ಅದ್ಭುತ ಪ್ರಕೃತಿಯ ನಡುವೆ ಇರುವ ಈ ದೇವಾಲಯವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿಸುವತ್ತ ಸರ್ಕಾರ ಗಮನ ವಹಿಸಬೇಕು.
ಸಿದ್ದಾಪುರ: ಕನ್ನಡದ ಕುಲದೇವತೆ ಭುವನೇಶ್ವರಿಯ ನೆಲೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಒಂದು ಸೌಭಾಗ್ಯ ಎಂದು ಬೆಂಗಳೂರಿನ ಟೆಲಿಕಾಂ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಷನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎನ್. ನರಸಿಂಹಮೂರ್ತಿ ಹೇಳಿದರು. ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ಪ್ರತಿವರ್ಷದಂತೆ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದ್ಭುತ ಪ್ರಕೃತಿಯ ನಡುವೆ ಇರುವ ಈ ದೇವಾಲಯವನ್ನು ಒಂದು ಸುಂದರ ಪ್ರವಾಸಿ ತಾಣವನ್ನಾಗಿಸುವತ್ತ ಸರ್ಕಾರ ಗಮನ ವಹಿಸಬೇಕು. ಕನ್ನಡಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿ ಹೋರಾಡುತ್ತಿರುವ ಬೇಕ್ರಿ ರಮೇಶ ಅವರ ಬೆಂಬಲಕ್ಕೆ ನಾವೆಲ್ಲ ಸದಾ ಇರುತ್ತೇವೆ ಎಂದರು. ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನ ಸಂಸ್ಕಾರ ಅವನ ವ್ಯಕ್ತಿತ್ವವನ್ನು ತಿಳಿಸುತ್ತದೆ. ಮಹಿಳೆಯರಿಗೆ ಗೌರವ ನೀಡುವುದನ್ನು ಯುವಪೀಳಿಗೆಗೆ ಕಲಿಸಬೇಕಾಗಿದೆ ಎಂದರು. ಹಾವೇರಿಯ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ಹನುಮಂತಪ್ಪ ಹಡಗದ ಹಾದ್ರಿಹಳ್ಳಿ ಪ್ರಶಸ್ತಿ ಪ್ರದಾನ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿ ಕೆ.ಎಸ್. ಸಿದ್ದೇಗೌಡ ಜೆ., ನಿವೃತ್ತ ಕುಲಸಚಿವ ಶಿವರುದ್ರಪ್ಪ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಎಂ. ಶಿವಲಿಂಗಯ್ಯ ಮಂಡ್ಯ, ಲೆಕ್ಕಪರಿಶೋಧಕ ಕೆ. ರಾಮಲಿಂಗೇಗೌಡ ಮಂಡ್ಯ, ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಮುನೀರ್ ಫರ್ನಾಂಡೀಸ್, ಪ್ರಗತಿಪರ ರೈತ ರಮೇಶ ಹನುಮಂತಪ್ಪ ಹಡಗದ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಬಾಳೂರು, ಮಹೇಶ ವೈ.ಎನ್. ಯಲಿಯೂರು, ಸತೀಶ ಎಲೆಜಾಕನಹಳ್ಳಿ, ದೇವಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷ ಚಂದ್ರಕಾಂತ ಹೆಗಡೆ ಗುಂಜಗೋಡು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗಣೇಶಭಟ್ಟ ಹೊಸೂರು, ನಿತಿನ್ ಹೆಗಡೆ ಮುತ್ತಿಗೆ, ಸುಜಯ್ ಪಿ. ಭಟ್ ಮುತ್ತಿಗೆ, ನಾಟಕಕರ್ತ ಮಾಧವ ಶರ್ಮಾ ಕಲಗಾರು ಹಾಲಮ್ಮ ಪಾಂಡುರಂಗ ನಾಯ್ಕ(ಆಶಾ ಕಾರ್ಯಕರ್ತೆ, ಸಿದ್ದಾಪುರ), ಗಣಪತಿ ಹೆಗಡೆ ಗುಂಜಗೋಡ (ಕಲಾವಿದರು, ಸಿದ್ದಾಪುರ ), ದುರ್ಗಾ ವಿನಾಯಕ ಕೃಷಿಕ ಯುವಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು(ವಾಜಗದ್ದೆ, ಸಿದ್ದಾಪುರ), ಶುಭಾ ರಮೇಶ ಲಕ್ಕಿಚಡ್ಡಿ(ಯಕ್ಷಗಾನ ಕಲಾವಿದೆ ಸಿದ್ದಾಪುರ.), ಸುಧೀರ ಸುರೇಶ ನಾಯಕ ಬೇಂಗ್ರೆ(ಗಾಯಕ, ಸಿದ್ದಾಪುರ), ಪುರುಷೋತ್ತಮ ರಾಗಿಮುದ್ದನಹಳ್ಳಿ(ಮಂಡ್ಯ), ತಿಮ್ಮೇಗೌಡ ಹುಲ್ಲಕೆರೆ(ಪ್ರಗತಿಪರ ರೈತ, ಪಾಂಡವಪುರ), ಸುರೇಶ ಕುಮಾರ ರಾಜಗುರು(ವಿಜಯಪುರ ಜಿಲ್ಲೆ), ಅರ್ಜುನ ಜಿ. ಲಮಾಣಿ(ವಿಜಯಪುರ ಜಿಲ್ಲೆ), ಚೆನ್ನು ಜಿ. ಕಟ್ಟಿಮನಿ(ವಿಜಯಪುರ), ಶಂಕರ ಎಂ. ಜಲ್ಲಿ(ವಿಜಯಪುರ), ಶ್ರೀನಿವಾಸಮೂರ್ತಿ(ಪ್ರಕೃತಿ ಪ್ರಿಯ, ಯಲಹಂಕ ತಾ.), ವಿಜಯಕುಮಾರ್(ಬೆಂಗಳೂರು), ಆರ್. ಶಾಂತ(ಕನ್ನಡ ಹೋರಾಟಗಾರ್ತಿ, ಬೆಂಗಳೂರು) ಅವರಿಗೆ ವಿವಿಧ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಪತ್ರಕರ್ತ ಉದಯಕುಮಾರ್ ಕಾನಳ್ಳಿ ಬನವಾಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.