ಶೃಂಗೇರಿಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿರುತ್ತದೆ. ಆದರೆ ಅದಕ್ಕೆ ಅಗತ್ಯ ಪ್ರೋತ್ಸಾಹವಿರುವುದಿಲ್ಲ. ಮಕ್ಕಳಲ್ಲಿ ಕಲಿಕೆಯ ಕುತೂಹಲ, ಆಸಕ್ತಿ, ಅಭಿರುಚಿ ಬೆಳೆಸಬೇಕು ಎಂದು ಶಿಕ್ಷಕ ಬಿ.ಆರ್.ಗಂಗಾಧರಪ್ಪ ಹೇಳಿದರು.

ಮಕ್ಕಳ ಕಲಿಕಾ ಹಬ್ಬ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿರುತ್ತದೆ. ಆದರೆ ಅದಕ್ಕೆ ಅಗತ್ಯ ಪ್ರೋತ್ಸಾಹವಿರುವುದಿಲ್ಲ. ಮಕ್ಕಳಲ್ಲಿ ಕಲಿಕೆಯ ಕುತೂಹಲ, ಆಸಕ್ತಿ, ಅಭಿರುಚಿ ಬೆಳೆಸಬೇಕು ಎಂದು ಶಿಕ್ಷಕ ಬಿ.ಆರ್.ಗಂಗಾಧರಪ್ಪ ಹೇಳಿದರು.

ತಾಲೂಕಿನ ಅಡ್ಡಗದ್ದೆ ಪಂಚಾಯಿತಿ ಆನೆಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಿದ್ದ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ ಪಠ್ಯ ವಿಷಯಗಳ ಕಲಿಕೆ ಜೊತೆಗೆ ಪಠ್ಯೇತರ ವಿಷಯಗಳ ಬಗ್ಗೆಯೂ ಆಸಕ್ತಿ ಬೆಳೆಸಬೇಕು. ಚಿತ್ರಕಲೆ, ಸಾಹಿತ್ಯ, ಸೇರಿದಂತೆ ಇತರೆ ವಿಷಯಗ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.

ಮಕ್ಕಳಲ್ಲಿ ಅನೇಕ ಪ್ರತಿಭೆಗಳಿರುತ್ತದೆ. ಆದರೆ ಅದಕ್ಕೆ ಅಗತ್ಯ ಪ್ರೋತ್ಸಾಹ, ವೇದಿಗಳಿಲ್ಲದೇ ಎಲೆಮರೆ ಕಾಯಿಯಂತೆ ಅಡಗಿರುತ್ತದೆ. ಪೋಷಕರು, ಶಿಕ್ಷಕರು ಅಂತಹ ಪ್ರತಿಭೆ ಹೊರತರುವ ಕೆಲಸ ಮಾಡಬೇಕು. ಕಲಿಕಾ ಹಬ್ಬಗಳು ಇಂತಹ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗುತ್ತದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಇಂದಿರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿಕಾ ಹಬ್ಬಗಳು ಮಕ್ಕಳಲ್ಲಿ ಸಂತಸದ ಹಬ್ಬದ ವಾತಾವರಣ ಮೂಡಿಸುತ್ತದೆ. ಕಲಿಕೆ ಆಸಕ್ತಿ ಹೆಚ್ಚಿಸುತ್ತದೆ. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಲು ಪೂರಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ದತ್ತಾತ್ರೆಯ ಯಾಜಿ ದೈಹಿಕ ಶಿಕ್ಷಣ ನಿರ್ದೇಶಕ ಸಿದ್ದರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ದಿನೇಶ್, ವಿಜಯ್ ಕುಮಾರ್, ಮೈತ್ರಿ ಮತ್ತಿತರರು ಉಪಸ್ಥಿತರಿದ್ದರು. ಬಿಆರ್ ಸಿ ಸುಂದರೇಶ್ , ಸುರೇಶ್ , ಕವಿತಾ ಎಂದರು.

6 ಶ್ರೀ ಚಿತ್ರ 1-

ಶೃಂಗೇರಿ ಆನೆಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಿದ್ದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ ವನ್ನು ಶಿಕ್ಷಕ ಬಿ.ಆರ್.ಗಂಗಾಧರಪ್ಪ ಉದ್ಘಾಟಿಸಿದರು.