ಸಾರಾಂಶ
ಹೊಸಪೇಟೆ: ಎಂಜಿನಿಯರ್‌ಗಳು ಬಿಲ್ಡಿಂಗ್‌ನ ಡಾಕ್ಟರ್‌ಗಳಿದ್ದಂತೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ ಹೊಸಪೇಟೆ ಮತ್ತು ಯುಎಸ್ ಕಮ್ಯೂನಿಕೇಶನ್ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ ಕಟ್ಟಡ ಸಾಮಗ್ರಿಗಳ ಇಂಟಿರಿಯರ್ಸ್, ಎಕ್ಸ್ಟೀರಿಯರ್ಸ್, ಹೋಂ ಲೋನ್ ಮತ್ತು ಫರ್ನಿಚರ್ಸ್ ಬೃಹತ್ ವಸ್ತು ಪ್ರದರ್ಶನ ಬಿಲ್ಡ್ ಟೆಕ್-2024ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ಹೊಸಪೇಟೆ ನಗರಕ್ಕೆ ಈ ರೀತಿಯ ಕಾರ್ಯಕ್ರಮಗಳ ಅಗತ್ಯವಿತ್ತು ಎಂದು ಹೇಳಿದರು.
ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮಾತನಾಡಿ, ಎಂಜಿನಿಯರರ್ಸ್ ಅಸೋಸಿಯೇಷನ್ ಕಟ್ಟಡಕ್ಕಾಗಿ ಭೂಮಿ ಮಂಜೂರು ಕೋರಿಕೆಯ ಅರ್ಜಿ ಸ್ವೀಕರಿಸಿ ಮಂಜೂರು ಭರವಸೆ ನೀಡಿದರು. ಎಂಜಿನಿಯರ್ಸ್ ಸಂಘದ ಅಧ್ಯಕ್ಷ ಆರ್ಕಿಟೆಕ್ಟ್ ಬಿ.ಶ್ರೀಪಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರದರ್ಶನದಲ್ಲಿ ಸುಮಾರು 65ಕ್ಕಿಂತ ಹೆಚ್ಚು ಮಳಿಗೆಗನ್ನು ಹಾಕಲಾಗಿತ್ತು. ಮನೆ ಕಟ್ಟುವ ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತ ಮಾಹಿತಿ, ಮನೆ ಬುನಾದಿಯಿಂದ ಸೋಲಾರ್ ವರೆಗೂ ವಿವಿಧ ಉತ್ಪನ್ನಗಳು ಅನಾವರಣಗೊಂಡಿವೆ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶ್ವಿನ್ ಕೋತಂಬರಿ, ಪಿಡಿಐಟಿ ಕಾಲೇಜಿನ ಅಧ್ಯಕ್ಷ ಕೆ.ಎಸ್. ಬದಾಮಿ, ಟೈಗರ್ ಟಿ ಎಂಟಿ ಕಂಪನಿ ಅಧಿಕಾರಿ ಬಲವಂತರಾವ್, ಜಿಲ್ಲಾ ವಿತರಕ ರಾಘವೇಂದ್ರ, ಜಲ್‌ಬಾತ್ ಫಿಟ್ಟಿಂಗ್ಸ್ ಮತ್ತು ಸೆನೆಟ್ರಿ ವಿತರಕ ಅಜಯ್ ಅಗರ್‌ವಾಲ್, ಎಂಜಿನಿಯರ್ಸ್ ಸಂಘದ ಕಾರ್ಯದರ್ಶಿ ಚಂದ್ರಶೇಖರ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮೌಲಾಸಾಬ್, ಎಂಜಿನಿಯರ್‌ಗಳಾದ ರಾಮಾ ಜೋಶಿ, ಡಿ.ಚಂದ್ರಶೇಖರ, ಅರುಣ್ ತೆಗ್ಗಿ, ಎಂ.ಗವಿಸಿದ್ದಯ್ಯ, ಅನಿಲ್ ಬಿ. ರೂಗೆ, ಎಚ್.ನಾರಾಯಣಪ್ಪ ಗಣಪ, ಅರುಣ್ ಕುಮಾರ್ ರಾಯಬಾಗಿ, ಗಣೇಶ್ ವೈದ್ಯ, ಎಸ್.ವೇಣುಗೋಪಾಲ್, ಯುಎಸ್ ಕಮ್ಯೂನಿಕೇಶನ್ಸ್ ಎಸ್.ಎಂ.ಕೆ.ಉಮಾಪತಿ ಮತ್ತಿತರರಿದ್ದರು.