ಸಾರಾಂಶ
ಪ್ರವೇಶೋತ್ಸವ । ಶ್ರೀಶೈಲ ಜಗದ್ಗುರು ಹೇಳಿಕೆ । ಶ್ರೀಗಳ ಪಾದಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪಶರಣರಿಗೆ ಜನ್ಮ ನೀಡಿದ ಶಿಕಾರಿಪುರ ತಾಲೂಕು ಧಾರ್ಮಿಕ, ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಾಗಿದೆ ಎಂದು ಜಗದ್ಗುರು ಪಂಚಾಚಾರ್ಯ ಗುರುಕುಲ ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಂಸ್ಥೆಯ ಶ್ರೀಶೈಲ ಜಗದ್ಗುರುಗಳ ಪಾದಪೂಜೆಯ ಮೂಲಕ ಗುರುವಾರ ಸಂಜೆ ಸರಳವಾಗಿ ನಡೆದ ಸಂಸ್ಥೆಯ ನೂತನ ಸಭಾಂಗದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಅಭಿವೃದ್ದಿಯ ಹರಿಕಾರ ಯಡಿಯೂರಪ್ಪಪನವರ ಕೊಡುಗೆ ಅಪಾರವಾಗಿದ್ದು, ಅದು ಸ್ಮರಣೀಯವಾಗಿದೆ ಎಂದರು.
ಮಲೆನಾಡಿನ ಈ ಪರಿಸರದಲ್ಲಿ ನಮ್ಮ ಸಂಸ್ಥೆ ತಾಂತ್ರಿಕ ಕಾಲೇಜು ಮತ್ತು ಪ್ರೈಮರಿ ಶಾಲೆ ನಡೆಸುತ್ತ ಉತ್ತಮ ಶಿಕ್ಷಣ ನೀಡುತ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ .ಈ ಸಂಸ್ಥೆಯ ಕಟ್ಟಡವನ್ನು ಮೈತ್ರಾದೇವಿ ಯಡಿಯೂರಪ್ಪ ಅವರ ಹೆಸರಲ್ಲಿ ನಿರ್ಮಾಣ ಮಾಡಿರುವದನ್ನು ಸ್ಮರಿಸಿ ಮಕ್ಕಳಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರು ಇನ್ನೂ ಹೆಚ್ಚಿನ ಸೇವೆ ಮಾಡಲಿ ಎಂದು ಹಾರೈಸಿದರು.ಯೋಧ ಮತ್ತು ರೈತ ಈ ದೇಶದ ಎರಡು ಕಣ್ಣುಗಳು.ಪಾಕಿಸ್ತಾನದ ‘ಯೋತ್ಪಾದಕರ ವಿರುದ್ದ ನಮ್ಮ ಸೈನಿಕರು ದಿಟ್ಟ ಹೋರಾಟ ಮಾಡಿ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಇಡೀ ದೇಶವೇ ಅವರಿಗೆ ಬೆನ್ನೆಲುಬಾಗಿ ನಿಂತಿದೆ. ಭಯೋತ್ಪದನೆ ನಿರ್ಮೂಲ ಮಾಡಲು ಎಲ್ಲರಾಷ್ಟ್ರಗಳು ಒಗ್ಗಟ್ಟಾಗಿ ಶ್ರಮಿಶಿದರೆ ಮಾತ್ರ ರಾಷ್ಟ್ರಗಳು ನೆಮ್ಮದಿಯಾಗಿ ಇರಲು ಸಾಧ್ಯ. ಚಿಕ್ಕಂದಿನಿಂದಲೇ ಮಕ್ಕಳು ದೇಶಭಕ್ತಿ, ರಾಷ್ಟ್ರಪ್ರೇಮ ಬೆಳಸಿಕೊಂಡು ಸತ್ಪ್ರಜೆ ಗಳಾಗಿ ಬಾಳಬೇಕು ಎಂದು ತಿಳಿಸಿದರು.
ಶಾಸಕ ಬಿ.ವೈ.ವಿಜಯೇಂದ್ರ ಎಸ್.ಜೆಪಿ ಐಟಿಐನಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಾರ್ಟ್ ಕ್ಲಾಸ್ ಉದ್ಘಾಟಿಸಿ ಆಧುನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಯುಗದಲ್ಲಿ ದ್ರಶ್ಯ ಮಾಧ್ಯಮದಿಂದ ತಾಂತ್ರಿಕ ಕೌಶಲ್ಯತೆ ಮತ್ತು ನೈಪುಣ್ಯತೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಸಂಸದ ಬಿ.ವೈ.ರಾಘವೇಂದ್ರ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ಸಂಸ್ಥೆಯು ತಾಲೂಕಿನಲ್ಲಿ ಪ್ರಪ್ರಥಮವಾಗಿ ತಾಂತ್ರಿಕ ಶಿಕ್ಷಣವನ್ನು ಪ್ರಾರಂಭಿಸಿ ಗ್ರಾಮೀಣ ಭಾಗದಲ್ಲಿ ಯುವಕರಿಗೆ ಉದ್ಯೋಗ ದೊರಕಿಸಿ ಸ್ವಾವಲಂಬಿಗಳಾಗಿ ಅವಕಾಶ ಕಲ್ಪಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮಹಂತ ದೇಶೀಕೇಂದ್ರ ಸ್ವಾಮೀಜಿ, ಮಹಂತದೇಶೀಕೇಂದ್ರ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ಕೋಣಂದೂರು ಮಠದ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಕೆ.ಎಸ್.ಗುರುಮೂರ್ತಿ, ಕಾರ್ಯದರ್ಶಿ ಡಾ.ಮುರಘರಾಜ್,ಪುಟ್ಟರಾಜ ಗೌಡ, ರಾಮನಗೌಡ, ಲತಾ ಯೋಗಿರಾಜ್, ಪ್ರಾಂಶುಪಾಲ ವೆಂಕಟೇಶ್, ಶಾಲಾ ಆಡಳಿತಾಧಿಕಾರಿ ಸುಮಾವಾಣಿ ಹಾಗೂ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.