ಸಾರಾಂಶ
ಗಜೇಂದ್ರಗಡ: ಜನರ ಸಹಕಾರವಿಲ್ಲದೆ ಅಭಿವೃದ್ಧಿ ಕಷ್ಟಕರ. ಎಲ್ಲರ ಸಹಕಾರದಿಂದ ಗಜೇಂದ್ರಗಡ ಸುಂದರ ಪಟ್ಟಣವಾಗಿ ಬೆಳೆದಿದೆ. ಅವಧಿ ಮುಗಿದಿದೆ ಎಂದು ಜನಸೇವೆ ಕೈಬಿಡಬೇಡಿ. ನನ್ನ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಜನಸಂಖ್ಯೆ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಿದ್ದು, ಪಟ್ಟಣಕ್ಕೆ ಸುತ್ತಲಿನ ತಾಲೂಕುಗಳ ಜನರು ಇಲ್ಲಿಗೆ ಬರುತ್ತಾರೆ.ಪುರಸಭೆ ಸದಸ್ಯರಾಗಿ ಆಯ್ಕೆಯಾದ ಸರ್ವ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಿದ್ದಿರಿ. ಜನರ ಸಹಕಾರವಿಲ್ಲದೆ ಅಭಿವೃದ್ಧಿ ಕಾರ್ಯ ನಡೆಸುವುದು ಕಷ್ಟ. ಆದರೆ ಪುರಸಭೆ ಆಡಳಿತಕ್ಕೆ ಜನತೆಯ ಸಹಕಾರ ನೀಡಿದ್ದರಿಂದ ಸುಂದರ ಪಟ್ಟಣವಾಗಿ ಗಜೇಂದ್ರಗಡ ನಿರ್ಮಾಣವಾಗಿದೆ. ಈ ಅವಧಿಯ ಕೊನೆಯ ಸಭೆ ಆಗಬಹುದಾಗಿದ್ದು, ಅವಧಿ ಮುಗಿದಿದೆ ಎಂದು ಸೇವೆ ನಿಲ್ಲಿಸಬೇಡಿ. ನನ್ನ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.ಗಜೇಂದ್ರಗಡ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸೂಕ್ತ ಕ್ರಮಕ್ಕೆ ಮುಂದಾದರೆ ಪಟ್ಟಣವು ಮತ್ತಷ್ಟು ಅಭಿವೃದ್ಧಿಗೆ ಆಗಲಿದೆ ಎಂದು ಸದಸ್ಯ ರಾಜು ಸಾಂಗ್ಲೀಕರ ಮನವಿ ಮಾಡಿದರು. ಪುರಸಭೆಯಲ್ಲಿ ಕಳೆದ ೨೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೀರು ಸರಬರಾಜು ಸಿಬ್ಬಂದಿಗೆ ಪರಿಷ್ಕೃತ ವೇತನ ನೀಡುವಂತೆ ಸದಸ್ಯ ಶಿವರಾಜ ಘೋರ್ಪಡೆ ಆಗ್ರಹಿಸಿದರು.ಪಟ್ಟಣದ ಹೊರವಲಯದಲ್ಲಿ ಗದಗ ರಸ್ತೆಯಲ್ಲಿರುವ ಹಳ್ಳದ ಪಕ್ಕದಲ್ಲಿ ಬಂಜಾರ ಸಮಾಜದ ಜನರು ಶವಸಂಸ್ಕಾರ ಮಾಡುತ್ತಾ ಬಂದಿದ್ದು, ಅದರ ಪಕ್ಕದಲ್ಲಿ ಖಾಸಗಿ ವ್ಯಕ್ತಿಗಳ ಜಾಗ ಇರುವುದರಿಂದ ತೊಂದರೆ ಆಗುತ್ತಿದೆ. ಬೀದಿದನ ಹಾಗೂ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಬೀದಿದೀಪಗಳನ್ನು ಅಳವಡಿಸುವಂತೆ, ಚರಂಡಿ ಸ್ವಚ್ಛತೆ ಸೇರಿ ಸಣ್ಣಪುಟ್ಟ ಸಮಸ್ಯೆಗಳಿಗೆ ಹಲವು ಬಾರಿ ತಿಳಿಸಿ, ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ದೂರುಗಳನ್ನು ಆಲಿಸಿದ ಶಾಸಕರು, ಯಾವುದೇ ದೊಡ್ಡ ಸಮಸ್ಯೆಗಳ ಕುರಿತು ದೂರುಗಳಿಲ್ಲ. ಸಣ್ಣ ಸಣ್ಣ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಹೇಗೆ ಎಂದು ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.ಪುರಸಭೆ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಸದಸ್ಯರಾದ ಲೀಲಾ ಸವಣೂರ, ಲಕ್ಷ್ಮೀ ಮುಧೋಳ, ದ್ರಾಕ್ಷಾಯಿಣಿ ಚೋಳಿನ, ದೀಪಾ ಗೌಡರ, ಕೌಸರಬಾನು ಹುನಗುಂದ, ವಿಜಯಾ ಮಳಗಿ, ಸುಜಾತಾಬಾಯಿ ಶೀಂಗ್ರಿ, ಮುರ್ತುಜಾ ಡಾಲಾಯತ್, ರೂಪೇಶ ರಾಠೋಡ, ವೀರಪ್ಪ ಪಟ್ಟಣಶೆಟ್ಟಿ, ಶರಣಪ್ಪ ಉಪ್ಪಿನಬೆಟಗೇರಿ, ವೆಂಕಟೇಶ ಮುದಗಲ್, ಯು.ಆರ್. ಚನ್ನಮ್ಮನವರ, ವೈ.ಬಿ. ತಿರಕೋಜಿ, ಮುದಿಯಪ್ಪ ಮುಧೋಳ, ಮೂಕಪ್ಪ ನಿಡಗುಂದಿ, ಉಮೇಶ ರಾಠೋಡ, ರಫೀಕ್ ತೋರಗಲ್, ಬಸವರಾಜ ಹೂಗಾರ, ಮುತ್ತಣ್ಣ ಮ್ಯಾಗೇರಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಬಿ. ಮಲ್ಲಿಕಾರ್ಜುನಯ್ಯ, ಸಿ.ಡಿ. ದೊಡ್ಡಮನಿ, ಗುರಪ್ಪ ಪಟ್ಟಣಶೆಟ್ಟಿ, ಶಿವು ಇಲಾಳ, ರಾಘವೇಂದ್ರ ಮಂತಾ, ಪಿ.ಎನ್. ದೊಡ್ಡಮನಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.ಅಧಿಕಾರಿಗಳಿಗೆ ಗದರಿದ ಶಾಸಕಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವಂತೆ ೫ನೇ ತಿಂಗಳಲ್ಲಿ ಅರ್ಜಿ ನೀಡಿದ್ದಾರೆ. ಇಷ್ಟು ದಿನ ಏನು ಮಾಡಿದ್ದಿರಿ? ಎಷ್ಟು ದಿನಗಳಲ್ಲಿ ಮಾಡಿಸುತ್ತಿರಿ ಎಂದು ಪುರಸಭೆ ಅಧಿಕಾರಿ ವರ್ಗಕ್ಕೆ ಶಾಸಕ ಜಿ.ಎಸ್. ಪಾಟೀಲ ಗದರಿದ ಪ್ರಸಂಗ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))