ಸಾಮಾಜಿಕ ನ್ಯಾಯದ ಹರಿಕಾರ, ದೇಶ ಕಂಡ ಅಪರೂಪದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಹಾಗೂ ಅರಸು ವಿಚಾರ ವೇದಿಕೆಯ 28ನೇ ವರ್ಷಾಚರಣೆ ಪ್ರಯುಕ್ತ ಹೊನ್ನಾವರ ತಾಲೂಕಿನ ಸಾಮಾಜಿಕ ಕಾರ್ಯಕರ್ತರ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಹೊನ್ನಾವರ: ಸಾಮಾಜಿಕ ನ್ಯಾಯದ ಹರಿಕಾರ, ದೇಶ ಕಂಡ ಅಪರೂಪದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಹಾಗೂ ಅರಸು ವಿಚಾರ ವೇದಿಕೆಯ 28ನೇ ವರ್ಷಾಚರಣೆ ಪ್ರಯುಕ್ತ ತಾಲೂಕಿನ ಸಾಮಾಜಿಕ ಕಾರ್ಯಕರ್ತರ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಸಮಾಜ ಸೇವಕ ಅಬ್ದುಲ್ ಕರಿಂ ಇಸೂಬ್ ಸಾಬ್ ತಲ್ಕಣಿ ಮಾಗೋಡ, ಬಳಕೂರಿನ ಮಂಡಲ ಪಂಚಾಯಿತಿ ಮಾಜಿ ಪ್ರಧಾನ ನಾರಾಯಣ ನಾಯ್ಕ, ಜೆಡಿಎಸ್‌ ಮಾಜಿ ಜಿಲ್ಲಾಧ್ಯಕ್ಷ ಗಣಪಯ್ಯ ಎಂ. ಗೌಡ ಗುಣವಂತೆ, ಜಿಪಂ ಮಾಜಿ ಉಪಾಧ್ಯಕ್ಷೆ ವನಿತಾ ನಾಯ್ಕ ಮಂಕಿ, ಕೆಳಗಿ‌ನೂರು ಗ್ರಾಪಂ ಮಾಜಿ ಅಧ್ಯಕ್ಷ ಆಗ್ನೇಸ್ ಲೂಕಾಸ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು.

ಗಣಪಯ್ಯ ಎಂ.ಗೌಡ ಅವರನ್ನು ಅವರ ನಿವಾಸದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ‌ ಸೋನಿ ಗೌರವಿಸಿದರು. ಈ ವೇಳೆ ಗಣಪಯ್ಯ ಗೌಡ ಅವರು ದೇವರಾಜ ಅರಸು, ದೇವೇಗೌಡ ಅವರ ಒಡನಾಟ ಸ್ಮರಿಸಿದರು.

ಅರಸು ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿ, ಅರಸು ಅವರು ಶತಶತಮಾನಗಳ ಶೋಷಿತರಿಗೆ ಧ್ವನಿ ಕೊಟ್ಟವರು. ಭೂ ಸುಧಾರಣಾ ಕಾನೂನು ಮೂಲಕ ಅನ್ನ ನೀಡಿದವರು. ಹಾವನೂರು ಆಯೋಗದ ಮೂಲಕ ಮೀಸಲಾತಿ ಧ್ವನಿ ಕೊಟ್ಟವರು. ಉದ್ಯೋಗ ನೀಡಿದವರು. ಹಾಗಾಗಿ ನಾವು ಈ ವೇದಿಕೆ ರಚಿಸಿ, 28 ವರ್ಷದಿಂದ ವಿಶಿಷ್ಟ ರೀತಿಯಲ್ಲಿ ಅರಸು ಜನ್ಮದಿನ ಆಚರಿಸಿಕೊಂಡು ಬಂದಿದ್ದೇವೆ ಎಂದರು.

ಅರಸು ವೇದಿಕೆಯ ಸದಸ್ಯ ಹನುಮಂತ ನಾಯ್ಕ, ಕೇಶವ ನಾಯ್ಕ, ಪಾಂಡುರಂಗ ಬಾಗಿಲ ವೈದ್ಯ, ಎಂ.ಡಿ. ಗೌಡ ಹೊನ್ನಾವರ, ದೀಪಕ್ ಲೋಬೊ ಕೊಡಾಣಿ, ಯಾಹ್ಯಾಖಾನ ಕೊಡ್ಲಗದ್ದೆ, ನಾರಾಯಣ ಮುಕ್ರಿ, ರಮೇಶ ಮರಾಠಿ ತಲಗೋಡ, ಶಂಕರ ನಾಯ್ಕ ಬೆಟ್ಕೂರ್, ಗುರು ನಾಯ್ಕ, ಶಂಕರ ಗೌಡ ಗುಣವಂತೆ, ಆರ್.ಪಿ. ನಾಯ್ಕ, ಹರಿಯಪ್ಪ ನಾಯ್ಕ, ಸಿ.ಬಿ. ನಾಯ್ಕ, ಲೋಹಿತ್ ನಾಯ್ಕ, ಕರವೇ ಅಧ್ಯಕ್ಷ ಮಂಜುನಾಥ ಗೌಡ, ಜೆಡಿಎಸ್ ಕುಮಟಾ ತಾಲೂಕು ಅಧ್ಯಕ್ಷ ಸಿ.ಜಿ. ಹೆಗಡೆ, ಹೊನ್ನಾವರ ತಾಲೂಕು ಅಧ್ಯಕ್ಷ ಟಿ.ಟಿ. ನಾಯ್ಕ, ಭಟ್ಕಳ ತಾಲೂಕು ಅಧ್ಯಕ್ಷ ಈಶ್ವರ ನಾಯ್ಕ ಮತ್ತಿತರಿದ್ದರು.