ದಾಯಾದಿ ಕಲಹ, ದಯಾಮರಣಕ್ಕೆ ಕೋರಿಕೆ

| Published : Aug 22 2024, 12:56 AM IST

ಸಾರಾಂಶ

ಹಲ್ಲೆ ದೂರು ದಾಖಲಿಸಿಕೊಳ್ಳಲು ಕುಡಚಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಮಗೆ ನ್ಯಾಯ ಕೊಡಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಹಲ್ಲೆಗೊಳಗಾದ ವ್ಯಕ್ತಿ ಕುಟುಂಬ ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶೌಚಾಲಯದ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ, ಹಲ್ಲೆಗೊಳಗಾದವರ ದೂರು ದಾಖಲಿಸಿಕೊಳ್ಳಲು ಕುಡಚಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಮಗೆ ನ್ಯಾಯ ಕೊಡಿ ಇಲ್ಲವೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಹಲ್ಲೆಗೊಳಗಾದ ವ್ಯಕ್ತಿ ಕುಟುಂಬ ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ‌‌ ಗ್ರಾಮದಲ್ಲಿ ನಡೆದಿದ್ದ ವಸಂತ ಕಾಂಬಳೆ, ಭೀಮಪ್ಪ ಕಾಂಬಳೆ, ಅಶೋಕ ಹಾಗೂ ಪಾರೇಶ ಕಾಂಬಳೆ ಎಂಬುವವರು ಹಲ್ಲೆ ನಡೆಸಿದ್ದು, ದೂರು ದಾಖಲಿಸಲು ಹೋದರೆ ಪೊಲೀಸರು ದಾಖಲಿಸಿಕೊಳ್ಳುತ್ತಿಲ್ಲ ಎಂದು ತಮ್ಮಣ್ಣ ಕಾಂಬಳೆ ಹಾಗೂ ಕುಟುಬಸ್ಥರು ಆರೋಪಿಸಿದ್ದಾರೆ.