ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಕೃತಿ ಓದುವ ಹವ್ಯಾಸ ಬೆಳೆಸಿಕೊಳ್ಳಿ

| Published : Jan 26 2025, 01:34 AM IST

ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಕೃತಿ ಓದುವ ಹವ್ಯಾಸ ಬೆಳೆಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿದೆಸೆಯಲ್ಲಿಯೇ ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಕಂಪ್ಲಿ: ವಿದ್ಯಾರ್ಥಿದೆಸೆಯಲ್ಲಿಯೇ ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ವಾಸವಿ ಕನ್ನಡ ಹಿಪ್ರಾ ಅನುದಾನಿತ ಶಾಲೆ ಶಿಕ್ಷಕಿ ಬಿ.ಗಾಯತ್ರಿ ತಿಳಿಸಿದರು.

ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ತಾಲೂಕು ಕಸಾಪನಿಂದ ಶುಕ್ರವಾರ ಉಡುಪಿ ಪದ್ಮಾವತೆಮ್ಮ ರಘುರಾಮಾಚಾರ್, ರುಕ್ಮಿಣಮ್ಮ ಎಸ್.ಎಂ. ನಾರಾಯಣಶೆಟ್ಟಿ, ದಿ.ಎಂ.ಪಿ.ಪ್ರಕಾಶ್ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ ಪಂಪನ ಆದಿಪುರಾಣ ಮತ್ತು ದಾಸ ಸಾಹಿತ್ಯ ಕುರಿತು ಉಪನ್ಯಾಸ ನೀಡಿ, ಮಾತನಾಡಿದರು.

ಆದಿ ಪುರಾಣವು ಜೀವನದ ಸಾರ್ಥಕತೆ ತಿಳಿಸುತ್ತದೆ. ಭೋಗ, ವ್ಯಾಮೋಹದಿಂದ ಬಿಡುಗಡೆ ಹೊಂದುವಂತೆ ಪ್ರೇರೇಪಿಸುತ್ತದೆ. ದಾಸ ಸಾಹಿತ್ಯ ಜನಮಾನಸದಲ್ಲಿ ಸಂಸ್ಕೃತಿ, ಸಂಸ್ಕಾರ, ಭಗವಂತನ ಪ್ರೇಮವನ್ನು ಮೂಡಿಸುತ್ತದೆ. ಸಮಾಜವನ್ನು ಸನ್ನಡತೆ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವಲ್ಲಿ ದಾಸ ಸಾಹಿತ್ಯ ಮಹತ್ವದ ಪಾತ್ರ ವಹಿಸಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸಾಪ ದತ್ತಿ ಕಾರ್ಯಕ್ರಮಗಳ ಮೂಲಕ ಶಾಲೆ ಕಾಲೇಜು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸಲಾಗುವುದು. ಕನ್ನಡಪರ ಕಾರ್ಯಕ್ರಮಗಳನ್ನು ಶಾಲೆ ಕಾಲೇಜುಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.

ಸಂಸ್ಥೆಯ ನಿರ್ದೇಶಕ ರಾಮಲಿಂಗಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಶಿಕ್ಷಕ ರಾಜುಬಿಲಂಕರ್, ಪ್ರಮುಖರಾದ ತಿಪ್ಪಯ್ಯಶ್ರೇಷ್ಠಿ, ನಾಗೇಶ್ವರರಾವ್, ಪದಾಧಿಕಾರಿಗಳಾದ ಎಸ್.ಡಿ. ಬಸವರಾಜ, ಹಾದಿಮನಿ ಕಾಳಿಂಗವರ್ಧನ, ಯು.ಎಂ. ವಿದ್ಯಾಶಂಕರ, ಎಲಿಗಾರ ವೆಂಕಟರೆಡ್ಡಿ ಇದ್ದರು.