ಸಾರಾಂಶ
ಮಸ್ಕಿಯ ಎಪಿಎಂಸಿ ಉಪ ಮಾರುಕಟ್ಟೆಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಆವರಣದಲ್ಲಿ 68 ಲಕ್ಷ ವೆಚ್ಚದ ಸಿಸಿ ರಸ್ತೆ, ಕಾಂಪೌಂಡ್ ಹಾಗೂ ಚರಂಡಿ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು ಸರ್ಕಾರ ಯಾವತ್ತು ರೈತರ ಪರವಾಗಿದೆ ಎಂದರು.
ರೈತರಿಗೆ ಬೇಕಾದ ಸಕಲ ಸೌಲತ್ತುಗಳು ನೀಡಲಾಗುವುದು. ಇಲ್ಲಿನ ಎಪಿಎಂಸಿಗೆ ಅಗತ್ಯಮೂಲ ಸೌಲಭ್ಯಗಳನ್ನು ಒದಗಿಸಿ ರೈತರಿಗೆ ಹಾಗೂ ವರ್ತಕರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳುವುದಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಮುಖಂಡರಾದ ಶ್ರೀಶೈಲಪ್ಪ ಬ್ಯಾಳಿ, ಅಂದಾನಪ್ಪ ಗುಂಡಳ್ಳಿ, ಎಂ.ಅಮರೇಶ್, ಶ್ರೀಶೈಲಪ್ಪ ಸಜ್ಜನ್, ದೊಡ್ಡಪ್ಪ ಕಡಬೂರು, ಶರಣಬಸವ ಮಟ್ಟೂರ್, ನಾರಾಯಣಪ್ಪ ಕಾಸ್ಲಿ, ಕೃಷ್ಣ ಡಿ, ಚಿಗರಿ ಸೇರಿ ಅನೇಕರಿದ್ದರು.