ವಿಕಸಿತ ಭಾರತ ಯೂತ್ ಪಾರ್ಲಿಮೆಂಟ್ 2025 - ಮನು ಶೆಟ್ಟಿ ಆಯ್ಕೆ

| Published : Mar 24 2025, 12:33 AM IST

ಸಾರಾಂಶ

ಭಾರತ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಯುವ ಪಾರ್ಲಿಮೆಂಟ್ ಸ್ಪರ್ಧೆಯಲ್ಲಿ ಉಡುಪಿ ಎಂ.ಜಿ.ಎಂ. ಕಾಲೇಜಿನ ವಿದ್ಯಾರ್ಥಿನಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಮಾ. 22 ಮತ್ತು 23ರಂದು ಮಂಗಳೂರು ಕೊಡಗು ಮತ್ತು ಉಡುಪಿ ಜಿಲ್ಲಾಮಟ್ಟದ ಸ್ಪರ್ಧೆಯು ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡಿಯಿತು. ಮೂರು ಜಿಲ್ಲೆಗಳ ಸುಮಾರು 150 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಅಂತಿಮವಾಗಿ 10 ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿದೆ ಮಾರ್ಚ್ 27ರಂದು ರಾಜ್ಯಮಟ್ಟದ ವಿಕಸಿತ ಭಾರತ ಯುತ್ ಪಾರ್ಲಿಮೆಂಟ್ - 2025 ಕಾರ್ಯಕ್ರಮವು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯಲಿದೆ.

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಡಾ.ಎಂ. ವೆನಿಸ್ಸಾ ಎ.ಸಿ. ಅವರು ವಿಜೇತರಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು. ನೆಹರು ಯುವ ಕೇಂದ್ರದ ನೋಡಲ್ ಅಧಿಕಾರಿ ಲೋಕೇಶ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದ ಎನ್ಎಸ್ಎಸ್ ಸಂಯೋಜಕರಾದ ಡಾ. ಶೇಷಪ್ಪ ಅಮೀನ್ ಮತ್ತು ಸೈಂಟ್ ಆಗ್ನೆಸ್ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ ಉದಯ್ ಕುಮಾರ್ ಉಪಸ್ಥಿತರಿದ್ದರು.