ಜನರ ಬವಣೆ ಅರಿತವರಿಂದ ಮಾತ್ರ ಅಭಿವೃದ್ಧಿ ಸಾಧ್ಯ-ಶಾಸಕ ಬಣಕಾರ

| Published : Apr 27 2024, 01:18 AM IST

ಜನರ ಬವಣೆ ಅರಿತವರಿಂದ ಮಾತ್ರ ಅಭಿವೃದ್ಧಿ ಸಾಧ್ಯ-ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ ನನಗೆ ಹೇಗೆ ಬೆಂಬಲ ನೀಡಿ ನನ್ನನ್ನು ಹೇಗೆ ಗೆಲ್ಲಿಸಿದಿರೋ ಹಾಗೇ ಈಗ ಆನಂದ ಅವರಿಗೆ ಮತ ನೀಡುವ ಮೂಲಕ ಒಬ್ಬ ಯುವ ನಾಯಕನ್ನು ನಿಮ್ಮ ಕ್ಷೇತ್ರದ ಜನತೆಯ ಸೇವೆಗೆ ಅಣಿಗೊಳಿಸೋಣ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಜನರ ಬವಣೆ ಅರಿತವರು ಮಾತ್ರ ಜನರ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯ. ಅಂತಹ ಯುವ ನಾಯಕರಲ್ಲಿ ಆನಂದ ಒಬ್ಬರು. ವಿಧಾನಸಭಾ ಚುನಾವಣೆಯಲ್ಲಿ ನನಗೆ ಹೇಗೆ ಬೆಂಬಲ ನೀಡಿ ನನ್ನನ್ನು ಹೇಗೆ ಗೆಲ್ಲಿಸಿದಿರೋ ಹಾಗೇ ಈಗ ಆನಂದ ಅವರಿಗೆ ಮತ ನೀಡುವ ಮೂಲಕ ಒಬ್ಬ ಯುವ ನಾಯಕನ್ನು ನಿಮ್ಮ ಕ್ಷೇತ್ರದ ಜನತೆಯ ಸೇವೆಗೆ ಅಣಿಗೊಳಿಸೋಣ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರ ತಾಲೂಕಿನ ಹಿರೆಕೋಣ್ತಿ ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚನೆ ನಡೆಸಿ ಮಾತನಾಡಿದರು.ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬ ಸುಳ್ಳು ಸುದ್ದಿಗಳನ್ನು ಕೆಲವರು ಹಬ್ಬಿಸುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಗ್ಯಾರಂಟಿ ಯೋಜನೆಯ ಲಾಭ ಪಡೆದವರಲ್ಲಿ ಅವರೇ ಮೊದಲಿಗರಾಗಿದ್ದಾರೆ. ಅಂತವರ ಮಾತಿಗೆ ಕಿವಿ ಕೊಡದೇ ವಾಸ್ತವಿಕತೆಗೆ ಗಮನಹರಿಸಿ ನಿಮ್ಮ ಕುಟುಂಬದ ಆರ್ಥಿಕ ಹೊರೆ ಕಡಿಮೆ ಮಾಡಿ ನಿಮ್ಮ ಕುಟುಂಬ ಸದೃಢಪಡಿಸುವಂತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಆನಂದ ಅವರನ್ನು ಗೆಲ್ಲಿಸಬೇಕು ಎಂದರು.ಈ ಸಂದರ್ಭದಲ್ಲಿ ಹಿರೇಕೆರೂರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ರಮೇಶ ಮಡಿವಾಳರ, ಷಣ್ಮುಖಯ್ಯ ಮಳಿಮಠ್, ಶಿವರಾಜ ಹರಿಜನ್, ಮಲ್ಲಿಕಾರ್ಜೂನ ಬುರಡಿಕಟ್ಟಿ, ಸಿದ್ದುನಗೌಡ ನರೇಗೌಡ್ರ, ಸಿದ್ದಣ್ಣ ಹಂಪಣನವರ, ದತ್ತಾತ್ರಯ ರಾಯ್ಕರ ಹಾಗೂ ಪಕ್ಷದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.