಪ್ಪ ಸಂಗನಪೇಟಿ, ಮರಿಯಪ್ಪ ಕಪ್ಪತನವರ, ಮಹಾಂತೇಶ ಹೊಸಕಟ್ಟಿ, ಕಿರಣ ಕುಲಕರ್ಣಿ, ಮಂಜುನಾಥ ಬಾರಕೇರ, ಮುತ್ತಮ ಲಾಳಿ, ದೇವರಾಜ ಸಂಗನಪೇಟಿ, ಗಂಗಪ್ಪ ಹೊರಪೇಟಿ, ಉಮ್ಮಣ್ಣ ಕರಿಗೂಳಪ್ಪನವರ ಇದ್ದರು.;Resize=(128,128))
;Resize=(128,128))
;Resize=(128,128))