ಸಾರಾಂಶ
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ವರ್ಷಾವಧಿ ಮಹೋತ್ಸವದಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಕಾಳಹಸ್ತಾಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಬೀದಿ ಬದಿಯ ಸಾಲು ಮಾವಿನ ಮರಗಳಂತೆ ಸ್ವಯಂ ಸೇವಕರು ನಿಸ್ವಾರ್ಥದಿಂದ ಸೇವೆ ಸಲ್ಲಿಸುವವರು. ಅವರ ಸೇವೆಗೆ ನಿವೃತ್ತಿ ಎಂಬುದಿಲ್ಲ. ಇಂತಹ ಸಮರ್ಪಣಾ ಭಾವದ ಸ್ವಯಂ ಸೇವಕರಿಂದಲೇ ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯುವ ಐದು ದಿನಗಳ ವರ್ಷಾವಧಿ ಮಹೋತ್ಸವದಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ನವಮುಂಬೈ ಪನ್ವೇಲ್ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಉಪಾಧ್ಯಕ್ಷ ಸತೀಶ್ ಆಚಾರ್ಯ, ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಪಿ. ಅಶೋಕ್ ಕಾಮತ್ ಶುಭ ಹಾರೈಸಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಕ್ಷೇತ್ರದ ಆಡಳಿತ ಮೊಕ್ತೇಸರ ಪುರೋಹಿತ್ ಜಯಕರ ಆಚಾರ್ಯ ಮಾತನಾಡಿ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸಭಾಭವನವನ್ನು ಜೂನ್‌ನೊಳಗೆ ಲೋಕಾರ್ಪಣೆಗೊಳಿಸುವ ಗುರಿ ಇರಿಸಿಕೊಂಡಿದ್ದು ಸಹಕರಿಸುವಂತೆ ವಿನಂತಿಸಿದರು.
ಸನ್ಮಾನ : ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಮರದ ತಿರುಗುವ ಮುಚ್ಚಿಗೆಯನ್ನು ನಿರ್ಮಿಸಿದ ಶಿಲ್ಪಿ ಸುದರ್ಶನ ಆಚಾರ್ಯ, ಇಸ್ರೊ ತಂತ್ರಜ್ಞ ಸಂಪತ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು ಹಾಗೂ ಎಲಿಯ ನಡುಗೋಡು ಕೂಡುವಳಿಕೆ ಮೊಕ್ತೇಸರ ಸುಂದರ ಆಚಾರ್ಯ, ಸ್ವರ್ಣಕುಸುರಿ ಕೆಲಸಗಾರ ಸತೀಶ ಆಚಾರ್ಯ, ವಿಕಲಚೇತನ ವಿದ್ಯಾರ್ಥಿ, ಚಿತ್ರಕಲಾವಿದ ಕೌಶಿಕ್ ಆಚಾರ್ಯ, ಅಯೋಧ್ಯೆ ಕರಸೇವೆಯಲ್ಲಿ ಪಾಲ್ಗೊಂಡ ಸೀತಾರಾಮ ಆಚಾರ್ಯ ಹಾಗೂ ಝೀ ಕನ್ನಡ ವಾಹಿನಿಯ ಸರಿಗಮಪದ ಸೆಮಿಫೈನಲ್ ಸ್ಪರ್ಧಿ ಯಶವಂತ ಆಚಾರ್ಯ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಆಶಿತಾ ಆಚಾರ್ಯ ಹಾಗೂ ಅನುಚೇತ್ ಮೂಲ್ಯ ಅವರಿಗೆ ಸುನಂದ ಭಾಸ್ಕರ ಆಚಾರ್ಯ ದತ್ತಿನಿಧಿ ನೀಡಿ ಗೌರವಿಸಲಾಯಿತು. ಶೇ. 100 ಶಿಸ್ತುಕಾಣಿಕೆ ಸಲ್ಲಿಸಿದ ಮೊಕ್ತೇಸರರು ಹಾಗೂ ಕಾಣಿಕೆ ಡಬ್ಬಿಯಲ್ಲಿ ಅತೀ ಹೆಚ್ಚು ಧನ ಸಂಗ್ರಹಿಸಿದವರನ್ನು ಪುರಸ್ಕರಿಸಲಾಯಿತು. ಮೊಕ್ತೇಸರ ಬಾಲಕೃಷ್ಣ ಆಚಾರ್ಯ ವಿವರ ನೀಡಿದರು. ವೇದಿಕೆಯಲ್ಲಿ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ ಉಪಸ್ಥಿತರಿದ್ದರು. ಮೊಕ್ತೇಸರ ಶಿವರಾಮ ಆಚಾರ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೀಶ್ ಆಚಾರ್ಯ ವಂದಿಸಿದರು. ಧನಂಜಯ ಮೂಡುಬಿದಿರೆ, ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.------------------ಚಿತ್ರ : 18 ಎಂಡಿಬಿ ಕಾಳಿಕಾಂಬಾ