ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ : ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ

| N/A | Published : Feb 03 2025, 12:30 AM IST / Updated: Feb 03 2025, 01:36 PM IST

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ : ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

 ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸ ಮಾತನಾಡಿದರು.

ಹೊನ್ನಿಹಾಳ ಗ್ರಾಮದ ಎಸ್.ಸಿ. ಕಾಲೋನಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ‌ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ಪ್ರಕಾಶ ಕಡ್ಯಾಗೋಳ, ಶಿವಾನಂದ ಮಠದ, ಮಹಾದೇವ ತಳವಾರ, ಸುರೇಖಾ ಕಟಬುಗೋಳ, ಗುಂಡು ತಳವಾರ, ರಾಜು ತಳವಾರ, ಸುರೇಶ ಕಟಬುಗೋಳ, ನಿಲೇಶ ಚಂದಗಡ್ಕರ್, ಲಕ್ಷ್ಮಣ ಮಲ್ಲವ್ವಗೋಳ, ಭೀಮ ನರಗುಂದಕರ್, ದಾದಾಪೀರ್ ಸಾಂಬ್ರೇಕರ್‌ ಇದ್ದರು.

ಮಾವಿನಕಟ್ಟಿ ಗ್ರಾಮದಿಂದ ಬಾಪುಸಾಹೇಬ ಜಾಧವ ತೋಟದವರೆಗೆ ₹2 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ವೇಳೆ ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೊಳಿ, ಮಹೇಶ ಮಲ್ಲಣ್ಣವರ, ರಾಜು ನೇಸರಗಿ, ಅಶೋಕ ಕೋಲಕಾರ, ಪ್ರವೀಣ ಕೋಲಕಾರ, ಪಾರೇಶ ಕೋಲಕಾರ, ರಾಜು ಅರಗಂಜಿ ಇದ್ದರು.

ಮಾರಿಹಾಳ ಗ್ರಾಮದಲ್ಲಿ ₹50 ಲಕ್ಷ ವೆಚ್ಚದಲ್ಲಿ ಪತ್ರಿ ಬಸವೇಶ್ವರ ದೇವಸ್ಥಾನದಿಂದ ಹೊಲಗದ್ದೆಗಳಿಗೆ ತೆರಳುವ ಕುಮರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಗಿರಿಜಾ ಪಾಟೀಲ, ಬಸವರಾಜ ಮ್ಯಾಗೋಟಿ, ಶಂಕರ ಸೊಗಲಿ, ಪ್ರಕಾಶ ಯಲ್ಲಪ್ಪನವರ, ಈರಣ್ಣ ಹಿರವಣ್ಣವರ, ಬಸವರಾಜ ಹಿತ್ತಲಮನಿ, ಗುಡದಪ್ಪ ಗೊರವ, ಯಲಗುಂಡ ಸೀತಿಮನಿ, ಬಸವಣ್ಣಿ ಬಾಲನಾಯ್ಕ, ಮಲ್ಲಣ್ಣ ಹಿರವಣ್ಣವರ, ಬಸವಣ್ಣಿ ಬಾಲನಾಯ್ಕ, ಬಾಳು ಕರವಿನಕೊಪ್ಪ, ಅಶೋಕ ಸಾಳುಂಕೆ, ವಿನೋದ ಚೌಹಾನ ಇತರರು ಇದ್ದರು.