ದೇವರಹಿಪ್ಪರಗಿ ಪಟ್ಟಣದ ಹುಡೇದ ಮಹಾಲಕ್ಷ್ಮೀ ಜಾತ್ರೆ ನಿಮಿತ್ತ ಹಾಗೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ನೂರಾರು ಭಕ್ತರು ಪಟ್ಟಣದ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಹುಡೇದ ಮಹಾಲಕ್ಷ್ಮೀ ಜಾತ್ರೆ ನಿಮಿತ್ತ ಹಾಗೂ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ನೂರಾರು ಭಕ್ತರು ಪಟ್ಟಣದ ಐತಿಹಾಸಿಕ ಕಲ್ಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಗುರುವಾರ ಬೆಳಗ್ಗೆ ಹುಡೇದ ಮಹಾಲಕ್ಷ್ಮಿ ದೇವಸ್ಥಾನಲ್ಲಿ ವಿಶೇಷ ಪೂಜೆ, ಜಲಾಭಿಷೇಕ ನೆರವೇರಿಸಿದ ಭಕ್ತರು ವರುಣ ಆಗಮನಕ್ಕಾಗಿ ಪ್ರಾರ್ಥಿಸಿದರು.
ಮುಂಗಾರು ಪ್ರಾರಂಭವಾಗಿ 5 ವಾರ ಕಳೆದರೂ ಮಳೆ ಆಗುತ್ತಿಲ್ಲ. ಇದರಿಂದ ಕಂಗಾಲಾದ ರೈತರು, ಜನತೆ ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ. ಸರ್ವರ ಹಿತಕ್ಕಾಗಿ ಮಳೆಯಾಗಲಿ ಎಂದು ಮುತ್ತ್ಯೆದೆಯರಿಂದ ಜಲಾಭಿಷೇಕ, ದೇವಸ್ಥಾನ ಸಮಿತಿ ಹಾಗೂ ಅಕ್ಕನ ಬಳಗದವರು ವಿಶೇಷ ಪೂಜೆ ಸಲ್ಲಿಸಿದರು.ಮುತ್ತೈದೆಯರಿಂದ ಶ್ರೀ ಮಹಾಲಕ್ಷ್ಮಿ ಗೆ ಅಭಿಷೇಕ, ನೈವೇದ್ಯ, ಕುಂಭ ಮೆರವಣಿಗೆ, ಜಲಾಭಿಷೇಕ, ರುದ್ರಾಭಿಷೇಕ, ಸಾಮೂಹಿಕ ಭಜನೆ ನೆರವೇರಿತು. ನಂತರ ಮಧ್ಯಾಹ್ನದ ಅನ್ನ ಪ್ರಸಾದ, ಅಭಿಷೇಕ ಉಡಿ ತುಂಬುವ ಕಾರ್ಯಕ್ರಮಗಳನ್ನು ವಿಶ್ವನಾಥ ಯಂಬತ್ನಾಳ ಹಾಗೂ ಕಾಶಿನಾಥ ಯಂಬತ್ನಾಳ ಕುಟುಂಬ ಸದಸ್ಯರು ನೇರವೇರಿಸಿದರು.ಸಂಜೆ ಮಂಗಳಾರತಿಯೊಂದಿಗೆ ಜಾತ್ರೆ ಸಂಪನ್ನಗೊಂಡಿತು.
ಕಾರ್ಯಕ್ರಮದ ನೇತೃತ್ವವನ್ನು ಗುರುಬಾಯಿ ದೇವೂರ, ರೇಖಾ ನಾಡಗೌಡ, ಗಂಗಾಬಾಯಿ ಬಬಲೇಶ್ವರ, ಸುಮಂಗಲಾ ಬೀಳಗಿ, ಬೋರಮ್ಮ ಹೊಸಮನಿ, ಕಾಶಿಬಾಯಿ ಮಿಂಚನಾಳ, ಸುಶ್ಮಿತಾ ಏಳುಕೋಟಿ, ಗಂಗಾಬಾಯಿ ಮಿಂಚನಾಳ, ಶ್ರೀಧರ ನಾಡಗೌಡ, ಪ್ರಭಾಕರ ಕುಲಕರ್ಣಿ, ನರೇಂದ್ರ ನಾಡಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.