ಕಾಂಗ್ರೆಸ್ ಗೆದ್ದರೆ ಕಲಬುರಗಿಯಲ್ಲಿ ಅಭಿವೃದ್ಧಿ ಪರ್ವ: ಖರ್ಗೆ

| Published : Apr 04 2024, 01:00 AM IST

ಕಾಂಗ್ರೆಸ್ ಗೆದ್ದರೆ ಕಲಬುರಗಿಯಲ್ಲಿ ಅಭಿವೃದ್ಧಿ ಪರ್ವ: ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ, ಸುಳ್ಳು ಭರವಸೆಗಳ ಅಭಿವೃದ್ಧಿ ಚುನಾವಣೆಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ರಾಧಾಕೃಷ್ಣ ಗೆಲುವು ಸಾಧಿಸಿದರೆ, ಕಲಬುರಗಿಗೆ ತ್ರಿಬಲ್ ಅಭಿವೃದ್ಧಿ ಗ್ಯಾರಂಟಿಯಾಗಿದೆ ಎಂದು ಐಟಿಬಿಟಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದರು.

ಕನ್ನಡಪ್ರಭವಾರ್ತೆ ಶಹಾಬಾದ

ಈ ಬಾರಿ ಲೋಕಸಭಾ ಚುನಾವಣೆ, ಸುಳ್ಳು ಭರವಸೆಗಳ ಅಭಿವೃದ್ಧಿ ಚುನಾವಣೆಯಾಗಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ರಾಧಾಕೃಷ್ಣ ಗೆಲುವು ಸಾಧಿಸಿದರೆ, ಕಲಬುರಗಿಗೆ ತ್ರಿಬಲ್ ಅಭಿವೃದ್ಧಿ ಗ್ಯಾರಂಟಿಯಾಗಿದೆ ಎಂದು ಐಟಿಬಿಟಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಭರವಸೆ ನೀಡಿದರು.

ಅವರು ನಗರದ ಸಹಾರಾ ಸಭಾಗೃಹದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ, ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರದಲ್ಲಿ ರಾಜ್ಯಸಭೆ ಸದಸ್ಯರು, ಎಐಸಿಸಿ ಅಧ್ಯಕ್ಷರಾಗಿ ಡಾ.ಮಲ್ಲಿಕಾರ್ಜುನ ಖರ್ಗೆ, ಲೋಕ ಸಭೆಯಲ್ಲಿ ರಾಧಾಕೃಷ್ಣ, ಜಿಲ್ಲೆಯಲ್ಲಿ ನಾವು ನೀವೆಲ್ಲಾ ಸೇರಿ ಜಿಲ್ಲೆ ಅಭಿವೃದ್ಧಿ ಮಾಡೋಣ ಎಂದರು.

ಕಳೆದ ಬಾರಿ ಕಲಬುರಗಿ ಲೋಕ ಸಭಾ ಚುನಾವಣೆಯಿಲ್ಲಿ ಬಿಜೆಪಿ, ಆರ್‌ಎಸ್‍ಎಸ್ ಕುತಂತ್ರಿದಿಂದ ಖರ್ಗೆ ಸೋಲಾಗಿದೆ. ಈ ಸೋಲಿನಿಂದಾಗ ಕಲಬುರಗಿಗೆ ಖರ್ಗೆ ಅದ್ಹೇಗೆ ಅನಿವಾರ್ಯ ಎಂಬುವುದು ಜನತೆಗೆ ಗೊತ್ತಾಗಿದೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕತ್ವವನ್ನು ಡಾ.ಖರ್ಗೆ ವಹಿಸಿದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯಬೇಕೆಂದು ಸಂಕಲ್ಪ ಮಾಡಿದ್ದಾರೆ. ಅವರ ಸಂಕಲ್ಪ ಕಲಬುರಗಿಯಿಂದಲೇ ಈಡೇರಬೇಕೆಂದರು.

ಕಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್ ಮಾತನಾಡಿ, ಸಂಸದ ಡಾ. ಜಾಧವ ಅವರು ಐದು ವರ್ಷದಲ್ಲಿ ವಂದೇ ಭಾರತ ರೈಲು ಓಡಿಸಿದ್ದೇ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ವಕ್ತಾರ ವಸಂತಕುಮಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ ಮಾತನಾಡಿದರು, ತಿಪ್ಪಣ್ಣಪ್ಪ ಕಮಕನೂರ, ಡಿ.ಜಿ.ಸಾಗರ, ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ, ಶಿವಾನಂದ ಪಾಟೀಲ, ರಾಯಚೂರು ಶಾಸಕ ಹಂಪನಗೌಡ, ಶ್ಯಾಮ ನಾಟೀಕಾರ, ಚಂದ್ರಿಕಾ ಪರಮೇಶ್ವರ, ದೇವೆಂದ್ರಪ್ಪ ಮರತೂರ, ರೇಣುಕಾ, ಸುರೇಶ ನಾಯಕ, ಕಿಶನ್ ನಾಯಕ ವಿಜಯಕುಮಾರ ಮುಟ್ಟತ್ತಿ, ಅರವಿಂದ ಚವ್ಹಾಣ, ಸೇರಿದಂತೆ ಇತರರು ಇದ್ದರು. ಡಾ.ಎಂ.ಎ.ರಶೀದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮರೆಪ್ಪ ಹಳ್ಳಿ, ಹಾಶಮ್ ಖಾನ್, ಶರಣಗೌಡ ಪೊಲೀಸ್ ಪಾಟೀಲ, ಮಾಣಿ ಕಗೌಡ ಪಾಟೀಲ, ಅಜೀತಗೌಡ ಪೊಲೀಸ್ ಪಾಟೀಲ, ನಿಂಗಣ್ಣ ದೇವಕರ್, ಜಗದೀಶ ಸಿಂಧೆ, ಮ.ಜಲೀಲ್, ಸುಭಾಷ ಪಂಚಾಳ, ಅನ್ವರ ಪಾಶಾ, ಕಾಶಿನಾಥ ಜೋಗಿ, ಸಾಹೇಬಗೌಡ ಬೊಗುಂಡಿ, ಸೂರ್ಯಕಾಂತ ಕೋಬಾಳ, ಡಾ.ಅಹ್ಮದ ಪಟೇಲ, ಕಿರಣ ಚವ್ಹಾಣ, ದಿಲೀಪ ನಾಯಕ, ನಾಗೇಂದ್ರ ನಾಟೀಕರ, ಪೀರ ಪಾಶಾ, ಯಾಕೂಬ ಮರ್ಚಂಟ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.