ದೇವೇಗೌಡರು ರೈತರ ಪ್ರಧಾನಿ: ಉಪರಾಷ್ಟ್ರಪತಿ ಧನಕರ್

| Published : Oct 26 2024, 12:48 AM IST

ಸಾರಾಂಶ

ಎಚ್.ಡಿ.ದೇವೇಗೌಡ ಅವರು ಮಾಜಿ ಪ್ರಧಾನಿಯಲ್ಲ, ಅವರು ರೈತರ ಪ್ರಧಾನಿ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಬಣ್ಣಿಸಿದರು.

ಮಂಡ್ಯ

ಎಚ್.ಡಿ.ದೇವೇಗೌಡ ಅವರು ಮಾಜಿ ಪ್ರಧಾನಿಯಲ್ಲ, ಅವರು ರೈತರ ಪ್ರಧಾನಿ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಬಣ್ಣಿಸಿದರು. ನಾಗಮಂಗಲ ತಾಲೂಕು ಬಿಜಿಎಸ್ ನಗರದಲ್ಲಿರುವ ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲಿ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಅವರೊಬ್ಬ ಭಾರತದ ಸುಪುತ್ರ. ರೈತಪರ ಕಾಳಜಿ ಇರುವ ಒಳ್ಳೆಯ ಮನಸ್ಸಿರುವ ಶ್ರೇಷ್ಠ ವ್ಯಕ್ತಿ. ನಾನು ವಿದ್ಯಾರ್ಥಿ ದಿಸೆಯಿಂದಲೂ ಇವರ ಹೋರಾಟದ ಬಗ್ಗೆ ಕೇಳಿದ್ದೇನೆ. ಇಳಿ ವಯಸ್ಸಿನಲ್ಲೂ ಅವರು ರೈತರ ಪರ ಇಂದಿಗೂ ಸಂಸತ್‌ನಲ್ಲಿ ದನಿ ಎತ್ತುತ್ತಿರುವುದು ಸಾಮಾಜಿಕ ಕಳಕಳಿ ಮತ್ತು ಬದ್ಧತೆಗೆ ಸಾಕ್ಷಿ ಎಂದರು.

------------

ವೇದಶಾಸ್ತ್ರದ ಮೂರನೇ ಅಧ್ಯಾಯದಲ್ಲಿ ಅತ್ಯುತ್ತಮ ತತ್ವಶಾಸ್ತ್ರ ಪ್ರಕೃತಿಯ ಮಡಿಲಿನಲ್ಲಿ ಚರ್ಚೆಯಾಗುತ್ತದೆ ಎಂಬ ಮಾತಿದೆ. ಶ್ರೀಮಠದಲ್ಲಿ ಅಂತಹದ್ದೊಂದು ವಾತಾವರಣವಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಆಧುನಿಕ ಶಿಕ್ಷಣ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲಾಗಿದೆ. ಪ್ರತಿ ದಿನವೂ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಉತ್ಕೃಷ್ಟವಾಗಿ ಬೆಳವಣಿಗೆ ಕಾಣುತ್ತಿದೆ. ಇಲ್ಲಿ ಯಾವುದೇ ಜಾತಿ-ಮತ ಭೇದವಿಲ್ಲದೆ ಎಲ್ಲರನ್ನೊಳಗೊಂಡ ಸಮಾಜವಿದೆ. ಎಲ್ಲಾ ಸಮುದಾಯ, ಜನಾಂಗದ ಮಕ್ಕಳು ಶಿಕ್ಷಣವನ್ನು ಕಲಿಯುತ್ತಿದ್ದಾರೆ. ಅದೇ ರೀತಿ ಶ್ರೀಮಠವೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶಿಕ್ಷಣ ನೀಡುತ್ತಿದೆ. ಕೋವಿಡ್‌ನಂತಹ ಪರಿಸ್ಥಿತಿಯಲ್ಲೂ ಸರ್ಕಾರದ ನೆರವಿನೊಂದಿಗೆ ಸಹಾಯ ಮಾಡಿದೆ. ಇದು ಪ್ರಶಂಸನೀಯ ಎಂದು ಬಣ್ಣಿಸಿದರು.