ದೇವದುರ್ಗ ಶಾಸಕರ ಪುತ್ರ ಸಂತೋಷ ಗಡಿಪಾರಿಗೆ ಆಗ್ರಹ

| Published : Feb 19 2024, 01:32 AM IST

ಸಾರಾಂಶ

ಮರಳು ದಂಧೆಯ ಅಕ್ರಮದಲ್ಲಿ ಭಾಗಿಯಾಗಿ, ಮುಖ್ಯಪೇದೆ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಗುಂಡಾ ವರ್ತನೆ ಮಾಡಿದ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕರ ಪುತ್ರನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದಿಂದ ಶನಿವಾರ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಲಿಂಗಸುಗೂರು: ಮರಳು ದಂಧೆಯ ಅಕ್ರಮದಲ್ಲಿ ಭಾಗಿಯಾಗಿ, ಮುಖ್ಯಪೇದೆ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ಗುಂಡಾ ವರ್ತನೆ ಮಾಡಿದ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕರ ಪುತ್ರನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದಿಂದ ಶನಿವಾರ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕರೆಮ್ಮ ಜಿ. ನಾಯಕರನ್ನು ದೇವದುರ್ಗ ಕ್ಷೇತ್ರದ ಜನರು ಅಕ್ರಮಗಳ ತಡೆಗಟ್ಟಿ ಬಡ ಜನರು ನೆಮ್ಮದಿಯಿಂದ ಬದುಕಲಿ ಎಂದು ಶಾಸಕರಾಗಿ ಆಯ್ಕೆ ಮಾಡಿದ್ದಾರೆ.

ಆದರೆ, ಶಾಸಕಿ ಕರೆಮ್ಮ ಜಿ.ನಾಯಕರ ಪುತ್ರ ಸಂತೋಷ, ಶಾಸಕರ ಆಪ್ತ ಸಹಾಯಕ ಇಲಿಯಾಸ್ ಹಾಗೂ ಇತರರು ಅಕ್ರಮ ಗುಂಪುಕಟ್ಟಿಕೊಂಡು ದೇವದುರ್ಗದ ಪ್ರವಾಸಿ ಮಂದಿರಕ್ಕೆ ದೇವದುರ್ಗ ಪೊಲೀಸ್ ಠಾಣೆಯ ಪೇದೆ ಹನುಮಂತ್ರಾಯ ಕರೆಯಿಸಿ ಅಕ್ರಮ ಮರಳು ದಂಧೆಗೆ ಸಹಾಯ ಮಾಡುತ್ತಿಲ್ಲ ಎಂದು ಪ್ರವಾಸಿ ಮಂದಿರದಲ್ಲಿನ ಲೈಟ್ಗಳ ಆಫ್ ಮಾಡಿ ಮನಸೋ ಇಚ್ಛೆ ಥಳಿಸಿರುವ ಘಟನೆ ಖಂಡನೀಯವಾಗಿದೆ.

ಘಟನೆ ನಡೆದು ಹಲವು ದಿನಗಳ ಕಳೆದರೂ ಆರೋಪಿ ಬಂಧಿಸಿಲ್ಲ ಕೂಡಲೇ ಶಾಸಕಿ ಕರೆಮ್ಮ ನವರ ಪುತ್ರ ಆರೋಪಿ ಸಂತೋಷನನ್ನು ಹಾಗೂ ಇತರೇ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರವೇ ತಾಲೂಕ ಅಧ್ಯಕ್ಷ ಮಾದೇಶ ಸರ್ಜಾಪುರ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಬಸವರಾಜ ಪೇರಿ, ಜೆ.ನಾರಾಯಣ, ಮುತ್ತಣ್ಣ ಗುಡಿಹಾಳ, ಮಹಾಂತೇಶ ಹೂಗಾರ, ರಾಜುರೆಡ್ಡಿ, ಜೀವಾ ನಾಯಕ, ಜಗನ್ನಾಥ ಜಾದವ್, ಶ್ರೀಕಾಂತ ಮಾವಿನಬಾವಿ ಸೇರಿದಂತೆ ಇದ್ದರು.