ಸಾರಾಂಶ
ಜಿಲ್ಲಾ ಕ್ರೀಡಾಂಗಣದಲ್ಲಿ ಛಾಯಾಗ್ರಾಹಕರಿಗಾಗಿ ತಾಲೂಕು ಮಟ್ಟದ ದೇವನಗರಿ ಕಪ್ ಕ್ರಿಕೆಟ್ ಪಂದ್ಯಾವಳಿಗಳ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಬಹುಮಾನವನ್ನು ಚನ್ನಗಿರಿ ತಾಲೂಕು ಛಾಯಾಗ್ರಾಹಕರ ಸಂಘ, ದ್ವಿತೀಯ ಬಹುಮಾನವನ್ನು ಹರಿಹರ ತಾಲೂಕು ಛಾಯಾಗ್ರಾಹಕರ ಸಂಘ ಪಡೆಯಿತು.
ದಾವಣಗೆರೆ: ಜಿಲ್ಲಾ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಹಾಗೂ ದಾವಣಗೆರೆ ತಾಲೂಕು ಯೂತ್ ವೆಲ್ಫೇರ್ ಅಸೋಸಿಯೇಷನ್ ಸಹಯೋಗದೊಂದಿಗೆ ಸೋಮವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಛಾಯಾಗ್ರಾಹಕರಿಗಾಗಿ ತಾಲೂಕು ಮಟ್ಟದ ದೇವನಗರಿ ಕಪ್ ಕ್ರಿಕೆಟ್ ಪಂದ್ಯಾವಳಿಗಳ ಹಮ್ಮಿಕೊಳ್ಳಲಾಗಿತ್ತು. ಪ್ರಥಮ ಬಹುಮಾನವನ್ನು ಚನ್ನಗಿರಿ ತಾಲೂಕು ಛಾಯಾಗ್ರಾಹಕರ ಸಂಘ, ದ್ವಿತೀಯ ಬಹುಮಾನವನ್ನು ಹರಿಹರ ತಾಲೂಕು ಛಾಯಾಗ್ರಾಹಕರ ಸಂಘ ಪಡೆಯಿತು. ವಿಜೇತ ತಂಡಕ್ಕೆ ಹಿರಿಯ ಛಾಯಾಗ್ರಾಹಕ ಚಿದಾನಂದ ಸಿರಿಗೆರೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ಜಾಧವ್, ತಾ. ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ.ಅಗಡಿ, ದಾವಣಗೆರೆ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಎಚ್‌ಕೆಸಿ ರಾಜು, ಮಿಥುನ್, ದುಗ್ಗೇಶ್ ಕಡೆಮನೆ, ಕೆ.ಪಿ. ನಾಗರಾಜ, ಅರುಣ್ ಪಾಟೀಲ, ತಿಲಕ್ ಬನಖಂಡಿ, ಮಲ್ಲಿಕಾರ್ಜುನ, ಅರುಣ, ಪ್ರಕಾಶ್, ಮಹಾಂತೇಶ್, ಶಿಕಾರಿ ಶಂಭು, ಹರಿಹರ ತಾಲೂಕು ಸಂಘದ ಅಧ್ಯಕ್ಷ ಸಂತೋಷ್, ಹೊನ್ನಾಳಿ ತಾಲೂಕು ಸಂಘದ ಅಧ್ಯಕ್ಷ ಬಸವನಗೌಡ, ಚನ್ನಗಿರಿ ತಾಲೂಕು ಸಂಘದ ಅಧ್ಯಕ್ಷ ರಾಮಕೃಷ್ಣ ಸೇರಿ ಸಂಘದ ಸದಸ್ಯರು ಭಾಗವಹಿಸಿದ್ದರು.......