ಸಾರಾಂಶ
ಮಾನ್ವಿ ಪಟ್ಟಣದ ಉಮಾಪತಿ ಪಾಟೀಲ್ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ಆಹಾರ ಪದಾರ್ಥಗಳನ್ನು ಪಾಲಕರಿಗೆ ಮಾರಾಟ ಮಾಡಿದರು.
ಕನ್ನಪ್ರಭ ವಾರ್ತೆ ಮಾನ್ವಿ
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆ ಸಾಮಾನ್ಯ ಜ್ಞಾನ, ವ್ಯವಹಾರ ಕೌಶಲ್ಯವನ್ನು ಬೆಳೆಸಬೇಕು ಎಂದು ಉಮಾಪತಿ ಪಾಟೀಲ್ ಸ್ಮಾರಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ಪಾಟೀಲ್ ಸಲಹೆ ನೀಡಿದರು.ಪಟ್ಟಣದ ಉಮಾಪತಿ ಪಾಟೀಲ್ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಕ್ಕಳೆ ತಯಾರಿಸಿದ ಆಹಾರ ಪದಾರ್ಥಗಳ ಮೇಳವನ್ನು ಶಾಲೆಯಲ್ಲಿ ಆಯೋಜಿಸಿದ್ದು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಮ್ಮ ಆಹಾರ ಪದಾರ್ಥ ಗಳನ್ನು ಮಾರಾಟ ಮಾಡುವ ಮೂಲಕ ವ್ಯವಹಾರ ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ ಪಾಟೀಲ್, ಶಾಲೆಯ ಮುಖ್ಯಗುರು ಶ್ರೀದೇವಿ ಮಠದ್, ಶಿಕ್ಷಕರಾದ ಕಾರ್ತೀಕ್, ವಿಶಾಲ, ಲಕ್ಷ್ಮೀ, ಸಹಾನ, ಆಫ್ರಿರೀನ್, ಸೌಮ್ಯ ರವರು ಮಕ್ಕಳಿಗೆ ಅಗತ್ಯವಾದ ನೆರವನ್ನು ಹಾಗೂ ಮಾರ್ಗದರ್ಶನವನ್ನು ನೀಡಿದರು.