ಹಾವೇರಿ: ಇತ್ತೀಚಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಂಚಾಯತ ರಾಜ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದೇವಗಿರಿ ಗ್ರಾಪಂ ಪಿಡಿಓ ಸುನಿತಾ ಗರಡಿ ಅವರಿಗೆ ಅತ್ಯುತ್ತಮ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು. ಗ್ರಾಮ ಪಂಚಾಯತಿಯ ಯೋಜನೆಗಳನ್ನು ಉತ್ತಮ ಆಡಳಿತದ ಮೂಲಕ ಗ್ರಾಮೀಣ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದ ಸಾಧಕ ಪಿಡಿಓಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಅವರು ಅತ್ಯುತ್ತಮ ಸೇವಾ ಪುರಸ್ಕಾರ ಪ್ರದಾನ ಮಾಡಿ ಸನ್ಮಾನಿಸಿದರು. ದೇವಗಿರಿ ಗ್ರಾಮ ಪಂಚಾಯಿತಿಯಲ್ಲಿ ಸಮರ್ಪಕ ಕುಡಿಯುವ ನೀರು, ಅಂಗನವಾಡಿ ಅಭಿವೃದ್ಧಿ, ಗ್ರಾಮ ಪಂಚಾಯತಿ ಕಚೇರಿ ಆಧುನೀಕರಣ, ಘನ ತಾಜ್ಯ ವಿಲೇವಾರಿ ನಿರ್ವಹಣೆ, ರಸ್ತೆ, ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಜನರಿಗೆ ಅಚ್ಚುಕಟ್ಟಾಗಿ ಕಲಿಸಿಕೊಟ್ಟು ಮಾದರಿ ಪಂಚಾಯಿತಿಯಾಗಿ ನಿರ್ಮಾಣ ಮಾಡಿದ ಪಿಡಿಓ ಸುನಿತಾ ಗರಡಿ ಅವರಿಗೆ ಜಿಪಂ ಸಿಇಓ ರುಚಿ ಬಿಂದಲ್ ಹಾಗೂ ಉಪ ಕಾರ್ಯದರ್ಶಿ ಡಾ.ಪುನೀತ್, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ ಅವರು ಅತ್ಯುತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.