ಸಾರಾಂಶ
ಬೀರೂರು, ಛಾಯಗ್ರಹಣ ಜೀವನದ ಪ್ರತಿಯೊಂದು ಕ್ಷಣಗಳನ್ನು, ಭಾವನೆಗಳನ್ನು ಹಾಗೂ ಸಾಂಸ್ಕೃತಿಕ ವೈವಿದ್ಯತೆಯನ್ನು ಸೆರೆ ಹಿಡಿಯುವ ಮೂಲಕ ಜಗತ್ತಿನ ನೆನಪುಗಳನ್ನು ಹಂಚಿಕೊಳ್ಳಲು ಸಹಾಯಕ ಎಂದು ಕಡೂರು ತಾಲೂಕು ಛಾಯಗ್ರಾಹಕರ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.
ವಿಶ್ವ ಛಾಯಗ್ರಹಣ ದಿನಾಚರಣೆ ಅಂಗವಾಗಿ ಸದಸ್ಯರಿಗೆ ಸಿಹಿ ಸಂಭ್ರಮ
ಕನ್ನಡಪ್ರಭ ವಾರ್ತೆ, ಬೀರೂರು.ಛಾಯಗ್ರಹಣ ಜೀವನದ ಪ್ರತಿಯೊಂದು ಕ್ಷಣಗಳನ್ನು, ಭಾವನೆಗಳನ್ನು ಹಾಗೂ ಸಾಂಸ್ಕೃತಿಕ ವೈವಿದ್ಯತೆಯನ್ನು ಸೆರೆ ಹಿಡಿಯುವ ಮೂಲಕ ಜಗತ್ತಿನ ನೆನಪುಗಳನ್ನು ಹಂಚಿಕೊಳ್ಳಲು ಸಹಾಯಕ ಎಂದು ಕಡೂರು ತಾಲೂಕು ಛಾಯಗ್ರಾಹಕರ ಸಂಘದ ಅಧ್ಯಕ್ಷ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.ಪಟ್ಟಣದ ಶಿವಗಂಗಾ ಪೊಟೋ ಸ್ಟುಡಿಯೋದಲ್ಲಿ ಮಂಗಳವಾರ 185ನೇ ವಿಶ್ವ ಛಾಯಗ್ರಹಣ ದಿನಾಚರಣೆಗೆ ಸಂಘದ ಸದಸ್ಯರೊಳಗೂಡಿ ಕೇಕ್ ಕತ್ತರಿಸಿ ಸಿಹಿ ಹಂಚಿ ಮಾತನಾಡಿದರು. ಛಾಯಾಗ್ರಹಣದ ಕಲೆಯನ್ನು ಗೌರವಿಸುವ ಮತ್ತು ಗುರುತಿಸುವುದು ಮಹತ್ವದ ಕೆಲಸ. ನಾವೆಲ್ಲರೂ ನಮ್ಮ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದರೆ ಅಲ್ಲಿ ಭಗವಂತ ನಮಗೆ ಸಮೃದ್ಧಿ ಜೀವನ ಮತ್ತು ಪ್ರಖ್ಯಾತಿ ನೀಡುವುದರಲ್ಲಿ ಸಂಶಯವಿಲ್ಲ. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ, ನಿಷ್ಠೆ ತೋರೋಣ ಎಂದು ಸಲಹೆ ನೀಡಿದರು.ಈ ಸಂಧರ್ಭದಲ್ಲಿ ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜಯಚಂದ್ರ, ತಾಲೂಕು ಕಾರ್ಯದರ್ಶಿ ಹೇಮಂತ್ ಬಾಬು, ರೇಣುಕಪ್ಪ, ಜನಾರ್ಧನ್, ರಘುನಾಥ್, ಮಧುಕುಮಾರ್, ಮಂಜುನಾಥ್, ಅಜಯ್, ನಟರಾಜ್, ವಸಂತ್, ಗಿರೀಶ್, ಮೋಹನ್ ಸೇರಿದಂತೆ ಮತ್ತಿತರರು ಇದ್ದರು.20 ಬೀರೂರು 2
ಬೀರೂರು ಪಟ್ಟಣದ ಶಿವಗಂಗಾ ಪೊಟೋ ಸ್ಟುಡಿಯೋದಲ್ಲಿ ಮಂಗಳವಾರ 185ನೇ ವಿಶ್ವ ಛಾಯಗ್ರಹಣ ದಿನಾಚರಣೆ ಅಂಗವಾಗಿ ತಾಲ್ಲೂಕು ಛಾಯಗ್ರಾಹಕರ ಸಂಘದ ಪದಾಧಿಕಾರಿಗಳು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.